ಕೊರೋನಾ ಎಫೆಕ್ಟ್: ಮನೆ ಕೆಲಸದಲ್ಲಿ ಫುಲ್ ಬ್ಯುಸಿಯಾದ ಅಜಿಂಕ್ಯ ರಹಾನೆ..!

Suvarna News   | Asianet News
Published : Apr 12, 2020, 12:34 PM IST
ಕೊರೋನಾ ಎಫೆಕ್ಟ್: ಮನೆ ಕೆಲಸದಲ್ಲಿ ಫುಲ್ ಬ್ಯುಸಿಯಾದ ಅಜಿಂಕ್ಯ ರಹಾನೆ..!

ಸಾರಾಂಶ

ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಲಾಕ್‌ಡೌನ್ ಬಿಡುವಿನ ಸಮಯವನ್ನು ಮಸ್ತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ರಹಾನೆ ದಿನಚರಿ ಹೇಗಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಮುಂಬೈ(ಏ.12): ಭಾರತ ಕ್ರಿಕೆಟ್‌ ತಂಡದ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಲಾಕ್‌ಡೌನ್‌ ವೇಳೆಯಲ್ಲಿಯೂ ಮನೆಯಲ್ಲಿ ಬ್ಯುಸಿಯಾಗಿದ್ದಾರೆ. ಮನೆಯಲ್ಲಿ ಕಾಲ ಕಳೆಯುವುದಕ್ಕೆ ಹಲವರು ಬೇಸರ ಪಡುತ್ತಿರುವಾಗ ರಹಾನೆ ದಿನವಿಡಿ ಕಾರ‍್ಯನಿರತವಾಗಿದ್ದಾರೆ. 

ಕ್ರಿಕೆಟ್‌ ಆಟಗಾರರಾಗುವುದಕ್ಕೂ ಮುನ್ನ ರಹಾನೆ ಕರಾಟೆ ಕ್ರೀಡೆಯಲ್ಲಿದ್ದರು. ಇದೀಗ ರಹಾನೆ ಪ್ರತಿದಿನ ಮನೆಯಲ್ಲಿ ಕರಾಟೆ ಅಭ್ಯಾಸ, ಪುಸ್ತಕ ಓದುವುದು, ಅಡುಗೆ ಮಾಡುವುದು ಹಾಗೂ ಮಗಳೊಂದಿಗೆ ಆಟವಾಡುವ ಮೂಲಕ ಸಮಯ ಕಳೆಯುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಗಂಭೀರ; ನೆರವಿಗೆ ಧಾವಿಸಿದ ಅಜಿಂಕ್ಯ ರಹಾನೆ!

ಮಗಳು ಆರ್ಯ ಏಳುವುದಕ್ಕಿಂತ ಮೊದಲೇ ಎದ್ದು 30-45 ನಿಮಿಷ ವರ್ಕೌಟ್ ಮಾಡುತ್ತೇನೆ. ಆ ಬಳಿಕ ಕರಾಟೆ ಅಭ್ಯಾಸ ಮಾಡುತ್ತೇನೆ. ಲಾಕ್‌ಡೌನ್‌ನಿಂದಾಗಿ ಮಗಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ. ಆರ್ಯ ನಿದ್ರೆಗೆ ಜಾರಿದ ಬಳಿಕ ಪತ್ನಿ ರಾಧಿಕಾಗೆ ಅಡುಗೆ ಮಾಡಲು, ಕ್ಲೀನ್ ಮಾಡಲು ನೆರವಾಗುತ್ತೇನೆ. ಈ ಎಲ್ಲಾ ಕೆಲಸವನ್ನು ಹಂಚಿಕೊಂಡು ಮಾಡುವ ಮೂಲಕ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದೇವೆ. ಇನ್ನುಳಿದಂತೆ ಸಂಗೀತ ಕೇಳುತ್ತೇನೆ, ಪುಸ್ತಕಗಳನ್ನು ಓದುತ್ತೇನೆಂದು ರಹಾನೆ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ರಹಾನೆ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. 2020ರ ಐಪಿಎಲ್ ಟೂರ್ನಿಗೂ ಮುನ್ನ ಅಜಿಂಕ್ಯ ರಹಾನೆ ರಾಜಸ್ಥಾನ ರಾಯಲ್ಸ್ ತಂಡವನ್ನು ತೊರೆದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೂಡಿಕೊಂಡಿದ್ದರು. ಆದರೆ ಇದೀಗ ಕೊರೋನಾ ವೈರಸ್ ಭೀತಿಯಿಂದಾಗಿ ಐಪಿಎಲ್ ಟೂರ್ನಿಯೂ ಮುಂದೂಡಲ್ಪಟ್ಟಿದೆ. 

ಕೊರೋನಾ ಸಂಕಷ್ಟಕ್ಕೆ  ಹಲವು ಕ್ರೀಡಾ ತಾರೆಯರು ಆರ್ಥಿಕವಾಗಿ ಸ್ಪಂದಿಸಿದ್ದಾರೆ. ಸಚಿನ್ ತೆಂಡುಲ್ಕರ್, ಸುರೇಶ್ ರೈನಾ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವರು PM CARESಗೆ ದೇಣಿಗೆ ನೀಡಿದ್ದಾರೆ. ಇನ್ನು ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ 10 ಲಕ್ಷ ರುಪಾಯಿಗಳ ದೇಣಿಗೆ ನೀಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!
14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!