ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕ್ರಿಕೆಟ್‌ನಲ್ಲಿ ಅವರು ನಿರ್ಮಿಸಿದ್ದ 5 ಅಚ್ಚರಿಯ ದಾಖಲೆಗಳನ್ನು ಇಲ್ಲಿ ವಿವರಿಸಲಾಗಿದೆ. ಈ ದಾಖಲೆಗಳನ್ನು ಸಚಿನ್ ಸೇರಿದಂತೆ ಯಾವೊಬ್ಬ ಭಾರತೀಯ ಕ್ರಿಕೆಟಿಗನಿಗೂ ಮುರಿಯಲು ಸಾಧ್ಯವಾಗಿಲ್ಲ.
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ವಿಡಿಯೋವೊಂದರಲ್ಲಿ ಸ್ವತಃ ನಿಂತು ಓಡಾಲು ವಿನೋದ್ ಕಾಂಬ್ಳಿ ಕಷ್ಟಪಡುವಂತೆ ಕಂಡು ಬಂದಿದೆ. ಇತ್ತೀಚೆಗೆ ವಿನೋದ್ ಕಾಂಬ್ಳಿ ಹಾಗೂ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಸಾಕಷ್ಟು ಸದ್ದು ಮಾಡಿತ್ತು. ಸಚಿನ್ ತೆಂಡುಲ್ಕರ್ ಹಾಗೂ ವಿನೋದ್ ಕಾಂಬ್ಳಿ ಇಬ್ಬರೂ ಬಾಲ್ಯ ಸ್ನೇಹಿತರು ಹಾಗೂ ತಮ್ಮ ಕ್ರಿಕೆಟ್ ಗುರು ರಮಾಕಾಂತ್ ಅರ್ಚೆಕರ್ ಗರಡಿಯಲ್ಲಿ ಪಳಗಿದ ಪ್ರತಿಭಾನ್ವಿತರು. ಈ ಪೈಕಿ ಸಚಿನ್ ತೆಂಡುಲ್ಕರ್ ಕ್ರಿಕೆಟ್ ಲೋಕದ ದೇವರಾಗಿ ಬೆಳೆದು ನಿಂತರೆ, ವಿನೋದ್ ಕಾಂಬ್ಳಿ ಆರಂಭದಲ್ಲಿ ಸಿಕ್ಕ ಯಶಸ್ಸನ್ನು ಸರಿಯಾಗಿ ಬಳಸಿಕೊಳ್ಳದೇ ದುರಂತ ನಾಯಕರಾಗಿ ಹೋದದ್ದು ವಿಪರ್ಯಾಸ.
ಪ್ರತಿಭಾನ್ವಿತ ಎಡಗೈ ಬ್ಯಾಟರ್ ಆಗಿದ್ದ ವಿನೋದ್ ಕಾಂಬ್ಳಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಇದಷ್ಟೇ ಅಲ್ಲದೇ ವಿನೋದ್ ಕಾಂಬ್ಳಿ ನಿರ್ಮಿಸಿದ ಈ 5 ರೆಕಾರ್ಡ್ಸ್‌ಗಳ ಸಮೀಪವೂ ಕ್ರಿಕೆಟ್ ದಂತಕಥೆ ಸಚಿನ್‌ಗೆ ಬರಲು ಸಾಧ್ಯವಾಗಲಿಲ್ಲ ಎನ್ನುವುದು ಅಚ್ಚರಿ ಎನಿಸಿದರೂ ಸತ್ಯ. ಅಷ್ಟಕ್ಕೂ ಯಾವುದವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ವಿನೋದ್ ಕಾಂಬ್ಳಿಗಿಂತ ಕರುಣಾಜನಕವಾಗಿದೆ ಈ ಕ್ರಿಕೆಟಿಗನ ಕಥೆ, ಚಪ್ಪಲಿ ಕೊಳ್ಳೋಕು ಕಾಸಿಲ್ಲ!
1. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗವಾಗಿ ಒಂದು ಸಾವಿರ ರನ್:
undefined
ವಿನೋದ್ ಕಾಂಬ್ಳಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಭರ್ಜರಿಯಾಗಿಯೇ ಆರಂಭಿಸಿದ್ದರು. ಮೊದಲ 7 ಟೆಸ್ಟ್ ಪಂದ್ಯಗಳ ಪೈಕಿ ಕಾಂಬ್ಳಿ 4 ಶತಕ ಸಿಡಿಸಿ ಅಬ್ಬರಿಸಿದ್ದರು. ಈ ಪೈಕಿ ಎರಡು ದ್ವಿಶತಕಗಳು ಸೇರಿದ್ದವು. ಕಾಂಬ್ಳಿ ಕೇವಲ 14 ಟೆಸ್ಟ್ ಇನ್ನಿಂಗ್ಸ್‌ಗಳನ್ನಾಡಿ 1000 ರನ್ ಪೂರೈಸಿದ್ದರು. ಇಂದಿಗೂ ಈ ದಾಖಲೆಯನ್ನು ಬ್ರೇಕ್ ಮಾಡಲು ಸಚಿನ್, ವಿರಾಟ್ ಸೇರಿದಂತೆ ಯಾವೊಬ್ಬ ಭಾರತೀಯ ಕ್ರಿಕೆಟಿಗನಿಗೂ ಸಾಧ್ಯವಾಗಿಲ್ಲ.
