ವಿನೋದ್ ಕಾಂಬ್ಳಿಗಿಂತ ಕರುಣಾಜನಕವಾಗಿದೆ ಈ ಕ್ರಿಕೆಟಿಗನ ಕಥೆ, ಚಪ್ಪಲಿ ಕೊಳ್ಳೋಕು ಕಾಸಿಲ್ಲ!

Published : Dec 16, 2024, 03:54 PM ISTUpdated : Dec 16, 2024, 03:59 PM IST
ವಿನೋದ್ ಕಾಂಬ್ಳಿಗಿಂತ ಕರುಣಾಜನಕವಾಗಿದೆ ಈ ಕ್ರಿಕೆಟಿಗನ ಕಥೆ, ಚಪ್ಪಲಿ ಕೊಳ್ಳೋಕು ಕಾಸಿಲ್ಲ!

ಸಾರಾಂಶ

ವಿನೋದ್ ಕಾಂಬ್ಳಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇದೇ ರೀತಿ ನ್ಯೂಜಿಲೆಂಡ್‌ನ ಲೂ ವಿನ್ಸೆಂಟ್ ಕೂಡ ಬೀದಿಪಾಲಾಗಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದ ವಿನ್ಸೆಂಟ್ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು. ಖಿನ್ನತೆ, ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ ವಿನ್ಸೆಂಟ್ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಿಳಿಸಿದ್ದಾರೆ.

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಲ್ಲಿರುವ ಮಾಜಿ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಭಾರತದ ಪ್ರತಿಭಾನ್ವಿತ ಕ್ರಿಕೆಟರ್ ಎನಿಸಿಕೊಂಡಿದ್ದ ವಿನೋದ್ ಕಾಂಬ್ಳಿ ಆಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಒಂದು ಕಾಲದಲ್ಲಿ ತುದಿಗಾಲಿನಲ್ಲಿ ನಿಂತಿರುತ್ತಿದ್ದರು. ಆದರೆ ಐಶಾರಾಮಿ ಜೀವನ ಹಾಗೂ ಕುಡಿತದ ವ್ಯಸನದಿಂದಾಗಿ ವಿನೋದ್ ಕಾಂಬ್ಳಿ ತಾವೇರಿದ ಯಶಸ್ಸಿನ ಶಿಖರದಿಂದ ದಿಢೀರ್ ಎನ್ನುವಂತೆ ಪಾತಾಳಕ್ಕೆ ಕುಸಿದು ಬಿಟ್ಟರು. ಈಗಂತೂ ವಿನೋದ್ ಕಾಂಬ್ಳಿ ದಿನನಿತ್ಯದ ಜೀವನ ನಡೆಸಲು ಪರದಾಡುತ್ತಿದ್ದು, ಬೀದಿ ಪಾಲಾಗುವ ಆತಂಕಕ್ಕೆ ಸಿಲುಕಿರುವ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೆ. 

ವಿನೋದ್ ಕಾಂಬ್ಳಿಯ ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ ಸರಿಯಾಗಿ ಮಾತನಾಡಲು ಆಗುತ್ತಿಲ್ಲ ಹಾಗೆಯೇ ಸ್ವಂತ ಕಾಲಿನ ಮೇಲೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಇದೆಲ್ಲದರ ನಡುವೆ ಇನ್ನೊಬ್ಬ ಕ್ರಿಕೆಟಿಗನ ಹೆಸರು ಇದೀಗ ಮುನ್ನಲೆಗೆ ಬಂದಿದ್ದು, ಆತನ ಪಾಡು ವಿನೋದ್ ಕಾಂಬ್ಳಿ ಅವರಿಗಿಂತ ದುಸ್ತಿತಿ ತಲುಪಿದೆ. ಆ ಕ್ರಿಕೆಟಿಗನ ಪರಿಸ್ಥಿತಿ ಹೇಗಿದೆ ಎಂದರೆ ತನ್ನ ಕಾಲಿಗೆ ಹಾಕಲು ಚಪ್ಪಲಿ ಖರೀದಿಸಲು ಹಣವಿಲ್ಲ. ಈ ಕ್ರಿಕೆಟಿಗ ಅಂತಾರಾಷ್ಟ್ರೀಯ ಪಾದಾರ್ಪಣೆ ಪಂದ್ಯದಲ್ಲಿಯೇ ಆಕರ್ಷಕ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದರು. ಆತ ತಾನಾಡಿದ ತವರಿನ ಕೊನೆಯ ಪಂದ್ಯದಲ್ಲೂ 224 ರನ್ ಸಿಡಿಸಿದ್ದರು, ಆದರೆ ಈ ಕ್ರಿಕೆಟಿಗ ಈಗ ಅಕ್ಷರಶಃ ಬೀದಿಗೆ ಬಿದ್ದಿದ್ದಾನೆ.

ಟೀಕಾಕಾರರ ಬಾಯಿ ಮುಚ್ಚಿಸಿದ ವಿನೋದ್ ಕಾಂಬ್ಳಿ; ಬಾಲ್ಯದ ಗೆಳೆಯ ಸಚಿನ್ ಬಗ್ಗೆ ಖಡಕ್ ಮಾತಾಡಿದ ಮಾಜಿ ಕ್ರಿಕೆಟರ್!

ಅಷ್ಟಕ್ಕೂ ಯಾರು ಆ ಕ್ರಿಕೆಟರ್?

