ಕೆಲ ದಿನಗಳಲ್ಲೇ ಪರೀಕ್ಷೆ ಆರಂಭವಾಗಲಿದೆ. ಈಗಾಗಲೇ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದಾರೆ. ಪರೀಕ್ಷೆ ತಯಾರಾಗುತ್ತಿರುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಸರಳ ಟಿಪ್ಸ್ ನೀಡಿದ್ದಾರೆ.
ಮುಂಬೈ(ಫೆ.23) ಮಾರ್ಚ್ ಬಂದರೆ ಸಾಕು ವಿದ್ಯಾರ್ಥಿಗಳ ಎದೆಯಲ್ಲಿ ಢವಢವ ಶುರುವಾಗುತ್ತದೆ. ಪೋಷಕರಿಗೆ ಇನ್ನಿಲ್ಲದೆ ತಲೆನೋವು ಎದುರಾಗುತ್ತದೆ. ಕಾರಣ ಇಷ್ಟೇ, ಪರೀಕ್ಷೆ. ಇತ್ತ ಸ್ಪೆಷಲ್ ಕ್ಲಾಸ್, ಟ್ಯೂಷನ್ ಸೇರಿದಂತೆ ಎಲ್ಲಾ ಕಸರತ್ತುಗಳು ಚುರುಕುಗೊಳ್ಳುತ್ತದೆ. 100% ರಿಸಲ್ಟ್‌ಗಾಗಿ ಶಿಕ್ಷಕರ ತಯಾರಿ, ಫೋಷಕರ ಆತಂಕ ನೋಡಿದ ಮಕ್ಕಳು ಗಾಬಿರಿ ಬೀಳುವುದು ಖಂಡಿತ. ಹೀಗೆ ಪರೀಕ್ಷೆ ಎದುರಿಸಲು ಸಜ್ಜಾಗಿರುವ ಮಕ್ಕಳು ಹಾಗೂ ಅವರ ಪೋಷಕರಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸರಳ ಟಿಪ್ಸ್ ನೀಡಿದ್ದಾರೆ.
ಇದನ್ನೂ ಓದಿ: ಕ್ರೀಡಾ ಕ್ಷೇತ್ರದ 'ಆಸ್ಕರ್' ಲಾರೆಸ್ ಪ್ರಶಸ್ತಿ ಜಯಿಸಿದ ಸಚಿನ್ ತೆಂಡುಲ್ಕರ್..!.
undefined
ಲ್ಯುಮಿನಸ್ ಪವರ್ ಟೆಕ್ನಾಲಜಿ ವಿಶೇಷ ಅಭಿಯಾನ ಆರಂಭಿಸಿದೆ. #BeExamReady ಅನ್ನೋ ಅಭಿಯಾನದ ಮೂಲಕ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ನಡೆಯುತ್ತಿದೆ. ಇದೀಗ ಲ್ಯುಮಿನಸ್ ಪವರ್ ಟೆಕ್ನಾಲಜಿ ರಾಯಭಾರಿ ಸಚಿನ್ ತೆಂಡುಲ್ಕರ್ ಈ ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ಜೊತೆ ಸಿಹಿ ಕಹಿ ಚಂದ್ರು ಪುತ್ರಿ; ವೈರಲ್ ಫೋಟೋ ಹಿಂದಿನ ಕಥೆ!
ಪರೀಕ್ಷೆ ಎದುರಿಸುವ ಮಕ್ಕಳು ಹಾಗೂ ಪೋಷಕರಿಗೆ ನನ್ನ ಸಂದೇಶ. ಮಗಳು ಅಥವಾ ಮಗ ಯಾರೇ ಆಗಿರಲಿ ನಿಮ್ಮ ಮಕ್ಕಳ ಮೇಲೆ ಫಲಿತಾಂಶದ ಒತ್ತಡ ಹಾಕಬೇಡಿ. ಬೇರೆ ಬೇರಿ ರೀತಿಯಲ್ಲಿ ನೀವು ಒತ್ತಡ ಹಾಕಿದಾಗ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ನಾನು ನನ್ನ ಉದಾಹರಣೆ ನೀಡುತ್ತೇನೆ. ಅಭ್ಯಾಸದ ವೇಳೆ ನನ್ನ ಗುರಿ ಒಂದೇ ಆಗಿರುತ್ತಿತ್ತು. ನಿನ್ನೆಗಿಂತ ಇಂದು ಸುಧಾರಣೆ ಮಾಡಬೇಕು. ಎದುರಾಳಿಗಳ ವಿರುದ್ಧ ಹೋರಾಟ ಮಾಡಬೇಕು ಅನ್ನೋದಕ್ಕಿಂತ ನಾನು ಎಷ್ಟು ನಿನ್ನೆಗಿಂತ ಎಷ್ಟು ಉತ್ತಮವಾಗಿದ್ದೇನೆ ಅನ್ನೋದು ಮುಖ್ಯ. ನನ್ನಲ್ಲಿ ಸುಧಾರಣೆ ಮಾಡುವುದಕ್ಕಿಂತ ಉತ್ತಮ ವಿಧಾನ ಮತ್ತೊಂದಿಲ್ಲ. ನಾನು ಮಕ್ಕಳು ಹಾಗೂ ಪೋಷಕರಿಗೆ ಇದನ್ನೇ ಹೇಳುತ್ತೇನೆ. ನೀವು ಸುಧಾರಣೆಯಾಗಲು ಪ್ರಯತ್ನಿಸಿ. ಸ್ಪರ್ಧೆಯ ಗೀಳಿಗೆ ಬೀಳಬೇಡಿ. ನಿಮ್ಮ ಗುರಿಯನ್ನು ಸೆಟ್ ಮಾಡಿಕೊಳ್ಳಿ, ಅದನ್ನು ಸಾಧಿಸುತ್ತಾ ಹೋಗಿ. ಸ್ಪರ್ಧೆಗೆ ಬಿದ್ದರೆ, ನೀವು ನಿಮ್ಮ ಗುರಿಯನ್ನು ಮರೆಯುತ್ತೀರಿ. ಇತರರ ಟಾರ್ಗೆಟ್ ಚೇಸ್ ಮಾಡಲು ಹೋಗುತ್ತೀರಿ. ಒತ್ತಡ ಹಾಕಬೇಡಿ, ಮನೆಯಲ್ಲಿ ಖುಷಿಯ ವಾತಾವರಣ ನಿರ್ಮಿಸಿ. ಪ್ರಯತ್ನ ಪಡಿ, ಫಲಿತಾಂಶ ಬಂದೇ ಬರುತ್ತೆ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.