
ನವದೆಹಲಿ(ಏ.29): ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್‌ನಲ್ಲಿ ಕೊರೋನಾ ಭೀತಿಯಿಂದ ಕೆಲವು ಆಟಗಾರರು ಹಿಂದೆ ಸರಿದಿದ್ದಾರೆ. ಇದೀಗ ಅಂಪೈರ್‌ಗಳ ಸರದಿ. ಭಾರತದ ಪ್ರಮುಖ ಅಂಪೈರ್ ನಿತಿನ್ ಮೆನನ್ ಹಾಗೂ ಆಸ್ಟ್ರೇಲಿಯಾದ ಸಹಪಾಠಿ ಪೌಲ್ ರೈಫೆಲ್ ವೈಯುಕ್ತಿಕ ಕಾರಣ ನೀಡಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ದಿಢೀರ್ ಎನ್ನುವಂತೆ ಹಿಂದೆ ಸರಿದ್ದಿದ್ದಾರೆ
ನಿತಿನ್ ಮೆನನ್ ಇಂದೋರ್ ನಿವಾಸಿಯಾಗಿದ್ದು, ತಮ್ಮ ಪತ್ನಿ ಹಾಗೂ ತಾಯಿಗೆ ಕೋವಿಡ್ 19 ಸೋಂಕು ದೃಢಪಟ್ಟ ಬೆನ್ನಲ್ಲೇ ಬಯೋ ಬಬಲ್ ತೊರೆದು ತಮ್ಮ ಮನೆಯತ್ತ ಮುಖ ಮಾಡಿದ್ದಾರೆ. ಐಸಿಸಿ ಎಲೈಟ್ ಪ್ಯಾನಲ್‌ನಲ್ಲಿ ಸ್ಥಾನ ಪಡೆದಿರುವ ಭಾರತ ಏಕೈಕ ಅಂಪೈರ್ ಎನಿಸಿಕೊಂಡಿರುವ ನಿತಿನ್ ಮೆನನ್, ಇತ್ತೀಚೆಗಷ್ಟೇ ತವರಿನಲ್ಲಿ ಮುಕ್ತಾಯವಾದ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಕರಾರುವಕ್ಕಾದ ತೀರ್ಪು ನೀಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.
ತಮ್ಮ ಕುಟುಂಬಸ್ಥರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲ್ಲೇ ತಕ್ಷಣವೇ ತವರಿಗೆ ವಾಪಾಸಾಗುವ ತೀರ್ಮಾನ ಮಾಡಿದ್ದಾರೆ. ಈ ವಿಚಾರ ತಿಳಿದ ಬಳಿಕ ಅಂಪೈರ್ ಅಗಿ ಕಾರ್ಯ ನಿರ್ವಹಿಸಲು ಮೆನನ್ ಮಾನಸಿಕವಾಗಿ ಸಿದ್ದವಿರಲಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಐಪಿಎಲ್ 2021: ಆ್ಯಡಂ ಜಂಪಾ ದಿಢೀರನೇ ಬಯೋ-ಬಬಲ್ ತೊರೆದಿದ್ದೇಕೆ..?
ಇನ್ನು ಮತ್ತೊಂದೆಡೆ ಭಾರತದಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರವು ಭಾರತದಿಂದ ಬರುವ ವಿಮಾನಗಳ ಹಾರಾಟವನ್ನು ನಿಷೇಧಿಸಿದೆ. ಹೀಗಾಗಿ ದಿಢೀರ್ ಎನ್ನುವಂತೆ ಐಪಿಎಲ್ ತೊರೆದು ಪೌಲ್ ರೈಫೆಲ್ ಕಾಂಗರೂ ನಾಡಿಗೆ ಹಿಂತಿರುಗಿದ್ದಾರೆ.
ಈ ಮೊದಲು ಅಸ್ಟ್ರೇಲಿಯಾದ ಆ್ಯಂಡ್ರ್ಯೂ ಟೈ, ಕೇನ್ ರಿಚರ್ಡ್‌ಸನ್, ಆ್ಯಡಂ ಜಂಪಾ ಹಾಗೂ ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೋವಿಡ್ ಭೀತಿಯಿಂದ ಐಪಿಎಲ್ ಟೂರ್ನಿಯನ್ನು ಅರ್ಧಕ್ಕೆ ತೊರೆದು ಮನೆ ಸೇರಿಕೊಂಡಿದ್ದಾರೆ.
"
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.