ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಬ್ಯಾಟಿಂಗ್ ಕಡೆಗೆ ಹೆಚ್ಚು ಗಮನ ಕೇಂದ್ರಿಕರಿಸಿದ್ದಾರೆ. ಕಳೆದ ಟೆಸ್ಟ್ ಪಂದ್ಯದಲ್ಲಿ ಸಿಕ್ಸರ್ ಮೂಲಕ ಅಬ್ಬರಿಸಿದ ಉಮೇಶ್‌ಗೆ ನಾಯಕ ವಿರಾಟ್ ಕೊಹ್ಲಿ ಹೊಸ ಆಫರ್ ನೀಡಿದ್ದಾರೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಲು ಕೊಹ್ಲಿ ಮುಂದಾಗಿದ್ದಾರೆ.
ನವದೆಹಲಿ(ಡಿ.02): ಕಳೆದೆರಡು ಟೆಸ್ಟ್ ಸರಣಿಗಳಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ನಲ್ಲಿ ವೇಗಿ ಉಮೇಶ್ ಯಾದವ್ ಅಭಿಮಾನಿಗಳನ್ನು ರಂಜಿಸಿದ್ದರು. ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಬಳಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಪ್ರಶ್ನಿಸಿದಾಗ, ‘7ನೇ ಕ್ರಮಾಂಕದ ತನಕವೂ ನಮ್ಮ ಬ್ಯಾಟಿಂಗ್ ಬಲವಾಗಿದೆ. ಇಷ್ಟೇ ವೇಗಿ ಉಮೇಶ್ ಯಾದವ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಲಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: RCBಗೆ ಹೊಸ ಆರಂಭಿಕ ಬ್ಯಾಟ್ಸ್‌ಮನ್; KKR ರೀತಿಯಲ್ಲೇ ಪ್ರಯೋಗ!
undefined
ಉಮೇಶ್ ಬ್ಯಾಟಿಂಗ್ ಪರಿ ನೋಡಿದರೆ 3ನೇ ಕ್ರಮಾಂಕ ಅಥವಾ ಪಿಂಚ್ ಹಿಟ್ಟರ್ ಆಗಿ ಬ್ಯಾಟ್ ಮಾಡುವ ಸಾಧ್ಯತೆಯಿದೆ’ ಎಂದು ತಮಾಷೆ ಮಾಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿ ಟೆಸ್ಟ್ನಲ್ಲಿ 10 ಎಸೆತಗಳಲ್ಲಿ 31 ರನ್ ಗಳಿಸಿದ್ದು, ಟೆಸ್ಟ್ ಕ್ರಿಕೆಟ್ನಲ್ಲೇ ಅತಿವೇಗದ 30 ಪ್ಲಸ್ ರನ್ ದಾಖಲೆ ಬರೆದಿದ್ದರು. ಎದುರಿಸಿದ ಮೊದಲೆರಡು ಎಸೆತಗಳನ್ನು ಸಿಕ್ಸರ್‌ಗಟ್ಟಿ ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಿದ್ದರು.
ಇದನ್ನೂ ಓದಿ: ಉಮೇಶ್ ಯಾದವ್ ಲಾಸ್ಟ್ ಓವರ್- ಇಲ್ಲಿದೆ ಟ್ವಿಟರ್ ಪ್ರತಿಕ್ರಿಯೆ!
ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ವೇಗಿಯಾಗಿರುವ ಉಮೇಶ್ ಯಾದವ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಕೆಕೆಆರ್ ತಂಡ ಸುನಿಲ್ ನರೈನ್ ಆರಂಭಿಕನಾಗಿ ಕಣಕ್ಕಿಳಿಸಿದ ರೀತಿಯಲ್ಲೇ, ಆರ್‌ಸಿಬಿ ಉಮೇಶ್ ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಕೊಹ್ಲಿ ತಮಾಷೆ ಕುತೂಹಲವನ್ನು ಹೆಚ್ಚಿಸಿದೆ.