2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲೂ ಸೋತ್ರೆ ಗೌತಮ್ ಗಂಭೀರ್‌ ತಲೆದಂಡ?

By Naveen Kodase  |  First Published Jan 2, 2025, 10:42 AM IST

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್‌ಕೋಚ್‌ ಆದ ಬಳಿಕ ಭಾರತ ತಂಡವು ಹಲವು ಸೋಲುಗಳನ್ನು ಅನುಭವಿಸಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ಗಂಭೀರ್ ತಲೆದಂಡ ಆಗಬಹುದು ಎನ್ನಲಾಗಿದೆ. ತಂಡದಲ್ಲಿನ ಭಿನ್ನಮತ ಹಾಗೂ ಹಿರಿಯ ಆಟಗಾರರೊಂದಿಗಿನ ಸಮಸ್ಯೆಗಳು ಗಂಭೀರ್‌ಗೆ ಸವಾಲಾಗಿವೆ.


ಸಿಡ್ನಿ: ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್‌ಕೋಚ್‌ ಆದ ಬಳಿಕ ಯಶಸ್ಸು ಗಳಿಸಿದ್ದಕ್ಕಿಂತ ವೈಫಲ್ಯ ಅನುಭವಿಸಿದ್ದೇ ಹೆಚ್ಚು. ಇನ್ನು ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ, ಗೌತಮ್ ಗಂಭೀರ್ ಪಾಲಿಗೆ ಅಗ್ನಿಪರೀಕ್ಷೆಯಾಗುವ ಸಾಧ್ಯತೆಯಿದೆ.

ಟಿ20 ವಿಶ್ವಕಪ್‌ ಬಳಿಕ ಗಂಭೀರ್‌ ಭಾರತಕ್ಕೆ ಕೋಚ್‌ ಆಗಿ ನೇಮಕಗೊಂಡಿದ್ದರು. ಆದರೆ ಅವರ ಅವಧಿಯಲ್ಲಿ ತಂಡ ಯಶಸ್ಸಿಗಿಂತ ವೈಫಲ್ಯ ಅನುಭವಿಸಿದ್ದೇ ಹೆಚ್ಚು. ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತಿದ್ದ ತಂಡ, ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕ್ಲೀನ್‌ಸ್ವೀಪ್‌ ಮುಖಭಂಗಕ್ಕೆ ಒಳಗಾಗಿತ್ತು. 

Tap to resize

Latest Videos

ಈಗ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋಲಿನ ಭೀತಿಯಲ್ಲಿದೆ. ಜೊತೆಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ಸಾಧ್ಯತೆಯೂ ಕ್ಷೀಣಿಸಿದೆ. ಫೆಬ್ರವರಿ-ಮಾರ್ಚ್‌ನಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆಯಲಿದೆ. ಅದರಲ್ಲೂ ಭಾರತ ಕಳಪೆ ಪ್ರದರ್ಶನ ನೀಡಿದರೆ ಗಂಭೀರ್‌ ತಲೆದಂಡ ಆಗಲಿದೆ ಎಂಬುದು ಬಿಸಿಸಿಐ ಮೂಲಗಳಿಂದ ತಿಳಿದುಬಂದ ಮಾಹಿತಿ. 

ಭಾರತ ಕ್ರಿಕೆಟ್‌ ತಂಡದಲ್ಲಿ 'ಗಂಭೀರ' ಭಿನ್ನಮತ?: ಹದಗೆಟ್ಟ ಡ್ರೆಸ್ಸಿಂಗ್ ರೂಂ ವಾತಾವರಣ

‘ಗಂಭೀರ್‌ ಭಾರತಕ್ಕೆ ಮೊದಲ ಆಯ್ಕೆಯ ಕೋಚ್‌ ಆಗಿರಲಿಲ್ಲ. ವಿವಿಎಸ್‌ ಲಕ್ಷ್ಮಣ್‌ ರೇಸ್‌ನಲ್ಲಿದ್ದರು. ಆದರೆ ಅನಿವಾರ್ಯವಾಗಿ ಗಂಭೀರ್‌ಗೆ ಹುದ್ದೆ ನೀಡಲಾಗಿದೆ. ಚಾಂಪಿಯನ್ಸ್‌ ಟ್ರೋಫಿಯಲ್ಲೂ ಸೋತರೆ ಅವರ ಹುದ್ದೆ ಬಗ್ಗೆ ಬಿಸಿಸಿಐ ಗಂಭೀರವಾಗಿ ಚರ್ಚೆ ನಡೆಸಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.

