ಅಬ್ಬಬ್ಬಾ...! ವಿರಾಟ್‌ ಕೊಹ್ಲಿಯ ಪ್ರತಿ ಟ್ವೀಟ್‌ಗೆ 2.5 ಕೋಟಿ ರೂ!

Published : Feb 24, 2020, 07:40 AM ISTUpdated : Feb 24, 2020, 05:34 PM IST
ಅಬ್ಬಬ್ಬಾ...! ವಿರಾಟ್‌ ಕೊಹ್ಲಿಯ ಪ್ರತಿ ಟ್ವೀಟ್‌ಗೆ 2.5 ಕೋಟಿ ರೂ!

ಸಾರಾಂಶ

ವಿರಾಟ್‌ ಕೊಹ್ಲಿಯ ಪ್ರತಿ ಟ್ವೀಟ್‌ಗೆ .2.5 ಕೋಟಿ!| ಅಮೆರಿಕ ಪತ್ರಿಕೆ ಸಮೀಕ್ಷೆಯಲ್ಲಿ ಕೊಹ್ಲಿ ನಂ.5| ಪ್ರತಿ ಟ್ವೀಟ್‌ಗೆ 6 ಕೋಟಿ ಪಡೆವ ರೊನಾಲ್ಡೋ ನಂ.1

"

ನವದೆಹಲಿ[ಫೆ.24]: ಭಾರತ ಕ್ರಿಕೆಟ್‌ ತಂಡದ ನಾಯಕ, ವಿಶ್ವ ಶ್ರೇಷ್ಠ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರು ಕ್ರಿಕೆಟ್‌ನಲ್ಲಿ ಅಷ್ಟೇ ಅಲ್ಲ ಸಾಮಾಜಿಕ ಜಾಲ ತಾಣದಲ್ಲೂ ಕೋಟಿಗಟ್ಟಲೆ ಹಣ ಸಂಪಾದಿಸುತ್ತಾರೆ. ಟ್ವೀಟರ್‌ನಲ್ಲಿ ಕೊಹ್ಲಿ ಮಾಡುವ ಪ್ರತಿಯೊಂದು ಟ್ವೀಟ್‌ಗೆ 2.5 ಕೋಟಿ ರುಪಾಯಿ ಸಿಗಲಿದೆ.

ಮತ್ತದೆ ತಪ್ಪು ಮಾಡಿದ ಟೀಕೆಗೆ ಗುರಿಯಾದ ವಿರಾಟ್ ಕೊಹ್ಲಿ..!

ಬ್ಲೀಚರ್‌ ರಿಪೋರ್ಟ್‌ ಎನ್ನುವ ಅಮೆರಿಕ ಮೂಲದ ಕ್ರೀಡಾ ವೆಬ್‌ಸೈಟ್‌ವೊಂದು ನಡೆಸಿರುವ ಸಮೀಕ್ಷೆ ಪ್ರಕಾರ ಪ್ರತಿ ಟ್ವೀಟ್‌ಗೆ 2.5 ಕೋಟಿ ರು. ಪಡೆಯುವ ವಿರಾಟ್‌ ಕೊಹ್ಲಿಯವರು 5ನೇ ಸ್ಥಾನದಲ್ಲಿದ್ದಾರೆ. ಪ್ರತಿ ಟ್ವೀಟ್‌ಗೆ 6 ಕೋಟಿ ರು. ಪಡೆಯುವ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ನಂ.1 ಸ್ಥಾನದಲ್ಲಿ ಇದ್ದಾರೆ. ಟ್ವೀಟರ್‌ನಲ್ಲಿ ವಿರಾಟ್‌ 33.8 ಕೋಟಿ ಹಿಂಬಾಲಕರನ್ನು ಹೊಂದಿದ್ದು, ಹಲವು ಕಂಪನಿಗಳ ಪರ ಪ್ರಚಾರ ನಡೆಸಲಿದ್ದಾರೆ. ಅವರ ಟ್ವೀಟ್‌ಗಳಿಗೆ ಲಕ್ಷಾಂತರ ಮಂದಿ ಲೈಕ್‌ ಒತ್ತಲಿದ್ದು, ಹಲವು ಬಾರಿ ರೀಟ್ವೀಟ್‌ ಸಹ ಆಗಲಿದೆ. ಬಿಸಿಸಿಐ ಕೇಂದ್ರ ಗುತ್ತಿಗೆ, ಐಪಿಎಲ್‌ ಸಂಭಾವನೆ, ಜಾಹೀರಾತು ಒಪ್ಪಂದ, ಪ್ರಾಯೋಜಕತ್ವದಿಂದ ಕೋಟಿ ಕೋಟಿ ಸಂಪಾದಿಸುವ ವಿರಾಟ್‌, ಸಾಮಾಜಿಕ ತಾಣಗಳಲ್ಲಿ ಒಂದು ಪೋಸ್ಟ್‌ ಹಾಕಿದರೂ ಅವರ ಖಾತೆಗೆ ದೊಡ್ಡ ಮೊತ್ತ ಹಣ ಸೇರಲಿದೆ.

ರೊನಾಲ್ಡೋ ನಂ.1:

ಕ್ರೀಡಾಪಟುಗಳ ಪೈಕಿ ಪೋರ್ಚುಗಲ್‌ನ ಫುಟ್ಬಾಲ್‌ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಮಾಡುವ ಪ್ರತಿ ಟ್ವೀಟ್‌ಗೆ ಬರೋಬ್ಬರಿ .6 ಕೋಟಿ ಸಿಗಲಿದೆ. 2ನೇ ಸ್ಥಾನದಲ್ಲಿ ಸ್ಪೇನ್‌ನ ಮಾಜಿ ಫುಟ್ಬಾಲಿಗ ಆ್ಯಂಡ್ರೆಸ್‌ ಇನಿಯೆಸ್ಟಾ(.4.24 ಕೋಟಿ), 3ನೇ ಸ್ಥಾನವನ್ನು ಬ್ರೆಜಿಲ್‌ನ ಫುಟ್ಬಾಲಿಗ ನೇಯ್ಮಾರ್‌ (.3.43 ಕೋಟಿ) ಹಾಗೂ 4ನೇ ಸ್ಥಾನವನ್ನು ಅಮೆರಿಕದ ಬಾಸ್ಕೆಟ್‌ಬಾಲ್‌ ತಾರೆ ಲೆಬ್ರಾನ್‌ ಜೇಮ್ಸ್‌ (3.38 ಕೋಟಿ) ಇದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20: ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!
ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