ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಸಂಜು ಸಾಮ್ಸನ್!

By Web Desk  |  First Published Oct 12, 2019, 5:51 PM IST

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸಾಮ್ಸನ್ ಡಬಲ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. 129 ಎಸೆತದಲ್ಲಿ ಸಂಜು ಸಾಮ್ಸನ್ ಅಜೇಯ 212 ರನ್ ಸಿಡಿಸಿದ್ದಾರೆ. 
 


ಆಲೂರು(ಅ.12): ವಿಜಯ್ ಹಜಾರೆ ಟೂರ್ನಿಯಲ್ಲಿ ಕೇರಳ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸಾಮ್ಸನ್ ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಬೆಂಗಳೂರು  ಸಮೀಪದ ಆಲೂರಿನಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಸಂಜು ಸಾಮ್ಸನ್ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಪುಣೆ ಟೆಸ್ಟ್: ಸೌತ್ ಆಫ್ರಿಕಾ 275 ರನ್‌ಗೆ ಆಲೌಟ್; ಭಾರತಕ್ಕೆ ಭರ್ಜರಿ ಮೇಲುಗೈ

Tap to resize

Latest Videos

undefined

ಗೋವಾ ವಿರುದ್ದದ ವಿಜಯ್ ಹಜಾರೆ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಕೇರಳ ತಂಡ ಸಂಜು ಸಾಮ್ಸನ್ ಭರ್ಜರಿ ಡಬಲ್ ಸೆಂಚುರಿಯಿಂದ 377 ರನ್ ಸಿಡಿಸಿತು. ಸಂಜು ಸಾಮ್ಸನ್ ದ್ವಿಶತಕ ಸಿಡಿಸಿ, ಪಾಕಿಸ್ತಾನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಬಿದ್ ಆಲಿ ದಾಖಲೆ ಮುರಿದರು.

ಇದನ್ನೂ ಓದಿ: ರಿಷಬ್ ಪಂತ್ ಬದಲು ಹೊಸ ವಿಕೆಟ್ ಕೀಪರ್ ಸೂಚಿಸಿದ ಫ್ಯಾನ್ಸ್!

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಅಬಿದ್ ಆಲಿ ಅಜೇಯ 209 ರನ್ ಸಿಡಿಸಿದ್ದರು. ಇಸ್ಲಾಮಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಅಬಿದ್ ಆಲಿ ಈ ಸಾಧನೆ ಮಾಡಿದ್ದರು. ಇದು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸಿಡಿಸಿದ ಗರಿಷ್ಟ ಮೊತ್ತವಾಗಿತ್ತು. ಇದೀಗ ಸಂಜು ಸಾಮ್ಸನ್ 212* ರನ್ ಸಿಡಿಸೋ ಮೂಲಕ ದಾಖಲೆ ಮುರಿದರು.

ಇದನ್ನೂ ಓದಿ: ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದ ಸಂಜು ಸ್ಯಾಮ್ಸನ್..!

ಸಂಜು ಸಾಮ್ಸನ್ 129 ಎಸೆತದಲ್ಲಿ 212 ರನ್ ಚಚ್ಚಿದರು. ಇದೀಗ ನಿಗದಿತ ಓವರ್ ಕ್ರಿಕೆಟ್‌ಗೆ ರಿಷಬ್ ಪಂತ್ ಬದಲು ಸಂಜು ಸಾಮ್ಸನ್‌ಗೆ ಅವಕಾಶ ನೀಡಬೇಕು ಅನ್ನೋ ಕೂಗು ಜೋರಾಗಿ ಕೇಳಿ ಬರುತ್ತಿದೆ.
 

click me!