ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮೂತ್ರಕೋಶದ ಸೋಂಕು ಮತ್ತು ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಟೀಂ ಇಂಡಿಯಾ ಜೆರ್ಸಿ ಧರಿಸಿ, ಅವರು ಡ್ರಗ್ಸ್ ಮತ್ತು ಮದ್ಯಪಾನದಿಂದ ದೂರವಿರಲು ಜನರಿಗೆ ಸಂದೇಶ ನೀಡಿದರು.
ಥಾಣೆ: ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೂತ್ರಕೋಶದ ಸೋಂಕಿನ ಕಾರಣಕ್ಕೆ ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಪರಿಶೀಲಿಸಿದ್ದ ವೈದ್ಯರು, ಕಾಂಬ್ಳೆ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ಮಾಹಿತಿ ನೀಡಿದ್ದರು. ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆಯಲ್ಲಿ ಟೀಂ ಇಂಡಿಯಾ ಜೆರ್ಸಿ ತೊಟ್ಟು ಜನತೆಗೆ ಮಹತ್ವದ ಸಂದೇಶ ರವಾನಿಸಿದ್ದಾರೆ.
ಹೌದು, ಸುಮಾರು 2 ವಾರಗಳ ಚಿಕಿತ್ಸೆ ಬಳಿಕ 52 ವರ್ಷದ ವಿನೋದ್ ಕಾಂಬ್ಳಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಅವರು ಟೀಂ ಇಂಡಿಯಾ ಜೆರ್ಸಿ ಧರಿಸಿ ಆಸ್ಪತ್ರೆಯಿಂದ ತೆರಳುತ್ತಿರುವ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಮದ್ಯಪಾನ, ಡ್ರಗ್ಸ್ ಸೇವನೆಯಿಂದ ದೂರವಿರಿ. ಅದು ನಿಮ್ಮ ಜೀವನವನ್ನೇ ನಾಶ ಮಾಡಲಿದೆ' ಎಂದಿದ್ದಾರೆ.
ಆಸ್ಪತ್ರೆಯಲ್ಲೇ ಲೇಡಿ ಸಿಬ್ಬಂದಿ ಜತೆ ವಿನೋದ್ ಕಾಂಬ್ಳಿ ಬಿಂದಾಸ್ ಡ್ಯಾನ್ಸ್! ವಿಡಿಯೋ ವೈರಲ್
'ಈ ವೈದ್ಯರು ನನ್ನನ್ನು ಸಂಪೂರ್ಣ ಫಿಟ್ ಆಗುವಂತೆ ಮಾಡಿದ್ದಾರೆ. ವಿನೋದ್ ಕಾಂಬ್ಳಿ ಕ್ರಿಕೆಟ್ ಬಿಡುವುದಿಲ್ಲ ಎನ್ನುವುದನ್ನು ಶಿವಾಜಿ ಪಾರ್ಕ್‌ನಲ್ಲಿ ನಾನು ಜನರಿಗೆ ತೋರಿಸುತ್ತೇನೆ. ಆಸ್ಪತ್ರೆಯಲ್ಲಿನ ಈ ಸಿಬ್ಬಂದಿಗಳು ನನಗೆ ಉತ್ತಮ ಕ್ರಿಕೆಟ್ ಅಭ್ಯಾಸವನ್ನು ನೀಡಿದರು. ನಾನು ಬೌಂಡರಿ, ಸಿಕ್ಸರ್‌ಗಳನ್ನೇ ಬಾರಿಸಿದ್ದೇನೆ' ಎಂದು ವಿನೋದ್ ಕಾಂಬ್ಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸಂತಸ ಹಂಚಿಕೊಂಡಿದ್ದಾರೆ. ಇನ್ನು ಇದೇ ವೇಳೆ ಹೊಸ ವರ್ಷವನ್ನು ಎಂಜಾಯ್ ಮಾಡಿ ಹಾಗೆಯೇ ಡ್ರಗ್ಸ್ ಹಾಗೂ ಮದ್ಯಪಾನವನ್ನು ಮಾಡದಿರಿ ಎಂದು ಕಾಂಬ್ಳಿ ಜೀವನ ಸಂದೇಶ ನೀಡಿದ್ದಾರೆ.
Vinod Kambli discharged from hospital. pic.twitter.com/k20r0K6vM4
— Vishal Kanojia (@Vishal0700)ವಿನೋದ್ ಕಾಂಬ್ಳಿ ಮುಂಬೈನ ಥಾಣೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ 'ಚಕ್ ದೇ' ಸಿನಿಮಾದ ಟೈಟಲ್ ಸಾಂಗ್ ಹಾಡುತ್ತಾ ಆಸ್ಪತ್ರೆಯ ಸಿಬ್ಬಂದಿ ಜತೆ ಡ್ಯಾನ್ಸ್ ಮಾಡಿದ್ದರು. ಇದು ಅವರ ಅಭಿಮಾನಿಗಳು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ವಿನೋದ್ ಕಾಂಬ್ಳಿ ಖುಷಿಯಲ್ಲಿಯೇ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಥಾಣೆಯ ಆಕ್ರಿತಿ ಆಸ್ಪತ್ರೆಯ ವೈದ್ಯರು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಖಚಿತಪಡಿಸಿದ್ದರು.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲೂ ಸೋತ್ರೆ ಗೌತಮ್ ಗಂಭೀರ್ ತಲೆದಂಡ?
ಮುಂಬೈ ಮೂಲದ ಎಡಗೈ ಬ್ಯಾಟರ್ ಆಗಿರುವ ವಿನೋದ್ ಕಾಂಬ್ಳಿ ಟೀಂ ಇಂಡಿಯಾ ಪರ 17 ಟೆಸ್ಟ್ ಪಂದ್ಯಗಳನ್ನಾಡಿ 54ರ ಸರಾಸರಿಯಲ್ಲಿ 1084 ರನ್ ಬಾರಿಸಿದ್ದಾರೆ. ಇನ್ನು 106 ಏಕದಿನ ಪಂದ್ಯಗಳಲ್ಲೂ ಕಾಂಬ್ಳಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಸಚಿನ್ ತೆಂಡುಲ್ಕರ್ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಕಳೆದ ಕೆಲ ವರ್ಷಗಳಿಂದ ಆರ್ಥಿಕ ಹಾಗೂ ಆರೋಗ್ಯದ ಸಮಸ್ಯಯಿಂದ ಬಳಲುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಜತೆ ವಿನೋದ್ ಕಾಂಬ್ಳಿ ಖಾಸಗಿ ಆಸ್ಪತ್ರೆಯಲ್ಲಿ ವೇದಿಕೆ ಹಂಚಿಕೊಂಡಿದ್ದರು. ಆಗಲೇ ವಿನೋದ್ ಕಾಂಬ್ಳಿ ಆರೋಗ್ಯ ಹದಗೆಟ್ಟಿರುವ ವಿಚಾರ ಬಹಿರಂಗಗೊಂಡಿತ್ತು.