ಮಹಾರಾಷ್ಟ್ರ ಮಣಿಸಿದ ಸೌರಾಷ್ಟ್ರಕ್ಕೆ ವಿಜಯ್ ಹಜಾರೆ ಟ್ರೋಫಿ!

By Suvarna NewsFirst Published Dec 2, 2022, 5:23 PM IST
Highlights

ವಿಜಯ್ ಹಜಾರೆ ಟೂರ್ನಿ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಹಾಗೂ ಸೌರಾಷ್ಟ್ರ ಮುಖಾಮುಖಿಯಾಗಿತ್ತು. ರೋಚಕ ಹೋರಾಟದಲ್ಲಿ ಸೌರಾಷ್ಟ್ರ 5 ವಿಕೆಟ್ ಗೆಲುವು ದಾಖಲಿಸಿ ಟ್ರೋಫಿ ಗೆದ್ದುಕೊಂಡಿದೆ.
 

ಅಹಮದಾಬಾದ್‌(ಡಿ.02): ವಿಜಯ್ ಹಜಾರೆ ಟೂರ್ನಿಗೆ ಹೊಸ ಚಾಂಪಿಯನ್. ಮಹಾರಾಷ್ಟ್ರ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡ 5 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. 249 ರನ್ ಟಾರ್ಗೆಟ್ ಚೇಸ್ ಮಾಡಿದ ಸೌರಾಷ್ಟ್ರ 46.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿತಲುಪಿತು. ಶೆಲ್ಡಾನ್ ಜಾಕ್ಸನ್ ಆಕರ್ಷಕ ಶತಕದ ಆಟಕ್ಕೆ ಸೌರಾಷ್ಟ್ರ ಯಾವುದೇ ಅಡ್ಡಿ ಆತಂಕವಿಲ್ಲದೆ ಗುರಿ ತಲುಪಿತು.

ಗೆಲುವಿಗೆ 249 ರನ್ ಟಾರ್ಗೆಟ್ ಪಡೆದ ಸೌರಾಷ್ಟ್ರ ಅತ್ಯುತ್ತಮ ಆರಂಭ ಪಡೆಯಿತು. ಹಾರ್ವಿಕ್ ದೇಸಾಯಿ ಹಾಗೂ ಶೆಲ್ಡಾನ್ ಜಾಕ್ಸನ್ ಜೊತೆಯಾಟಕ್ಕೆ ಮಹಾರಾಷ್ಟ್ರ ಕಂಗಾಲಾಯಿತು. ಮೊದಲ ವಿಕೆಟ್‌ಗೆ ಈ ಜೋಡಿ 125 ರನ್ ಸಿಡಿಸಿದರು. ಹಾರ್ವಿಕ್ ದೇಸಾಯಿ 67 ಎಸೆತದಲ್ಲಿ 50 ರನ್ ಸಿಡಿಸಿ ಔಟಾದರು. ಆದರೆ ಜಾಕ್ಸನ್ ಹೋರಾಟ ಮುಂದುವರಿಯಿತು. ಮೂರನೇ ಕ್ರಮಾಂಕದಲ್ಲಿ ಬಂದ ಜಯ್ ಗೊಹ್ಲಿ ಡಕೌಟ್ ಆದರು. ಇದು ಸೌರಾಷ್ಟ್ರ ತಂಡದಲ್ಲಿ ಆತಂಕ ಸೃಷ್ಟಿಸಿತು. 

ಐಪಿಎಲ್‌ಗೂ ವಿದಾಯ ಘೋಷಿಸಿದ CSK ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ..!

ಇತ್ತ ಸಮರ್ಥ್ ವ್ಯಾಸ್ ಕೇವಲ 13 ರನ್ ಸಿಡಿಸಿ ಔಟಾದರು. ಒಂದಡೆ ವಿಕೆಟ್ ಪತನಗೊಳ್ಳುತ್ತಿದ್ದರೂ ಶೆಲ್ಡಾನ್ ಜಾಕ್ಸನ್ ಏಕಾಂಗಿ ಹೋರಾಟ ನೀಡಿದರು. ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಅರ್ಪಿತ್ ವಾಸವದ 15 ರನ್ ಸಿಡಿಸಿ ನಿರ್ಗಮಿಸಿದರು. ಇನ್ನು ಪ್ರೇರಕ್ ಮಂಕಡ್ ಕೇವಲ 1 ರನ್ ಸಿಡಿಸಿ ಔಟಾದರು.

