
ದಿಗ್ಗಜರನ್ನು ಒಟ್ಟಿಗೆ ನೋಡೋದು ಅದೇನೋ ಖುಷಿ. ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಒಂದೇ ವೇದಿಕೆ ಮೇಲೆ ಒಟ್ಟಿಗೆ ಕಾಣಿಸಿಕೊಂಡಾಗ ಫ್ಯಾನ್ಸ್ ಸಂಭ್ರಮ ಡಬಲ್ ಆಗುತ್ತೆ. ಶಿವರಾಜ್ ಕುಮಾರ್, ಸುದೀಪ್, ಯಶ್, ದರ್ಶನ್ ಅವರನ್ನು ಒಟ್ಟಿಗೆ ನೋಡಲು ಫ್ಯಾನ್ಸ್ ಇಷ್ಟಪಡ್ತಾರೆ. ಅದು ಸಾಧ್ಯ ಇಲ್ಲ ಎಂದಾಗ ಎಐ ಫೋಟೋ ಕ್ರಿಯೆಟ್ ಮಾಡಿ ಸಂಭ್ರಮಿಸಿದ್ದೂ ಇದೆ. ಸಿನಿಮಾ ಸೆಲೆಬ್ರಿಟಿಗಳಂತೆ ಕ್ರಿಕೆಟ್ ದಿಗ್ಗಜರನ್ನು ಒಟ್ಟಿಗೆ ನೋಡೋದು ಕ್ರಿಕೆಟ್ ಪ್ರೇಮಿಗಳ ಆಸೆ. ಅದೀಗ ಈಡೇರಿದೆ. ಒಂದೇ ಕಾರ್ ನಲ್ಲಿ ಕೂಲ್ ಕ್ಯಾಪ್ಟನ್ ಎಂದೇ ಪ್ರಸಿದ್ಧಿ ಪಡೆದಿದ್ದ ಎಂ.ಎಸ್. ಧೋನಿ (M.S. Dhoni) ಹಾಗೂ ವಿರಾಟ್ ಕೊಹ್ಲಿ (Virat Kohli) ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದ್ರಲ್ಲಿ ಮತ್ತೊಂದು ವಿಶೇಷ ಅಂದ್ರೆ ವಿರಾಟ್ ಕೊಹ್ಲಿ ಅವರನ್ನು ಧೋನಿ ತಮ್ಮ ಸ್ವಂತ ಕಾರಿನಲ್ಲಿ ತಾವೇ ಡ್ರಾಪ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಧೋನಿಯನ್ನು ಒಟ್ಟಿಗೆ ಒಂದೇ ಟೀಂನಲ್ಲಿ ಮೈದಾನದಲ್ಲಿ ನೋಡೋದು ಸಾಧ್ಯವಿಲ್ಲ. ಧೋನಿ ನಿವೃತ್ತಿಯಾಗಿದ್ದು, ಕೊಹ್ಲಿ ಏಕದಿನ ಪಂದ್ಯವನ್ನು ಮಾತ್ರ ಆಡ್ತಿದ್ದಾರೆ. ಆದ್ರೆ ಈ ಇಬ್ಬರು ಆಟಗಾರರನ್ನು ಮೈದಾನದ ಹೊರಗೆ ಒಟ್ಟಿಗೆ ನೋಡುವ ಅವಕಾಶ ಫ್ಯಾನ್ಸ್ ಗೆ ಸಿಕ್ಕಿದೆ. ತಮ್ಮೂರಿಗೆ ಬಂದವರನ್ನು ಹೇಗೆ ಸ್ವಾಗತಿಸಬೇಕು, ಹೇಗೆ ಆತಿಥ್ಯ ನೀಡ್ಬೇಕು ಅನ್ನೋದನ್ನು ಧೋನಿ ನೋಡಿ ಕಲಿಯಬೇಕು.
ಟೀಂ ಇಂಡಿಯಾ ಅಭಿಮಾನಿಗಳ ಬಳಿ ಬಹಿರಂಗವಾಗಿಯೇ ಕ್ಷಮೆಯಾಚಿಸಿದ ರಿಷಭ್ ಪಂತ್!
