
ಪುಣೆ(ಅ.12): ಸೌತ್ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದ 3ನೇ ದಿನ ಭಾರತ ಮೇಲುಗೈ ಸಾಧಿಸಿದೆ. ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಕೇಶವ್ ಮಹರಾಜ್ ಹೋರಾಟ ನೀಡಿದರೂ ಪ್ರಯೋಜನವಾಗಲಿಲ್ಲ. ಸೌತ್ ಆಫ್ರಿಕಾ ತಂಡವನ್ನು 275 ರನ್‌ಗೆ ಆಲೌಟ್ ಮಾಡಿದ ಟೀಂ ಇಂಡಿಯಾ ಫಾಲೋ ಆನ್ ಹೇರುವ ಸಾಧ್ಯತೆ ಇದೆ.
ಇದನ್ನೂ ಓದಿ: ಭದ್ರತಾ ಸಿಬ್ಬಂದಿಕಣ್ತಪ್ಪಿಸಿ ರೋಹಿತ್ ಪಾದಕ್ಕೆರಗಿದ ಅಭಿಮಾನಿ!
3 ವಿಕೆಟ್ ನಷ್ಟಕ್ಕೆ 36 ರನ್‌ಗಳೊಂದಿಗೆ 3ನೇ ದಿನದಾಟ ಆರಂಭಿಸಿದ ಸೌತ್ ಆಫ್ರಿಕಾ ಮತ್ತೆ ಟೀಂ ಇಂಡಿಯಾ ದಾಳಿಗೆ ಕುಸಿಯಿತು. ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಕೇಶವ್ ಮಹರಾಜ್ ಹೊರತು ಪಡಿಸಿದರೆ ಇನ್ಯಾರು ಕೂಡ ನೆರವಾಗಲಿಲ್ಲ. ತೆಂಬಾ ಬುವುಮಾ 3, ಅನಿರಿಚ್ ನೋರ್ಜೆ 8, ಕ್ವಿಂಟನ್ ಡಿಕಾಕ್ 31, ಸೆನುರನ್ ಮುತ್ತುಸ್ವಾಮಿ 7 ರನ್ ಸಿಡಿಸಿ ಔಟಾದರು.
ಇದನ್ನೂ ಓದಿ: ಅಶ್ವಿನ್ ಬೌಲಿಂಗ್‌ಗೆ ತಬ್ಬಿಬ್ಬಾದ ಡಿಕಾಕ್: ವಿಡಿಯೋ ವೈರಲ್
ಡುಪ್ಲೆಸಿಸ್ 64 ರನ್ ಕಾಣಿಕೆ ನೀಡಿದರೆ, ಕೇಶವ್ 72 ರನ್ ಸಿಡಿಸಿದರು. ವರ್ನಾನ್ ಫಿಲಾಂಡರ್ ಸಿಡಿಸಿದ ಅಜೇಯ 44 ರನ್ ನೆರವಿನಿಂದ ಸೌತ್ ಆಫ್ರಿಕಾ 275 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 326 ರನ್ ಹಿನ್ನಡೆ ಅನುಭವಿಸಿತು. ಸೌತ್ ಆಫ್ರಿಕಾ ಆಲೌಟ್ ಬೆನ್ನಲ್ಲೇ ದಿನದಾಟ ಅಂತ್ಯಗೊಂಡಿತು. ಟೀಂ ಇಂಡಿಯಾ ಫಾಲೋ ಆನ್ ಹೇರುತ್ತಾ? ಅಥವಾ 2ನೇ ಇನಿಂಗ್ಸ್ ಆರಂಭಿಸುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.ಈ ಕುತೂಹಲ ನಾಲ್ಕನೇ ದಿನದಾಟದಲ್ಲಿ ಆರಂಭದಲ್ಲಿ ತಿಳಿಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.