ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮುಂಬೈ ಬೀದಿಯಲ್ಲಿ ಸುತ್ತಾಡಿದ್ದಾರೆ. ಯಾವುದೇ ಭದ್ರತೆ ಇಲ್ಲದೆ ಸ್ಕೂಟಿ ಮೂಲಕ ಕೊಹ್ಲಿ ಸ್ಕೂಟಿ ರೈಡ್ ಮಾಡಿದ್ದರೆ, ಅನುಷ್ಕಾ ಶರ್ಮಾ ಕೊಹ್ಲಿ ಹಿಂದೆ ಕೂತ ರೈಡ್ ಎಂಜಾಯ್ ಮಾಡಿದ್ದಾರೆ.
ಮುಂಬೈ(ಆ.20): ಹೆಲ್ಮೆಟ್ ಹಾಕಿ ದಿಢೀರ್ ಯಾವುದೇ ಭದ್ರತೆ ಇಲ್ಲದೆ ಬೈಕ್ ರೈಡ್ ಎಂಜಾಯ್ ಮಾಡುವ ಹವ್ಯಾಸ ಮಾಜಿ ನಾಯಕ ಎಂ ಎಸ್.ಧೋನಿಗೆ ಸಹಜವಾಗಿತ್ತು. ಹಲವು ಬಾರಿ ರಾಂಚಿ ಪೊಲೀಸರು ಧೋನಿಗೆ ಎಚ್ಚರಿಕೆ ಕೂಡ ನೀಡಿದ್ದರು. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಮುಂಬೈ ಬೀದಿಯಲ್ಲಿ ಸ್ಕೂಟಿ ರೈಡ್ ಮಾಡಿದ್ದಾರೆ. ಮುಂಬೈ ಬೀದಿಯಲ್ಲಿ ಕೊಹ್ಲಿ ಸ್ಕೂಟಿ ರೈಡ್ ಮಾಡಿದ್ದರೆ, ಅನುಷ್ಕಾ ಶರ್ಮಾ ಕೊಹ್ಲಿ ಹಿಂದೆ ಕೂತು ರೈಡ್ ಎಂಜಾಯ್ ಮಾಡಿದ್ದಾರೆ. ಕಪ್ಪು ಬಣ್ಣದ ಸುಜುಕಿ ಆ್ಯಕ್ಸೆಸ್ ಸ್ಕೂಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮುಂಬೈ ಬೀದಿ, ಗಲ್ಲಿ ಗಲ್ಲಿ ಸುತ್ತಾಡಿದ್ದಾರೆ. ಇಬ್ಬರು ಕಪ್ಪು ಬಣ್ಣದ ವೇಗಾ ಹೆಲ್ಮೆಟ್ ಧರಿಸಿ ರೈಡ್ ಮಾಡಿದ್ದಾರೆ. ಇನ್ನು ಮುಂಬೈನಲ್ಲಿ ಮಳೆಯಾಗುತ್ತಿರುವ ಕಾರಣ ಬಿಳಿ ಬಣ್ಣದ ಕೊಡೆಯನ್ನು ಹಿಡಿದು ಅನುಷ್ಕಾ ರೈಡ್ ಸವಿ ಅನುಭವಿಸಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸ್ಕೂಟಿ ರೈಡ್ ವಿಡಿಯೋ ವೈರಲ್ ಆಗಿದೆ. ಸ್ಕೂಟಿ ರೈಡ್ ವೇಳೆ ಯಾವುದೇ ಭದ್ರತೆ ಇರುವುದು ಕಾಣಿಸಿಲ್ಲ. ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸ್ಕೂಟಿ ರೈಡ್ ಸವಿಯಲ್ಲಿ ಸುತ್ತಾಡಿದ್ದಾರೋ ಅಥವಾ ಯಾವುದೇ ಜಾಹೀರಾತು ಚಿತ್ರೀಕರಣವೇ ಅನ್ನೋದು ಸ್ಪಷ್ಟವಾಗಿಲ್ಲ ಫೋಟೋಗ್ರಾಫರ್ ವೈರಲ್ ಭಯಾನಿ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಶತಕವಿಲ್ಲದೆ 1,000 ದಿನ ಪೂರೈಸಿದ ವಿರಾಟ್ ಕೊಹ್ಲಿ..!