ಮನಸ್ತಾಪದಿಂದಲೇ ನಿವೃತ್ತಿ ಘೋಷಿಸಿದ್ರಾ ಆರ್‌.ಅಶ್ವಿನ್‌? 

ಭಾರತ ತಂಡದಲ್ಲಿ ಮನಸ್ತಾಪ ಉಂಟಾಗಿರುವ ಸುದ್ದಿ ಹರಿದಾಡುತ್ತಿರುವಾಗಲೇ, ಹಿರಿಯ ಆಟಗಾರ ಆರ್‌.ಅಶ್ವಿನ್‌ ನಿವೃತ್ತಿ ವಿಚಾರವೂ ಮುನ್ನೆಲೆಗೆ ಬಂದಿದೆ. ಅಶ್ವಿನ್‌ ಆಸ್ಟ್ರೇಲಿಯಾ ಸರಣಿ ನಡುವೆಯೇ ನಿವೃತ್ತಿ ಪ್ರಕಟಿಸಿ ಅಚ್ಚರಿ ಮೂಡಿಸಿದ್ದರು. ಅವರ ನಿವೃತ್ತಿಗೆ ತಂಡದಲ್ಲಿ ಉಂಟಾಗಿರುವ ಮನಸ್ತಾಪವೇ ಪ್ರಮುಖ ಕಾರಣ ಎಂಬ ಸುದ್ದಿ ಈಗ ಹರಿದಾಡುತ್ತಿದೆ. 

ತಂಡದ ಆಯ್ಕೆ, ನಾಯಕತ್ವ ವಿಚಾರದಲ್ಲಿ ಭಿನ್ನಮತ ತಲೆದೋರಿದ್ದರಿಂದ ಅಶ್ವಿನ್‌ ನಿವೃತ್ತಿ ನಿರ್ಧಾರ ಕೈಗೊಂಡರು ಎಂದು ಹೇಳಲಾಗುತ್ತಿದೆ. ‘ಭಾರತ ತಂಡದಲ್ಲಿ ಆಗುತ್ತಿದ್ದ ಅವಮಾನ ಸಹಿಸಲಾರದೆ ಅಶ್ವಿನ್‌ ನಿವೃತ್ತಿ ಘೋಷಿಸಿದರು’ ಎಂಬ ಅಶ್ವಿನ್‌ ತಂದೆಯ ಇತ್ತೀಚಿಗಿನ ಹೇಳಿಕೆ ಇಲ್ಲಿ ಗಮನಾರ್ಹ.

ಜಸ್ಪ್ರೀತ್‌ ಬುಮ್ರಾಗೆ ಕಾನೂನು ಜಾರಿ ಮಾಡ್ತೇವೆ: ಅಚ್ಚರಿ ಹೇಳಿಕೆ ಕೊಟ್ಟ ಆಸೀಸ್ ಪ್ರಧಾನಿ

ಹಿರಿಯರ ಜೊತೆ ಹೊಂದಾಣಿಕೆಯಿಲ್ಲ

ಭಾರತ ತಂಡದಲ್ಲಿ ರೋಹಿತ್‌, ವಿರಾಟ್‌ ಹಿರಿಯ ಆಟಗಾರರು. ಇಬ್ಬರೂ ಗಂಭೀರ್‌ ಜೊತೆಗೂ ಆಡಿದವರು. ಹೀಗಾಗಿಯೇ ರೋಹಿತ್‌, ವಿರಾಟ್‌ಗೆ ಕೋಚ್‌ ಆಗಿರುವ ಗಂಭೀರ್‌ ಸಲಹೆ, ಸೂಚನೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ಹೆಚ್ಚಾಗಿ ಔಟ್‌ಸೈಡ್‌ ಆಫ್‌ ಸ್ಟಂಪ್‌ ಎಸೆತಗಳನ್ನು ಎದುರಿಸಲು ಹೋಗಿ ಔಟಾಗುತ್ತಿದ್ದಾರೆ. ಈ ಸಮಸ್ಯೆಗೆ ಅವರು 4 ಪಂದ್ಯಗಳ ಬಳಿಕವೂ ಪರಿಹಾರ ಕಂಡುಕೊಂಡಿಲ್ಲ. ಕೋಚ್‌ ಆಗಿರುವ ಗಂಭೀರ್‌ ಕೂಡಾ ಇದರ ಬಗ್ಗೆ ಸಲಹೆಗಳನ್ನು ನೀಡುತ್ತಿಲ್ಲ ಎನ್ನಲಾಗುತ್ತಿದೆ.
 

click me!