ಸದ್ಯ ಟೀಂ ಇಂಡಿಯಾ ಆಟಗಾರರು ರಾಂಚಿಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತಿರುವ ಟೀಂ ಇಂಡಿಯಾ, ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ನವೆಂಬರ್ 30 ರಿಂದ ಏಕದಿನ ಪಂದ್ಯ ಶುರುವಾಗಲಿದೆ. ಮೊದಲ ಪಂದ್ಯ ರಾಂಚಿಯಲ್ಲಿ ನಡೆಯಲಿದೆ. ಇದಕ್ಕೆ ಟೀಂ ಇಂಡಿಯಾ ರಾಂಚಿಗೆ ಆಗಮಿಸಿದೆ. ರಾಂಚಿ, ಎಂ.ಎಸ್. ಧೋನಿ ತವರು. ತಮ್ಮೂರಿಗೆ ಬಂದ ಟೀಂ ಇಂಡಿಯಾ ಆಟಗಾರರನ್ನು ತಮ್ಮ ಫಾರ್ಮ್ ಹೌಸ್ ಗೆ ಆಹ್ವಾನಿಸಿದ್ದ ಧೋನಿ ಭರ್ಜರಿ ಡಿನ್ನರ್ ವ್ಯವಸ್ಥೆ ಮಾಡಿದ್ದರು. ಗೆಟ್ ಟುಗೆದರ್ ಮುಗಿದ್ಮೇಲೆ ಧೋನಿಯೇ, ಕೊಹ್ಲಿಯವರನ್ನು ಡ್ರಾಪ್ ಮಾಡಿದ್ದಾರೆ.
ಧೋನಿ ಮನೆಗೆ ವಿರಾಟ್ ಕೊಹ್ಲಿ, ರಿಷಭ್ ಪಂತ್ , ಋತುರಾಜ್ ಗಾಯಕವಾಡ್ ಸೇರಿದಂತೆ ಕೆಲ ಆಟಗಾರರು ಭೇಟಿ ನೀಡಿದ್ದರು. ಡಿನ್ನರ್ ನಂತ್ರ ಧೋನಿ ತಮ್ಮ ಸ್ವಂತ ಕಾರಿನಲ್ಲಿ ಕೊಹ್ಲಿ ಅವರನ್ನು ಸುತ್ತಾಡಿಸಿದ್ದಾರೆ. ರಾಂಚಿ ತೋರಿಸಿದ್ದಾರೆ. ಡ್ರೈವಿಂಗ್ ಸೀಟ್ ನಲ್ಲಿ ಧೋನಿ ಇರೋದನ್ನು ನೀವು ಕಾಣ್ಬಹುದು. ಪಕ್ಕದ ಸೀಟಿನಲ್ಲಿ ಕುಳಿತಿದ್ದ ಕೊಹ್ಲಿ, ಅಭಿಮಾನಿಗಳಿಗೆ ಕೈ ಬೀಸಿದ್ದಾರೆ. ಕೆಲ ದಿನಗಳ ಹಿಂದೆ ಧೋನಿ ಖರೀದಿ ಮಾಡಿರುವ ಹೊಸ ರೇಂಜ್ ರೋವರ್ ನಲ್ಲಿ ಕೊಹ್ಲಿ ಸುತ್ತಾಡಿಸಿದ್ದಾರೆ. ನಂತ್ರ ಕೊಹ್ಲಿ ಅವರನ್ನು ಹೊಟೇಲ್ ಗೆ ಡ್ರಾಪ್ ಮಾಡಿದ್ದಾರೆ.
ಆರ್‌ಸಿಬಿ ಬೆನ್ನಲ್ಲಿಯೇ 'ಮಾರಾಟಕ್ಕಿದೆ' ಐಪಿಎಲ್‌ನ ಮತ್ತೊಂದು ಫ್ರಾಂಚೈಸಿ!
ಕೊಹ್ಲಿ ಹಾಗೂ ಧೋನಿ ಸ್ನೇಹ ಈಗಿನದ್ದಲ್ಲ. ಅನೇಕ ಬಾರಿ, ಕೊಹ್ಲಿ, ಧೋನಿಯ ಮೇಲೆ ತಮಗಿರುವ ಗೌರವವನ್ನು ಹೇಳಿಕೊಂಡಿದ್ದಾರೆ. ಆದ್ರೆ ಧೋನಿ ಹಾಗೂ ಕೊಹ್ಲಿ ಫ್ಯಾನ್ಸ್ ಮಾತ್ರ ಕಚ್ಚಾಡ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಧೋನಿ ಹಾಗೂ ಕೊಹ್ಲಿ ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿದ ಫ್ಯಾನ್ಸ್, ಈಗಲಾದ್ರೂ ಕಚ್ಚಾಡೋದು ಬಿಡಿ. ಅವರಿಬ್ಬರು ಒಳ್ಳೆ ಫ್ರೆಂಡ್ಸ್ ಅಂತ ಕಮೆಂಟ್ ಮಾಡಿದ್ದಾರೆ. ಧೋನಿ ರೇಂಜ್ ರೋವರ್ ಕಾರ್ ಓಡಿಸೋದನ್ನು ನೋಡಿದ ಫ್ಯಾನ್ಸ್, ಬಾಂಡ್ ಅಂತ ಧೋನಿಯನ್ನು ಹೊಗಳಿದ್ದಾರೆ. ಧೋನಿ 2025ರಲ್ಲಿ 4 ಕೋಟಿಗೂ ಹೆಚ್ಚು ಬೆಲೆಯ ರೇಂಜ್ ರೋವರ್ ಆಟೋಬಯಾಗ್ರಫಿ ಕಾರನ್ನು ಖರೀದಿ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.