Asia Cup 2022: ಬಲಿಷ್ಠ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟ, ಶನಕಾ ಲಂಕಾ ನಾಯಕ

By Naveen KodaseFirst Published Aug 20, 2022, 5:59 PM IST
Highlights

* ಏಷ್ಯಾಕಪ್ ಟೂರ್ನಿಗೆ 20 ಆಟಗಾರರನ್ನೊಳಗೊಂಡ ಶ್ರೀಲಂಕಾ ತಂಡ ಪ್ರಕಟ
* ದಸುನ್ ಶನಕಾ ಶ್ರೀಲಂಕಾ ತಂಡದ ನಾಯಕ
* ಮೊದಲ ಪಂದ್ಯದಲ್ಲಿ ಲಂಕಾಗೆ ಆಫ್ಘಾನ್ ಸವಾಲು

ಕೊಲಂಬೊ(ಆ.20): 2022ರ ಏಷ್ಯಾಕಪ್ ಟೂರ್ನಿಗೆ ಆತಿಥ್ಯವನ್ನು ಹೊಂದಿರುವ ಶ್ರೀಲಂಕಾ ತಂಡವು, ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ 20 ಆಟಗಾರನ್ನೊಳಗೊಂಡ ತಂಡವನ್ನು ಪ್ರಕಟಿಸಿದ್ದು, ದಸುನ್ ಶನಕಾ, ಶ್ರೀಲಂಕಾ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಆಲ್ರೌಂಡರ್ ಚರಿತ್ ಅಸಲಂಕಾ, ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ದ್ವೀಪ ರಾಷ್ಟ್ರದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟು ಹಾಗೂ ರಾಜಕೀಯ ಅಸ್ಥಿರತೆಯಿಂದಾಗಿ ಟೂರ್ನಿಯನ್ನು ಕೊನೆಯ ಕ್ಷಣದಲ್ಲಿ ಯುಎಇಗೆ ಸ್ಥಳಾಂತರಿಸಲಾಗಿದೆ. ಆದರೆ ಏಷ್ಯಾಕಪ್ ಟೂರ್ನಿ ಯುಎಇನಲ್ಲಿ ಆಯೋಜನೆಗೊಂಡಿದ್ದರೂ ಸಹಾ, ಆತಿಥ್ಯದ ಹಕ್ಕು ಶ್ರೀಲಂಕಾವೇ ಹೊಂದಿದೆ. ಇತ್ತೀಚೆಗಿನ ದಿನಗಳಲ್ಲಿ  ಚುಟುಕು ಕ್ರಿಕೆಟ್‌ ಮಾದರಿಯಲ್ಲಿ ಶ್ರೀಲಂಕಾ ತಂಡವು ಅಂತಹ ಗಮನಾರ್ಹ ಪ್ರದರ್ಶನವನ್ನು ತೋರಿಲ್ಲ. ಲಂಕಾ ತಂಡವು ತವರಿನಲ್ಲೇ ಆಸ್ಟ್ರೇಲಿಯಾ ಎದುರು 2-1 ಅಂತರದಲ್ಲಿ ಟಿ20 ಸರಣಿ ಸೋಲು ಅನುಭವಿಸಿತ್ತು. ಆದರೆ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಗೆಲುವುಗಳು ಲಂಕಾ ಪಾಳಯದಲ್ಲಿ ಹೊಸ ಆತ್ಮವಿಶ್ವಾಸವನ್ನು ಹುಟ್ಟುಹಾಕಿದೆ.

ಇದೀಗ ಶ್ರೀಲಂಕಾ ಕ್ರಿಕೆಟ್ ತಂಡವು ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಹೆಚ್ಚಾಗಿ ವನಿಂದು ಹಸರಂಗ, ಭನುಕಾ ರಾಜಪಕ್ಸಾ ಹಾಗೂ ನಾಯಕ ದಸುನ್ ಶನಕಾ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಇದರ ಜತೆಗೆ ಲಂಕಾ ವೇಗದ ಅಸ್ತ್ರ ದುಸ್ಮಂತಾ ಚಮೀರಾ, ಸ್ಪೋಟಕ ಬ್ಯಾಟರ್‌ ಚಮಿಕಾ ಕರುಣರತ್ನೆ ಹಾಗೂ ಯುವ ಮಾಲಿಂಗಾ ಖ್ಯಾತಿಯ ಮತೀಶಾ ಪತಿರಣ ಕೂಡಾ ಸ್ಥಾನ ಪಡೆದಿದ್ದು, ಎಲ್ಲಾ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನ ತೋರಿದರೇ, ಬಲಿಷ್ಠ ತಂಡಗಳಿಗೆ ತಿರುಗೇಟು ನೀಡುವುದು ಕಷ್ಟವೇನಲ್ಲ.

ಶ್ರೀಲಂಕಾ ಕ್ರಿಕೆಟ್ ತಂಡವು ತನ್ನ ಪಾಲಿನ ಮೊದಲ ಪಂದ್ಯದಲ್ಲಿ ಆಪ್ಘಾನಿಸ್ತಾನ ತಂಡದ ಸವಾಲನ್ನು ಎದುರಿಸಲಿದೆ. ಇದೇ ಗುಂಪಿನಲ್ಲಿ ಬಾಂಗ್ಲಾದೇಶ ಕೂಡಾ ಸ್ಥಾನ ಪಡೆದಿದ್ದು, ಅಂತಿಮ ನಾಲ್ಕರಘಟ್ಟ  ಪ್ರವೇಶಿಸಲು, ಲಂಕಾ ತಂಡವು ಆಫ್ಘಾನ್ ಹಾಗೂ ಬಾಂಗ್ಲಾದೇಶ ಎದುರು ಅತ್ಯುತ್ತಮ ಪ್ರದರ್ಶನ ತೋರಬೇಕಿದೆ.

ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಹೀಗಿದೆ ನೋಡಿ

ದಸುನ್ ಶನಕಾ(ನಾಯಕ), ದನುಷ್ಕಾ ಗುಣತಿಲಕ, ಪತುಮ್ ನಿಸ್ಸಾಂಕ, ಕುಸಾಲ್ ಮೆಂಡೀಸ್, ಚರಿತ್ ಅಸಲಂಕಾ, ಭನುಕಾ ರಾಜಪಕ್ಸಾ, ಅಸೀನ್ ಬಾಂದ್ರಾ, ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ಮಹೀಶ್ ತೀಕ್ಷಣ, ಜೆಫ್ರಿ ವೆಂಡರ್ಸೆ, ಪ್ರವೀಣ್ ಜಯವಿಕ್ರಮ, ಚಮಿಕಾ ಕರುಣರತ್ನೆ, ದಿಲ್ಯ್ಷಾನ್ ಮಧುಶನಕ, ಮಹೀಶಾ ಪತಿರಣ, ನುವಾನಿದು ಫರ್ನಾಂಡೋ, ದುಸ್ಮಂತಾ ಚಮೀರ, ದಿನೇಶ್ ಚಾಂಡಿಮಲ್.
 

click me!