2. ದ್ವಿಶತಕ ಬಾರಿಸಿದ ಕಿರಿಯ ಬ್ಯಾಟರ್ ಕಾಂಬ್ಳಿ:
ಎಡಗೈ ಬ್ಯಾಟರ್ ವಿನೋದ್ ಕಾಂಬ್ಳಿ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಅತಿಕಿರಿಯ ಬ್ಯಾಟರ್ ಎನ್ನುವ ಅಪರೂಪದ ದಾಖಲೆ ಹೊಂದಿದ್ದಾರೆ. ಕಾಂಬ್ಳಿ 21 ವರ್ಷ 32 ದಿನಗಳಿದ್ದಾಗ ಟೆಸ್ಟ್ ಕ್ರಿಕೆಟ್‌ನಲ್ಲಿ 223 ರನ್ ಸಿಡಿಸಿದ್ದರು. ಆಗ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಜಗತ್ತಿನ ಮೂರನೇ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದರು.
ಟೀಕಾಕಾರರ ಬಾಯಿ ಮುಚ್ಚಿಸಿದ ವಿನೋದ್ ಕಾಂಬ್ಳಿ; ಬಾಲ್ಯದ ಗೆಳೆಯ ಸಚಿನ್ ಬಗ್ಗೆ ಖಡಕ್ ಮಾತಾಡಿದ ಮಾಜಿ ಕ್ರಿಕೆಟರ್!
3. ಅತಿಹೆಚ್ಚು ಇನ್ನಿಂಗ್ಸ್‌ಗಳನ್ನಾಡಿದ ಬಳಿಕ ಶೂನ್ಯ ಸಂಪಾದನೆ:
ವಿನೋದ್ ಕಾಂಬ್ಳಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭದ ವೃತ್ತಿಜೀವನದ ಟ್ರ್ಯಾಕ್ ರೆಕಾರ್ಡ್ ಅತ್ಯುತ್ತಮವಾಗಿತ್ತು. ಕಾಂಬ್ಳಿ 59 ಇನ್ನಿಂಗ್ಸ್‌ಗಳನ್ನು ಆಡುವವರೆಗೂ ಒಮ್ಮೆಯೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿರಲಿಲ್ಲ. ಈ ರೆಕಾರ್ಡ್ ಕೂಡಾ ಅಚ್ಚಳಿಯದೇ ಉಳಿದಿದೆ. ಆದರೆ ಕೊನೆ ಕೊನೆಗೆ ಶಾರ್ಟ್ ಬಾಲ್ ಆಡಲು ವೈಪಲ್ಯ ಅನುಭವಿಸುವ ಮೂಲಕ ಕಾಂಬ್ಳಿ ಫಾರ್ಮ್ ಕಳೆದುಕೊಂಡು ಆಡುವ ಹನ್ನೊಂದರ ಬಳಗದಿಂದಲೇ ಹೊರಬಿದ್ದರು.
4. ಶತತ ಎರಡು ದ್ವಿಶತಕ ಸಾಧಕ ಕಾಂಬ್ಳಿ:
ವಿನೋದ್ ಕಾಂಬ್ಳಿ ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಎರಡು ದ್ವಿಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಕಾಂಬ್ಳಿ 1993ರಲ್ಲಿ ಜಿಂಬಾಬ್ವೆ ಹಾಗೂ ಇಂಗ್ಲೆಂಡ್ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಎರಡು ದ್ವಿಶತಕ ಸಿಡಿಸಿದ್ದರು. ಇದಾದ ಬಳಿಕ ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ಕೂಡಾ ಈ ಸಾಧನೆ ಮಾಡಿದ್ದಾರೆ. ಆದರೆ ಸಚಿನ್‌ಗೆ ಅದು ಸಾಧ್ಯವಾಗಲೇ ಇಲ್ಲ.
5. ಹುಟ್ಟುಹಬ್ಬದಂದು ಶತಕ ಸಿಡಿಸಿದ ಜಗತ್ತಿನ ಮೊದಲ ಬ್ಯಾಟರ್ ಕಾಂಬ್ಳಿ:
ವಿನೋದ್ ಕಾಂಬ್ಳಿ ತಮ್ಮ ಹುಟ್ಟುಹಬ್ಬದಂದೇ ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಜಗತ್ತಿನ ಮೊದಲ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ವಿನೋದ್ ಕಾಂಬ್ಳಿ ಜನವರಿ 18, 1993ರಲ್ಲಿ ತಮ್ಮ ಬರ್ತ್ ಡೇ ದಿನವೇ ಈ ದಾಖಲೆ ನಿರ್ಮಿಸಿದ್ದರು. ಇದಾದ ಬಳಿಕವಷ್ಟೇ ಸಚಿನ್ ತೆಂಡುಲ್ಕರ್, ಸನತ್ ಜಯಸೂರ್ಯ ಅವರಂತಹ ಬ್ಯಾಟರ್‌ಗಳು ತಮ್ಮ ಹುಟ್ಟುಹಬ್ಬದಂದು ಶತಕ ಸಿಡಿಸಿದ್ದರು.