
ಬೆಂಗಳೂರು[ಅ.26]: ತಮಿಳುನಾಡು ತಂಡದ ತಾರಾ ಆಟಗಾರ ಆರ್.ಅಶ್ವಿನ್ ಶುಕ್ರವಾರ 3ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದಿದ್ದು ಅಚ್ಚರಿಗೆ ಕಾರಣವಾಯಿತು. ಆದರೆ ಅಶ್ವಿನ್ ಭಾರತ ತಂಡದ ಹೆಲ್ಮೆಟ್ ಧರಿಸಿ ಬ್ಯಾಟಿಂಗ್ ಮಾಡಿದ್ದು, ಅವರಿಗೆ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇದೆ.
ವಿಜಯ್ ಹಜಾರೆ ಟ್ರೋಫಿ; ತಮಿಳುನಾಡು ಮಣಿಸಿ ಕಪ್ ಗೆದ್ದ ಕರ್ನಾಟಕ!
ದೇಶೀಯ ಕ್ರಿಕೆಟ್ ನಿಯಮದ ಪ್ರಕಾರ ಬಿಸಿಸಿಐ ಲೋಗೋ ಇರುವ ಹೆಲ್ಮೆಟ್ ಧರಿಸುವಂತಿಲ್ಲ. ಒಂದು ವೇಳೆ ಅದೇ ಹೆಲ್ಮೆಟ್ ಬಳಸುತ್ತಿದ್ದರೆ, ಲೋಗೋ ಮೇಲೆ ಟೇಪ್ ಸುತ್ತಬೇಕು. ಕರ್ನಾಟಕದ ಮಯಾಂಕ್, ರಾಹುಲ್ ತಮ್ಮ ಹೆಲ್ಮೆಟ್ ಮೇಲಿನ ಬಿಸಿಸಿಐ ಲೋಗೋಗೆ ಟೇಪ್ ಸುತ್ತಿದ್ದರು.
KPL ಫಿಕ್ಸಿಂಗ್: ಇಬ್ಬರು ಕ್ರಿಕೆಟಿಗರು ಬಂಧನ..!
ವಿಜಯ್ ಹಜಾರೆ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ-ತಮಿಳುನಾಡು ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ತಮಿಳುನಾಡು ತಂಡ 252 ರನ್ ಬಾರಿಸಿ ಆಲೌಟ್ ಆಯಿತು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಅಶ್ವಿನ್ ಕೇವಲ 8 ರನ್ ಗಳಿಸಿ ಕೌಶಿಕ್’ಗೆ ವಿಕೆಟ್ ಒಪ್ಪಿಸಿದರು. ಇನ್ನು ಗುರಿ ಬೆನ್ನತ್ತಿದ ಕರ್ನಾಟಕ 23 ಓವರ್’ಗೆ 1 ವಿಕೆಟ್ ಕಳೆದುಕೊಂಡು 146 ರನ್ ಬಾರಿಸಿತ್ತು. ಈ ವೇಳೆ ಮಂದಬೆಳಕು ಹಾಗೂ ಮಳೆ ಅಡ್ಡಿಪಡಿಸಿದ್ದರಿಂದ ವಿಜೆಡಿ ನಿಯಮದನ್ವಯ ಕರ್ನಾಟಕ ತಂಡವನ್ನು 60 ರನ್’ಗಳಿಂದ ಜಯಶಾಲಿ ಎಂದು ಘೋಷಿಸಲಾಯಿತು. ಇದರೊಂದಿಗೆ ಕರ್ನಾಟಕ 4ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಕೈವಶ ಮಾಡಿಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.