ಹೌದು, ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಶತಕ ಸಿಡಿಸಿದ್ದು, ಈಗ ಹಣಕಾಸಿನ ವಿಚಾರದಲ್ಲಿ ಬೀದಿಗೆ ಬಿದ್ದಿರುವ ಆಟಗಾರ ಬೇರ್ಯಾರು ಅಲ್ಲ, ಆತನೇ ನ್ಯೂಜಿಲೆಂಡ್ ಮಾಜಿ ಕ್ರಿಕೆಟರ್ ಲೂ ವಿನ್ಸೆಂಟ್. ನ್ಯೂಜಿಲೆಂಡ್ ಪರ ಲೂ ವಿನ್ಸೆಂಟ್ 23 ಟೆಸ್ಟ್ ಹಾಗೂ 108 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಲೂ ವಿನ್ಸೆಂಟ್ ಮೇಲೆ 2014 ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿತು.. ಆ ಬಳಿಕ ಆತನನ್ನು ಜೀವಾಮಾನವಿಡಿ ಕ್ರಿಕೆಟ್‌ನಿಂದ ಬ್ಯಾನ್ ಮಾಡಿತು. ಕಳೆದ ವರ್ಷ ಈತನ ಮೇಲೆ ವಿಧಿಸಲಾಗಿದ್ದ ಕಠಿಣ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಿದೆ. ಇದರಿಂದಾಗಿ ಈತ ಇದೀಗ ತವರಿನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಡಬಹುದಾಗಿದೆ. ಲೂ ವಿನ್ಸೆಂಟ್ 2000ನೇ ಇಸವಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲೇ ವಿನ್ಸೆಂಟ್ ಆಕರ್ಷಕ ಶತಕ ಸಿಡಿಸಿದ್ದರು. ಇದಾದ ಬಳಿಕ ಡಿಪ್ರೆಷನ್‌ನಿಂದ ಬಳಲುತ್ತಿದ್ದ ವಿನ್ಸೆಂಟ್ ತಾವು 29 ವರ್ಷದವರಿದ್ದಾಗಲೇ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿ ಬಂದಿದ್ದು ಮಾತ್ರ ದುರಂತ.

ನಾನು ಮಾನಸಿಕವಾಗಿ ರೆಡಿ ಇರಲಿಲ್ಲ:

ನಿಜ ಹೇಳಬೇಕೆಂದರೆ ವೃತ್ತಿಪರ ಕ್ರಿಕೆಟಿಗನಾಗಲು ನಾನು ಮಾನಸಿಕವಾಗಿ ಸಿದ್ದವೇ ಇರಲಿಲ್ಲ. ಈ ಕಾರಣಕ್ಕಾಗಿಯೇ ನನ್ನ 28ನೇ ವಯಸ್ಸಿನಲ್ಲಿಯೇ ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಈ ಸಮಯದಲ್ಲಿಯೇ ನಾನು ಭಾರತ ಪ್ರವಾಸ ಕೈಗೊಂಡಿದ್ದೆ. ಅಲ್ಲಿ ನಾನು ಮ್ಯಾಚ್ ಫಿಕ್ಸಿಂಗ್‌ ಜಗತ್ತಿಗೆ ತಳ್ಳಲ್ಪಟ್ಟೆ. ಆಗ ನನಗೂ ನಾನು ಈ ಗ್ಯಾಂಗ್‌ನ ಭಾಗವಾಗಿದ್ದೇನೆ ಎಂದು ಅನಿಸತೊಡಗಿತ್ತು ಎಂದು ವಿನ್ಸೆಂಟ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಯುವರಾಜ್‌ ಸಿಂಗ್‌ಗೆ ಬಿಸಿಸಿಐನಿಂದ ಸಿಗುವ ತಿಂಗಳ ಪೆನ್ಷನ್ ಎಷ್ಟು?

ಲೂ ವಿನ್ಸೆಂಟ್ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಕೂಡಾ ಉತ್ತಮವಾಗಿರಲಿಲ್ಲ. ಈ ಕಾರಣಕ್ಕಾಗಿಯೇ ಅವರು ಭಾವನಾತ್ಮಕ ಬೆಂಬಲವನ್ನು ತನ್ನ ಸುತ್ತಮುತ್ತಲಿನವರಿಂದ ಎದುರು ನೋಡುತ್ತಿದ್ದರು. ಹೀಗಿರುವಾಗಲೇ ಮ್ಯಾಚ್ ಫಿಕ್ಸಿಂಗ್ ಭೂತ ಲೂ ವಿನ್ಸೆಂಟ್‌ಗೆ ಹತ್ತಿರವಾಯಿತು. 

ತಮ್ಮ ಜೀವನದ ಕುರಿತಂತೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿರುವ ಲೂ ವಿನ್ಸೆಂಟ್, "ಮ್ಯಾಚ್ ಫಿಕ್ಸಿಂಗ್ ಎನ್ನುವ ಕರಾಳ ಜಗತ್ತಿನಿಂದ ಹೊರ ಬರುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಅವರಿಗೆ ನಾವು ಹಾಗೂ ನಮ್ಮ ಕುಟುಂಬ ಹೇಗಿದೆ ಎನ್ನುವುದು ಚೆನ್ನಾಗಿ ಗೊತ್ತಿರುತ್ತದೆ. ಈ ಕಾರಣಕ್ಕಾಗಿಯೇ ತಾವು ತಮ್ಮ 27ನೇ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಸಹ ಯೋಚಿಸಿದ್ದೆ ಎಂದು ಕಿವೀಸ್ ಮಾಜಿ ಕ್ರಿಕೆಟಿಗ ವಿನ್ಸೆಂಟ್ ಹೇಳಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್