ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ಮಿನ್ನು ಮಣಿ
ಮಿನ್ನು ಮಣಿ ಕೇರಳದ ವಯನಾಡಿನ ಬುಡಕಟ್ಟು ಜನಾಂಗದ ಕ್ರಿಕೆಟರ್
ದೇಶಿ ಕ್ರಿಕೆಟ್‌ನಲ್ಲಿ ಆಲ್ರೌಂಡ್ ಆಟದ ಮೂಲಕ ಮಿಂಚಿರುವ ಮಿನ್ನು ಮಣಿ
ಕೊಚ್ಚಿ(ಜು.03): ಬುಡಕಟ್ಟು ಜನಾಂಗದ ಹುಡುಗಿ ಮಿನ್ನು ಮಣಿ ಇದೀಗ ಕನಸು ನನಸಾಗಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸು ಕನಸು ನನಸಾಗಿಸಿಕೊಳ್ಳಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ಕೇರಳ ಮೂಲದ ಆಲ್ರೌಂಡರ್ ಮಿನ್ನು ಮಣಿ, ಇದೇ ಮೊದಲ ಬಾರಿಗೆ ಭಾರತೀಯ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಯನಾಡು ಮೂಲದ 24 ವರ್ಷದ ಮಿನ್ನು ಮಣಿ, ಇದೀಗ ಬಾಂಗ್ಲಾದೇಶ ಎದುರಿನ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಬಾಂಗ್ಲಾದೇಶ ವಿರುದ್ದ ಜುಲೈ 09ರಿಂದ ಭಾರತದ ಸರಣಿ ಆರಂಭವಾಗಲಿದೆ.
undefined
ಈ ಮೊದಲು ಮಿನ್ನು ಮಣಿ, ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡ ಕೇರಳದ ಮೊದಲ ಮಹಿಳಾ ಕ್ರಿಕೆಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಆಟಗಾರ್ತಿಯರ ಹರಾಜಿನಲ್ಲಿ 30 ಲಕ್ಷ ರುಪಾಯಿ ನೀಡಿ ಮಿನ್ನು ಮಣಿ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
Ashes 2023: ಲಾರ್ಡ್ಸ್ ಟೆಸ್ಟ್ ಗೆಲುವಿನ ಬೆನ್ನಲ್ಲೇ ಆಸೀಸ್‌ಗೆ ಶಾಕ್; ಸ್ಟಾರ್ ಕ್ರಿಕೆಟಿಗ ಟೂರ್ನಿಯಿಂದಲೇ ಔಟ್..!
ಮಿನ್ನು ಮಣಿ, ವಯನಾಡಿನಲ್ಲಿರುವ ಚೋಯಿಮೋಳದ ಕುರಿಚಿಯ ಎನ್ನುವ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಮಿನ್ನು ಮಣಿ ಅವರ ತಂದೆ ಮಣಿ ಸಿಕೆ, ದಿನಗೂಲಿ ನೌಕರರಾಗಿದ್ದಾರೆ. ಇನ್ನು ಮಿನ್ನು ಮಣಿ ಅವರ ತಾಯಿ ವಸಂತಾ ಗೃಹಿಣಿಯಾಗಿದ್ದಾರೆ. ತಮ್ಮ 10ನೇ ವಯಸ್ಸಿನಿಂದಲೇ ಕ್ರಿಕೆಟ್ ಆಡಲಾರಂಭಿಸಿದರು. ಹುಡುಗರ ಜತೆ ಮಿನ್ನು ಮಣಿ ಗದ್ದೆ ಬಯಲಿನಲ್ಲಿ ಕ್ರಿಕೆಟ್ ಆಡಲಾರಂಭಿಸಿದ್ದರು. ಇದಾದ ಬಳಿಕ 8ನೇ ತರಗತಿಗೆ ಇಡಪ್ಪಾಡಿಯಲ್ಲಿರುವ ಸರ್ಕಾರಿ ಪ್ರೌಢ ಶಾಲೆಗೆ ಸೇರಿದ ಬಳಿಕ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸಿದರು.
ಮಿನ್ನು ಮಣಿ ತಮ್ಮ 16ನೇ ವಯಸ್ಸಿಗೆ ಕೇರಳ ರಾಜ್ಯ ಮಹಿಳಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಮಿನ್ನು ಮಣಿ ಹಿಂತಿರುಗಿ ನೋಡುವ ಪ್ರಶ್ನೆಯೇ ಬರಲಿಲ್ಲ. ಕಳೆದೊಂದು ದಶಕದಲ್ಲಿ ಮಿನ್ನು ಮಣಿ ಕೇರಳ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯ ಅಖಿಲ ಭಾರತ ಮಹಿಳಾ ಏಕದಿನ ಟೂರ್ನಿಯಲ್ಲಿ ಮಿನ್ನು ಮಣಿ 8 ಪಂದ್ಯಗಳನ್ನಾಡಿ 246 ರನ್ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ 12 ವಿಕೆಟ್ ಕಬಳಿಸಿದ್ದಾರೆ.
ಮಿನ್ನು ಮಣಿ ಚಾಲೆಂಜರ್ ಟ್ರೋಫಿಯಲ್ಲಿ ಭಾರತ 'ಎ' ಹಾಗೂ ಭಾರತ 'ಬಿ' ತಂಡವನ್ನು ಪ್ರತಿನಿಧಿಸಿದ್ದಾರೆ. ಆದರೆ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿನ್ನು ರಾಣಿ ಕೇವಲ ಒಮ್ಮೆ ಮಾತ್ರ ಬ್ಯಾಟಿಂಗ್ ಮಾಡಲು ಕಣಕ್ಕಿಳಿದ್ದರು. ಇದೀಗ ಭಾರತ ಭಾರತ ತಂಡದ ಪರ ಮಿಂಚಲು ಮಿನ್ನು ಮಣಿ ತುದಿಗಾಲಿನಲ್ಲಿ ನಿಂತಿದ್ದಾರೆ.