ಸದ್ಯ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸದಲ್ಲಿದೆ. ಆದರೆ ವಿರಾಟ್ ಕೊಹ್ಲಿ ಜಿಂಬಾಬ್ವೆ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದಾರೆ. ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ವಿರಾಟ್ ಕೊಹ್ಲಿ ವಿಶ್ರಾಂತಿ ಸಮಯವನ್ನು ಉಪಯುಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ. ಜಿಂಬಾಬ್ವೆ ಪ್ರವಾಸದಿಂದ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ ಆಗಸ್ಟ್ 27 ರಿಂದ ಆರಂಭಗೊಳ್ಳಲಿರುವ ಏಷ್ಯಾಕಪ್ ಟೂರ್ನಿಗೆ ಕೊಹ್ಲಿ ವಾಪಸ್ ಆಗಿದ್ದಾರೆ. ಆ.27ರಿಂದ ಸೆ.11ರ ವರೆಗೂ ಯುಎಇನಲ್ಲಿ ಏಷ್ಯಾಕಪ್ ಟಿ20 ಟೂರ್ನಿ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ.
ತಂಡ: ರೋಹಿತ್ ಶರ್ಮಾ(ನಾಯಕ), ಕೆ.ಎಲ್.ರಾಹುಲ್(ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಯಜುವೇಂದ್ರ ಚಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅಶ್‌ರ್‍ದೀಪ್ ಸಿಂಗ್, ಆವೇಶ್ ಖಾನ್.
ಪಾಪಾರಾಜಿಗಳಿಗೆ ಖುಷಿಯಿಂದ ಪೋಸ್ ನೀಡಿದ ಸೆಲೆಬ್ರಿಟಿಗಳು; ಪೋಟೋ ವೈರಲ್
ಭಾರತಕ್ಕೆ ಏಷ್ಯಾಕಪ್, ಟಿ20 ವಿಶ್ವಕಪ್ ಗೆಲ್ಲಿಸಿಕೊಡುವುದು ನನ್ನ ಗುರಿ: ಕೊಹ್ಲಿ
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಂಬರುವ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡುವುದು ತಮ್ಮ ಗುರಿ ಎಂದು ಹೇಳಿದ್ದಾರೆ. ‘ತಂಡಕ್ಕಾಗಿ ನಾನು ಏನು ಬೇಕಿದ್ದರೂ ಸಹ ಮಾಡಲು ಸಿದ್ಧ. ಏಷ್ಯಾಕಪ್, ಟಿ20 ವಿಶ್ವಕಪ್‌ಗಳಲ್ಲಿ ತಂಡವನ್ನು ಗೆಲ್ಲಿಸುವುದು ನನ್ನ ಮುಂದಿರುವ ಗುರಿ’ ಎಂದು ಕೊಹ್ಲಿ ಟೂರ್ನಿಯ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋಟ್ಸ್‌ರ್ ವಾಹಿನಿಗೆ ತಿಳಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಸಾಧಾರಣ ಪ್ರದರ್ಶನ ತೋರಿದ ಕೊಹ್ಲಿಗೆ ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ವಿಶ್ರಾಂತಿ ನೀಡಲಾಗಿದೆ. ಏಷ್ಯಾಕಪ್ ಟಿ20 ವೇಳೆಗೆ ತಂಡಕ್ಕೆ ವಾಪಸಾಗಲು ಅವರು ಎದುರು ನೋಡುತ್ತಿದ್ದಾರೆ. ಕೊಹ್ಲಿ 2019ರ ನವೆಂಬರ್‌ನಿಂದ ಅಂ.ರಾ.ಕ್ರಿಕೆಟ್‌ನಲ್ಲಿ ಶತಕ ಬಾರಿಸಿಲ್ಲ.