ದ್ವಿತೀಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 5 ವಿಕೆಟ್ ಗೆಲುವು, ಸರಣಿ ಗೆದ್ದ ಭಾರತ!

By Suvarna NewsFirst Published Aug 20, 2022, 6:53 PM IST
Highlights

ಜಿಂಬಾಬ್ವೆ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಕೈವಶ ಮಾಡಿದೆ.

ಹರಾರೆ(ಆ.20):  ಏಕದಿನದಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಮುಂದುವರಿದಿದೆ. ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಗೆಲುವು ದಾಖಲಿಸಿದ್ದ ಟೀಂ ಇಂಡಿಯಾ ಇದೀಗ ಜಿಂಬಾಬ್ವೆ ವಿರುದ್ಧವೂ ಅದೇ ಹಾದಿಯಲ್ಲಿದೆ. ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದುಕೊಂಡಿದೆ.  ಮೊದಲ ಏಕದಿನ ಪಂದ್ಯದಲ್ಲಿ ಭಾರತ 10 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತ್ತು. ಇದೀಗ ಎರಡನೇ ಪಂದ್ಯವನ್ನು 25.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ

ಟೀಂ ಇಂಡಿಯಾ ಮತ್ತೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿತ್ತು. ಈ ಮೂಲಕ ಜಿಂಬಾಬ್ವೆ ತಂಡವನ್ನು 161 ರನ್‌ಗಳಿಗೆ ಕಟ್ಟಿ ಹಾಕಿತ್ತು. 162 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ದಿಟ್ಟ ಹೋರಾಟದ ಮೂಲಕ ಸುಲಭ ಗೆಲುವು ದಾಖಲಿಸಿದೆ. ಚೇಸಿಂಗ್ ವೇಳೆ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕ ಕೆಎಲ್ ರಾಹುಲ್ ಕೇವಲ 1 ರನ್ ಸಿಡಿಸಿ ಔಟಾದರು. ಇದು ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣಾಗಿತ್ತು. ಆದರೆ ಶಿಖರ್ ಧವನ್ ಹಾಗೂ ಶುಬ್‌ಮನ್ ಗಿಲ್ ಜೊತೆಯಾಟದಿಂದ ಚೇತರಿಸಿಕೊಂಡಿತು. ಶಿಖರ್ ಧವನ್ ಬಿರುಸಿನ ಹೊಡೆತಕ್ಕೆ ಮುಂದಾದರು. ಹೀಗಾಗಿ 21 ಎಸೆತದಲ್ಲಿ 4 ಬೌಂಡರಿ ಮೂಲಕ 33 ರನ್ ಸಿಡಿಸಿದರು.

Asia Cup ಟೂರ್ನಿಗೂ ಮುನ್ನ ಪಾಕ್‌ ತಂಡಕ್ಕೆ ಬಿಗ್‌ ಶಾಕ್‌, ಸ್ಟಾರ್ ವೇಗಿ ಔಟ್..!

ಇಶಾನ್ ಕಿಶನ್ ಕೇವಲ 6 ರನ್ ಸಿಡಿಸಿ ಔಟಾದರು. ಶುಭಮನ್ ಗಿಲ್ 34 ಎಸೆತದಲ್ಲಿ 6 ಬೌಂಡರಿ ಮೂಲಕ 33 ರನ್ ಸಿಡಿಸಿ ಔಟಾದರು. 97 ರನ್‌ಗಳಿಗೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡಿತು. ಆದರೆ ಸುಲಭ ಟಾರ್ಗೆಟ್ ಆಗಿದ್ದ ಕಾರಣ ಟೀಂ ಇಂಡಿಯಾ ಚೇಸಿಂಗ್‌ನಲ್ಲಿ ಯಾವುದೇ ಆತಂಕ ಎದುರಾಗಲಿಲ್ಲ. ದೀಪಕ್ ಹೂಡ ಹಾಗೂ ಸಂಜು ಸ್ಯಾಮ್ಸನ್ ಜೊತೆಯಾಟದಿಂದ ಟೀಂ ಇಂಡಿಯಾದ ಗೆಲುವು ಖಚಿತಗೊಂಡಿತು.

ದೀಪಕ್ ಹೂಡ 25 ರನ್ ಸಿಡಿಸಿ ಔಟಾದರು. ಆದರೆ ಸಂಜು ಸ್ಯಾಮ್ಸನ್ ಅಜೇಯ 43 ರನ್ ಸಿಡಿಸಿದರು. ಅಕ್ಸರ್ ಪಟೇಲ್ ಅಜೇಯ 6 ರನ್ ಸಿಡಿಸಿದರು. ಈ ಮೂಲಕ 25.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 167 ರನ್ ಸಿಡಿಸಿತು. ಈ ಮೂಲಕ 5 ವಿಕೆಟ್ ಗೆಲುವು ದಾಖಲಿಸಿತು.
 

click me!