ಐಪಿಎಲ್ 2021: ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿ ಮುಂಬೈ ಇಂಡಿಯನ್ಸ್‌

Kannadaprabha News   | Asianet News
Published : Apr 29, 2021, 11:28 AM IST
ಐಪಿಎಲ್ 2021: ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿ ಮುಂಬೈ ಇಂಡಿಯನ್ಸ್‌

ಸಾರಾಂಶ

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಜಯದ ಲಯ ಕಂಡು ಕೊಳ್ಳಲು ಪರದಾಡುತ್ತಿದ್ದು, ಇದೀಗ ಹ್ಯಾಟ್ರಿಕ್ ಸೋಲಿನ ಭೀತಿಗೆ ಸಿಲುಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.29): ಸತತ 2 ಸೋಲುಗಳಿಂದ ಕಂಗೆಟ್ಟಿರುವ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹ್ಯಾಟ್ರಿಕ್‌ ಸೋಲಿನ ಭೀತಿಗೆ ಎದುರಾಗಿದ್ದು, ಗುರುವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೆಣಸಾಟ ನಡೆಸಲಿದೆ. ಅತ್ತ ಆರ್‌ಸಿಬಿ ಹೊಡೆತದಿಂದ ಕುಗ್ಗಿದ್ದ ರಾಜಸ್ಥಾನ ರಾಯಲ್ಸ್‌ ತಂಡವು ಕೋಲ್ಕತಾ ನೈಟ್‌ರೈಡ​ರ್ಸ್‌ಗೆ ತಿರುಗೇಟು ನೀಡುವ ಮೂಲಕ ಜಯದ ಹಾದಿಗೆ ಮರಳಿದ್ದು, ಕಂಗೆಟ್ಟಿರುವ ಮುಂಬೈ ಮೇಲೆ ಸವಾರಿ ಮಾಡುವ ಲೆಕ್ಕಾಚಾರದಲ್ಲಿದೆ.

ಎರಡು ತಂಡಗಳು ಬಲಾಢ್ಯವಾಗಿದ್ದು, ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪಡೆಯನ್ನೇ ಹೊಂದಿವೆ. ಆದಾಗ್ಯೂ ಮುಂಬೈಗೆ ಜಯದ ಹಾದಿ ಕಠಿಣವಾಗಿದೆ. ಆಡಿರುವ 5 ಪಂದ್ಯಗಳಲ್ಲಿ ಮೂರರಲ್ಲಿ ಸೋಲುಂಡಿರುವ ರೋಹಿತ್‌ ಪಡೆ, ಪುಟಿದೇಳಲು ತವಕಿಸುತ್ತಿದೆ.

ಇನ್ನು ಸತತ ಸೋಲುಗಳ ಬಳಿಕ ಜಯದ ಹಾದಿಗೆ ಮರಳಿರುವ ರಾಜಸ್ಥಾನ, ಇದೇ ಲಯ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಕೆಕೆಆರ್‌ ವಿರುದ್ಧ ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಸರ್ವಾಂಗೀಣ ಪ್ರದರ್ಶನ ನೀಡಿದ್ದ ರಾಜಸ್ಥಾನ, ಇಂದಿನ ಪಂದ್ಯದಲ್ಲೂ ಇದೇ ಆಟ ಮುಂದುವರೆಸುವ ಹುಮ್ಮಸ್ಸಿನಲ್ಲಿದೆ.

ಹೈದರಾಬಾದ್ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್; ಅಂಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ!

ಪಿಚ್‌ ರಿಪೋರ್ಟ್‌: ದೆಹಲಿ ಪಿಚ್‌ ಸ್ಪಿನ್ನರ್‌ಗಳ ಸ್ನೇಹಿಯಾಗಿದ್ದರೂ, ರನ್‌ ಹೊಳೆ ಹರಿಯುವ ನಿರೀಕ್ಷೆಯಿದೆ. ಮಧ್ಯಾಹ್ನದ ಪಂದ್ಯವಾದ ಕಾರಣ ಇಬ್ಬನಿ ಕಾಟ ಇಲ್ಲವಾಗಿದ್ದು, ಟಾಸ್‌ ಗೆಲ್ಲುವ ತಂಡ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮೊದಲು ಬ್ಯಾಟ್‌ ಮಾಡುವ ತಂಡ 170-180 ರನ್‌ ಗಳಿಸಿದರೆ ಜಯದ ಹಾದಿ ಕೊಂಚ ಸುಲಭವಾಗಲಿದೆ.

ಸಂಭವನೀಯ ಆಟಗಾರರ ಪಟ್ಟಿ:

ಮುಂಬೈ: ರೋಹಿತ್‌ ಶರ್ಮಾ(ನಾಯಕ), ಕ್ವಿಂಟನ್‌ ಡಿ ಕಾಕ್‌, ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ, ಪೊಲ್ಲಾರ್ಡ್‌, ಕೃನಾಲ್‌ ಪಾಂಡ್ಯ, ರಾಹುಲ್‌ ಚಾಹರ್‌, ಜಯಂತ್‌ ಯಾದವ್‌, ಟ್ರೆಂಟ್‌ ಬೌಲ್ಟ್‌, ಬೂಮ್ರಾ

ರಾಜಸ್ಥಾನ: ಜೋಸ್‌ ಬಟ್ಲರ್‌, ಜೈಸ್ವಾಲ್‌, ಸಂಜು ಸ್ಯಾಮ್ಸನ್‌(ನಾಯಕ), ಶಿವಂ ದುಬೆ, ಡೇವಿಡ್‌ ಮಿಲ್ಲರ್‌, ರಿಯಾನ್‌ ಪರಾಗ್‌, ಕ್ರಿಸ್‌ ಮೋರಿಸ್‌, ರಾಹುಲ್‌ ತೆವಾಟಿಯಾ, ಉನಾದ್ಕತ್‌, ಚೇತನ್‌, ಮುಸ್ತಾಫಿಜುರ್‌

ಸ್ಥಳ: ದೆಹಲಿ
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!
One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್