ಕೊರೋನಾ ವೈರಸ್‌ನಿಂದ ಬಚಾವಾಗಲು ಮನೆಯಲ್ಲೇ ಇರಿ ಅಂದ್ರೆ ಕ್ರಿಕೆಟ್ ಆಡಲು ಹೋಗಿದ್ದ ಆಟಗಾರರು ಇದೀಗ ಕಂಬಿ ಎಣಿಸುತ್ತಿದ್ದಾರೆ. ಏನಿದು ಘಟನೆ? ಎಲ್ಲಿ ನಡೆದಿದ್ದು? ಈ ಎಲ್ಲಾ ಕುತೂಹಲಗಳಿಗೆ ಇಲ್ಲಿದೆ ನೋಡಿ ಉತ್ತರ.
ಮುಂಬೈ(ಏ.13): ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಕ್ರಿಕೆಟ್ ಆಡುತ್ತಿದ್ದವರನ್ನು ಪೊಲೀಸರು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ. ಸಬ್ ಅರ್ಬನ್ ಮುಂಬೈ ಸಮೀಪ ಈ ಘಟನೆ ನಡೆದಿದ್ದು, ಮೂವರು 'ಆಟಗಾರರು ಕಂ ಆರೋಪಿಗಳು' ಬಂಧನಕ್ಕೊಳಗಾಗಿದ್ದಾರೆ.
ಹೋಂ ಕ್ವಾರಂಟೈನ್‌ಲ್ಲಿದ್ದ ಯುವಕ ಈಜಲು ಹೋಗಿ ಸಾವು
undefined
ವಡಾಲಾ ಪೊಲೀಸ್ ಸ್ಟೇಷನ್ ಅಧಿಕಾರಿಗಳು ಮೂವರನ್ನು ಬಂಧಿಸಿರುವ ವಿಚಾರವನ್ನು ಖಚಿತಪಡಿಸಿದ್ದು, ಇವರೆಲ್ಲ ಶುಕ್ರವಾರ ಮೀಠನಗರ ಮೈದಾನದಲ್ಲಿ ಗುಂಪುಗೂಡಿ ಕ್ರಿಕೆಟ್ ಆಡುತ್ತಿದ್ದರು ಎಂದು ತಿಳಿಸಿದ್ದಾರೆ. ಇದೇ ವೇಳೆ ತಪ್ಪಿಸಿಕೊಂಡ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ.
12 ಸಾವಿರ ಡಾಕ್ಟರ್‌ಗಳ ಜತೆ ಸಮಾಲೋಚನೆ ನಡೆಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್
ಪೊಲೀಸರು ಮುಖೇಶ್ ಜೈಸ್ವಾಲ್(28), ಹರೀಶ್ ಸರೋಜ್(42) ಹಾಗೂ ಆಮನ್ ಖಾನ್(19) ಅವರನ್ನು ಬಂಧಿಸಲಾಗಿದೆ ಎಂದು ಪೋರ್ಟ್ ವಲಯದ ಡಿಸಿಪಿ ರಶ್ಮಿ ಕರಂಡಿಕರ್ ತಿಳಿಸಿದ್ದಾರೆ. ಈ ಮೂವರ ಮೇಲೆ ಐಪಿಸಿ ಸೆಕ್ಷನ್ 188 ಪ್ರಕರಣ(ಕರ್ತವ್ಯ ನಿರತ ಸಿಬ್ಬಂದಿಗಳ ವಿರುದ್ಧ ದುರ್ವರ್ತನೆ) ದಾಖಲು ಮಾಡಲಾಗಿದೆ.
ಕೊರೋನಾ ವೈರಸ್ ಭೀತಿಯಿಂದಾಗಿ ಮಾರ್ಚ್ 24ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ. ಇನ್ನು ಮುಂಬೈನಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು 144 ಸೆಕ್ಷನ್(5 ಅಥವಾ 5ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು ನಿಷೇಧ) ಜಾರಿಗೆ ತಂದಿದ್ದಾರೆ. ಈಗಾಗಲೇ ಮಹಾರಾಷ್ಟ್ರ ಸರ್ಕಾರವು ಕೊರೋನಾ ವೈರಸ್ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್‌ಡೌನ್ ಅವಧಿಯನ್ನು ಏಪ್ರಿಲ್ 30ರವರೆಗೆ ಮುಂದೂಡಿದೆ.