ind vs pak ಪಂದ್ಯದಲ್ಲಿ ಭಾವನಾತ್ಮಕ ಕ್ಷಣ: ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಅಭಿಮಾನಿ VIDEO

Published : Sep 06, 2026, 06:14 PM IST
indian national anthem sings pakistani fan

ಸಾರಾಂಶ

ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದಾಗಲೆಲ್ಲಾ ಅಲ್ಲಿ ಜಿದ್ದಾಜಿದ್ದಿ ಇರುವುದು ಸಹಜ. ಶನಿವಾರ ನಡೆದ 2026ರ ಮಹಿಳಾ ಏಷ್ಯಾ ಕಪ್ ಪಂದ್ಯವೊಂದು ಕೇವಲ ಆಟಕ್ಕಾಗಿ ಮಾತ್ರವಲ್ಲದೆ, ಗಡಿಯಾಚೆಗಿನ ಪ್ರೀತಿ ಮತ್ತು ಗೌರವಕ್ಕಾಗಿ ಸುದ್ದಿಯಲ್ಲಿದೆ.

ದುಬೈ: ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದಾಗಲೆಲ್ಲಾ ಅಲ್ಲಿ ಜಿದ್ದಾಜಿದ್ದಿ ಇರುವುದು ಸಹಜ. ಶನಿವಾರ ನಡೆದ 2026ರ ಮಹಿಳಾ ಏಷ್ಯಾ ಕಪ್ ಪಂದ್ಯವೊಂದು ಕೇವಲ ಆಟಕ್ಕಾಗಿ ಮಾತ್ರವಲ್ಲದೆ, ಗಡಿಯಾಚೆಗಿನ ಪ್ರೀತಿ ಮತ್ತು ಗೌರವಕ್ಕಾಗಿ ಸುದ್ದಿಯಲ್ಲಿದೆ.

ಪಂದ್ಯ ಆರಂಭವಾಗುವ ಮೊದಲು ಉಭಯ ದೇಶಗಳ ರಾಷ್ಟ್ರಗೀತೆಗಳನ್ನು ನುಡಿಸಲಾಯಿತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಜರ್ಸಿ ಧರಿಸಿದ್ದ ಅರ್ಶದ್ ಮೊಹಮ್ಮದ್ ಹನೀಫ್ ಎಂಬ ಅಭಿಮಾನಿ, ಭಾರತದ ರಾಷ್ಟ್ರಗೀತೆ 'ಜನ ಗಣ ಮನ'ವನ್ನು ಅತ್ಯಂತ ಗೌರವ ಮತ್ತು ಉತ್ಸಾಹದಿಂದ ಹಾಡುತ್ತಿರುವುದು ಕಂಡುಬಂದಿದೆ.

ಸ್ಟ್ಯಾಂಡ್‌ನಲ್ಲಿದ್ದ ಇತರ ಭಾರತೀಯ ಅಭಿಮಾನಿಗಳ ಜೊತೆಗೂಡಿ ಅವರು ರಾಷ್ಟ್ರಗೀತೆ ಹಾಡಿದ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಅರ್ಶದ್ ಹನೀಫ್ ಪಾಕಿಸ್ತಾನದ ಪ್ರಸಿದ್ಧ ಕ್ರಿಕೆಟ್ ಅಭಿಮಾನಿಯಾಗಿದ್ದು, ಈ ಹಿಂದೆಯೂ ಹಲವು ಬಾರಿ ಟೀಮ್ ಇಂಡಿಯಾ ಬಗ್ಗೆ ತಮ್ಮ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಸೋಲು-ಗೆಲುವಿನ ಆಚೆಗೂ ಕ್ರೀಡೆ ಹೇಗೆ ಎರಡು ದೇಶಗಳನ್ನು ಒಗ್ಗೂಡಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಇನ್ನು ಪಂದ್ಯದ ಬಗ್ಗೆ ನೋಡುವುದಾದರೆ ಭಾರತದ ಮಹಿಳಾ ತಂಡ ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿ 18.1 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಶ್ರೀ ಚರಣಿ ಕೇವಲ 7 ರನ್ ನೀಡಿ 3 ವಿಕೆಟ್ ಕಬಳಿಸಿ 'ಪಂದ್ಯ ಶ್ರೇಷ್ಠ' ಪ್ರಶಸ್ತಿಗೆ ಭಾಜನರಾದರು. ಈ ಅಲ್ಪ ಮೊತ್ತದ ಗುರಿಯನ್ನು ಭಾರತ ಕೇವಲ 9ನೇ ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ತಲುಪಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Ind Vs Pak: ನಿಮ್ಮ ವಯಸ್ಸೆಷ್ಟು? ಎಂದು ಕೇಳಿದ ಪಾಕಿಸ್ತಾನಿ ಫ್ಯಾನ್‌! ಭಾರತೀಯ ಅಜ್ಜಿ ಕೊಟ್ಟ ಖಡಕ್ ಉತ್ತರಕ್ಕೆ ಬಾಯಿ ಮುಚ್ಚಿಕೊಂಡ!
Ind vs Pak: ಭಾರತದ ಆರ್ಭಟಕ್ಕೆ ಪಾಕ್ ದೂಳಿಪಟ; ಗೆಲುವಿನ ಬೆನ್ನಲ್ಲೇ ಬಯಲಾಯ್ತು ಟೀಮ್ ಇಂಡಿಯಾದ ಆ 'ಮಾಸ್ಟರ್ ಪ್ಲಾನ್'!