ಚಿರಾಗ್ ಜೈನ್ ಜೊತೆ ಜೊತೆಯಾಟ ನೀಡಿದ ಶೆಲ್ಡಾನ್ ಜಾಕ್ಸನ್ ಸೌರಾಷ್ಟ್ರ ಗೆಲುವು ಖಚಿತಪಡಿಸಿದರು. ಶೆಲ್ಡಾನ್ 136 ಎಸೆತದಲ್ಲಿ ಅಜೇಯ 133 ರನ್ ಸಿಡಿಸಿ ಔಟಾದರು. ಇತ್ತ ಚಿರಾಗ್ ಜೈನ್ 25 ಎಸೆತದಲ್ಲಿ ಅಜೇಯ 30 ರನ್ ಸಿಡಿಸಿದರು. ಇದರೊಂದಿಗೆ ಸೌರಾಷ್ಟ್ರ 46.3 ಓವರ್‌ನಲ್ಲಿ 5 ವಿಕೆಟ್ ಕಳೆಗುಕೊಂಡು ಗೆಲುವಿನ ಕೇಕೆ ಹಾಕಿತು. 

ಸೌರಾಷ್ಟ್ರ ವಿಜಯ್ ಹಜಾರೆ ಟೂರ್ನಿಯಲ್ಲಿ ಈಗಾಗಲೇ ಎರಡು ಬಾರಿ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಆದರೆ ಮೂರನೇ ಪ್ರಯತ್ನದಲ್ಲಿ ಸೌರಾಷ್ಟ್ರ ಟ್ರೋಫಿ ತನ್ನದಾಗಿಸಿಕೊಂಡಿದೆ.   

IPL ಹರಾಜಿಗೆ 991 ಆಟಗಾರರ ನೋಂದಣಿ; 21 ಆಟಗಾರರ ಮೂಲಬೆಲೆ 2 ಕೋಟಿ ರುಪಾಯಿ..!

ಗಾಯಕ್ವಾಡ್ ಶತಕದಾಟ
ಮೊದಲು ಬ್ಯಾಟಿಂಗ್ ಮಾಡಿದ್ದ ಮಹಾರಾಷ್ಟ್ರ ತಂಡಕ್ಕೆ ರುತುರಾಜ್ ಗಾಯಕ್ವಾಡ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಆದರೆ ಇತರ ಬ್ಯಾಟರ್‌ಗಳಿಂದ ನಿರೀಕ್ಷಿತ ಹೋರಾಟ ಮೂಡಿಬರಲಿಲ್ಲ. ಪವನ್ ಶಾ ಕೇವಲ 4 ರನ್ ಸಿಡಿಸಿ ಔಟಾದರು. ಬಚ್ಚವ್ 27 ರನ್ ಸಿಡಿಸಿ ಔಟಾದರು. 16 ರನ್ ಸಿಡಿಸಿ ಬಾವ್ನೆ ನಿರ್ಗಮನದ ಮೂಲಕ ಮಹಾರಾಷ್ಟ್ರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು. ಆದರೆ ರುತುರಾಜ್ ಗಾಯಕ್ವಾಡ್ ಹೋರಾಟದಿಂದ ಮಹಾರಾಷ್ಟ್ರ ಚೇತರಿಸಿಕೊಂಡಿತು.

ಅಜಿಮ್ ಖಾಜಿ ಹಾಗೂ ನೌಶ್ ಶೇಕ್ ಹೋರಾಟ ನೀಡಿದರು. ಆದರೆ ಸೌರವ್ ನಾವಲೆ, ರಾಜವರ್ಧನ್, ವಿಕ್ಕಿ ಒಸ್ಟ್ವಾಲ್, ಮುಕೇಶ್ ಚೌಧರಿ ಅಬ್ಬರಿಸಲಿಲ್ಲ. ರುತುರಾಜ್ ಗಾಯಕ್ವಾಡ್ 108 ರನ್ ಸಿಡಿಸಿ ಔಟಾದರು.  ಅಜಿಮ್ ಖಾಜಿ 37ರನ್ ಸಿಡಿಸಿ ಔಟಾದರೆ. ನೌಶಾದ್ ಶೇಕ್ ಅಜೇಯ 31 ರನ್ ಸಿಡಿಸಿದರು. ಈ ಮೂಲಕ ಮಹಾರಾಷ್ಟ್ರ 9 ವಿಕೆಟ್ ನಷ್ಟಕ್ಕೆ 248 ರನ್ ಸಿಡಿಸಿ ಔಟಾದರು.

click me!