ಐಪಿಎಲ್ 2021: ಬಲಿಷ್ಠ ಡೆಲ್ಲಿಗಿಂದು ಕೆಕೆಆರ್‌ ಸವಾಲು

By Kannadaprabha NewsFirst Published Apr 29, 2021, 12:25 PM IST
Highlights

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 25ನೇ ಪಂದ್ಯದಲ್ಲಿಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ ತಂಡವಿಂದು ಕೋಲ್ಕತ ನೈಟ್‌ ರೈಡರ್ಸ್‌ ತಂಡವನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಹಮದಾಬಾದ್(ಏ.29)‌: ಸ್ಥಿರ ಪ್ರದರ್ಶನ ನೀಡುವಲ್ಲಿ ಎಡುವುತ್ತಿರುವ ಕೋಲ್ಕತಾ ನೈಟ್‌ರೈಡರ್ಸ್‌, ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು ಎದುರಿಸಲು ಸಜ್ಜಾಗಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.

ಡೆಲ್ಲಿಗೆ ಹೋಲಿಕೆ ಮಾಡಿದರೆ ಕೆಕೆಆರ್‌ ದುರ್ಬಲ ಎನಿಸಿದರೂ, ಯಾವುದೇ ಕ್ಷಣದಲ್ಲಿ ತಿರುಗೇಟು ನೀಡುವ ಬಲವಿದೆ. ಇದೇ ಮೋದಿ ಅಂಗಳದಲ್ಲಿ ಹಿಂದಿನ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಪಂದ್ಯದ ಫಲಿತಾಂಶವೇ ಇದಕ್ಕೆ ಸಾಕ್ಷಿ. ಬ್ಯಾಟ್ಸ್‌ಮನ್‌ಗಳಿಂದ ಸಂಘಟಿತ ಪ್ರದರ್ಶನ ಕಂಡು ಬರದಿದ್ದರೂ, ಬೌಲರ್‌ಗಳ ಮಿಂಚಿನಾಟ ಕೆಕೆಆರ್‌ನ ಬಲ ಎನಿಸಿದೆ. 

ಸುನಿಲ್‌ ನರೈನ್‌, ರಸೆಲ್‌ ಬ್ಯಾಟಿಂಗ್‌ನಲ್ಲಿ ಬೃಹತ್‌ ಕೊಡುಗೆ ನೀಡದಿದ್ದರೂ, ಸುಧಾರಿತ ಬೌಲಿಂಗ್‌ ಪ್ರದರ್ಶನ ನೀಡುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ. ಅದರಲ್ಲೂ ಆರಂಭಿಕರು ರನ್‌ಗಳಿಸಲು ಪರದಾಡುತ್ತಿರುವುದು ಮಾರ್ಗನ್‌ ಚಿಂತೆ ಹೆಚ್ಚಿಸಿದೆ. ಇನ್ನು ಆರ್‌ಸಿಬಿ ವಿರುದ್ಧ 1 ರನ್‌ ವಿರೋಚಿತ ಸೋಲುಂಡಿರುವ ಡೆಲ್ಲಿ, ಪೆಟ್ಟು ತಿಂದ ಹುಲಿಯಂತಾಗಿದ್ದು ಕೆಕೆಆರ್‌ ವಿರುದ್ಧ ಅಬ್ಬರಿಸಲು ತುದಿಗಾಲಲ್ಲಿ ನಿಂತಿದೆ.

ಐಪಿಎಲ್ 2021: ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿ ಮುಂಬೈ ಇಂಡಿಯನ್ಸ್‌

ಪಿಚ್‌ ರಿಪೋರ್ಟ್‌: ಮೋದಿ ಕ್ರೀಡಾಂಗಣ ಪಿಚ್‌ ವೇಗದ ಬೌಲರ್‌ಗಳಿಗೆ ನೆರವು ನೀಡಲಿದೆ ಎಂಬ ಲೆಕ್ಕಾಚಾರವಿರುದ್ದರೂ, ಮೊದಲ ಪಂದ್ಯದಲ್ಲಿ ರನ್‌ ಹೊಳೆ ಹರಿದಿದೆ. ಇಂದಿನ ಪಂದ್ಯದಲ್ಲೂ ಬ್ಯಾಟ್ಸ್‌ಮನ್‌ಗಳೇ ಮೇಲುಗೈ ಸಾಧಿಸುವ ದಟ್ಟತೆ ಹೆಚ್ಚಿದೆ. ಇಬ್ಬನಿ ಕಾರಣ ಟಾಸ್‌ ಗೆಲ್ಲುವ ತಂಡ ಕ್ಷೇತ್ರರಕ್ಷಣೆಗೆ ಆದ್ಯತೆ ನೀಡಲಿದೆ.

ಡೆಲ್ಲಿ: ಪೃಥ್ವಿ ಶಾ, ಶಿಖರ್‌ ಧವನ್‌, ಸ್ಟೀವ್‌ ಸ್ಮಿತ್‌, ರಿಷಭ್‌ ಪಂತ್‌(ನಾಯಕ), ಸ್ಟೋಯ್ನಿಸ್‌, ಹೆಟ್ಮೇಯರ್‌, ಅಕ್ಷರ್‌ ಪಟೇಲ್‌, ಅಮಿತ್‌ ಮಿಶ್ರಾ, ರಬಾಡ, ಇಶಾಂತ್‌ ಶರ್ಮಾ, ಅವೇಶ್‌ ಖಾನ್‌

ಕೆಕೆಆರ್‌: ಶುಭಮನ್‌ ಗಿಲ್‌, ನಿತೇಶ್‌ ರಾಣಾ, ರಾಹುಲ್‌ ತ್ರಿಪಾಠಿ, ಸುನಿಲ್‌ ನರೈನ್‌, ಇಯಾನ್‌ ಮಾರ್ಗನ್‌(ನಾಯಕ), ರಸೆಲ್‌, ದಿನೇಶ್‌ ಕಾರ್ತಿಕ್‌, ಪ್ಯಾಟ್‌ ಕಮ್ಮಿನ್ಸ್‌, ಶಿವಂ ಮಾವಿ, ಪ್ರಸಿದ್ಧ ಕೃಷ್ಣ, ವರುಣ್‌ ಚಕ್ರವರ್ತಿ

ಸ್ಥಳ: ಅಹಮದಾಬಾದ್‌ 
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

click me!