
ಬೆಂಗಳೂರು(ಜು.03) ಕ್ರಿಕೆಟ್ ಜಗತ್ತಿನಲ್ಲಿ ಆ್ಯಷಸ್ ಟೆಸ್ಟ್ ಸರಣಿಗಿರೋ ಕ್ರೇಝೇ ಬೇರೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಈ ಸರಣಿ ಪ್ರತಿಷ್ಠೆಯ ಕಣ. ಗೆಲುವಿಗಾಗಿ ಎರಡೂ ತಂಡಗಳು ಆಟಗಾರರು ಜಿದ್ದಿಗೆ ಬಿದ್ದವರಂತೆ ಕಾದಾಡ್ತಾರೆ. ನೋವಿನಲ್ಲೂ ತಂಡದ ಗೆಲುವಿಗಾಗಿ ಹೋರಾಡ್ತಾರೆ. ಅದರಂತೆ ಈ ಬಾರಿಯ ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ನೇಥನ್ ಲಯನ್ ಇಂಜುರಿ ನಡುವೆ ಫೀಲ್ಡ್ಗಿಳಿದು ಬ್ಯಾಟಿಂಗ್ ಮಾಡಿದ್ದಾರೆ. ಲಯನ್ರ ಈ ಕೆಚ್ಚೆದೆಯ ಆಟಕ್ಕೆ ಅಭಿಮಾನಿಗಳ ಫಿದಾ ಆಗಿದ್ದಾರೆ.
ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ನಡೆದ ಸರಣಿಯ 2ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ವೇಳೆ ಲೈಯನ್ ಇಂಜುರಿಗೊಳಗಾಗಿದ್ರು. ಇದರಿಂದ ಅರ್ಧದಲ್ಲೇ ಮೈದಾದಿಂದ ಹೊರನಡೆದಿದ್ರು. ನಡೆಯೋಕು ಸಾಧ್ಯವಾಗದೇ ಸ್ಟಿಕ್ ಸಹಾಯದಿಂದ ಹೆಜ್ಜೆ ಹಾಕಿದ್ರು. ಇದರಿಂದ ಲಯನ್ ಮತ್ತೆ ಗ್ರೌಂಡ್ಗಿಳಿಯಲ್ಲ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ, ಆಸಿಸ್ 2ನೇ ಇನ್ನಿಂಗ್ಸ್ ವೇಳೆ 9ನೇ ವಿಕೆಟ್ ಬಿದ್ದಾಗ ಪಂದ್ಯ ವೀಕ್ಷಿಸುತ್ತಿದ್ದವರಿಗೆ ಶಾಕ್ ಕಾದಿತ್ತು. ಲಯನ್ ನೋವಿನಲ್ಲೂ ಹಿಡಿದು ಬಂದ್ರು.
Ashes 2023: ಲಾರ್ಡ್ಸ್ ಟೆಸ್ಟ್ ಗೆಲುವಿನ ಬೆನ್ನಲ್ಲೇ ಆಸೀಸ್‌ಗೆ ಶಾಕ್; ಸ್ಟಾರ್ ಕ್ರಿಕೆಟಿಗ ಟೂರ್ನಿಯಿಂದಲೇ ಔಟ್..!
ತೀವ್ರ ನೋವಿನಲ್ಲೂ ನೇಥನ್ ಲಯನ್ ರನ್ಗಾಗಿ ಓಡಿದ್ರು. ಸ್ಟುವರ್ಟ್ ಬ್ರಾಡ್ ಬೌಲಿಂಗ್ನಲ್ಲಿ ಒಂದು ಫೋರ್ ಕೂಡ ಬಾರಿಸಿದ್ರು. ಲಯನ್ ಕಮಿಟ್ಮೆಂಟ್ ಕಂಡು ತಂಡದ ಆಟಗಾರರು, ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ರು. 13 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಬಾರಿಸಿ ಲಯನ್ ಔಟಾದ್ರು. ಲಯನ್ ಪೆವಿಲಿಯನ್ಗೆ ತೆರಳುವಾಗ ಅಭಿಮಾನಿಗಳು ಸ್ಟ್ಯಾಂಡಿಂಗ್ ಓವೇಷನ್ ನೀಡಿದ್ರು.
ನೋವಿನಲ್ಲೂ ದೇಶಕ್ಕಾಗಿ ಹೋರಾಡಿದ್ದ ಭಾರತದ ಕ್ರಿಕೆಟರ್ಸ್..!
ಯೆಸ್, ಭಾರತದ ಹಲವು ಕ್ರಿಕೆಟರ್ಸ್ ಸಹ ತಂಡದ ಗೆಲುವಿಗಾಗಿ ನೋವಿನಲ್ಲೂ ಮೈದಾನದಲ್ಲಿ ಹೋರಾಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಕ್ಯಾನ್ಸರ್ ಮಹಾಮಾರಿಯನ್ನು ಲೆಕ್ಕಿಸದೇ ಟೂರ್ನಿಯುದ್ಧಕ್ಕೂ ಆಡಿದ್ರು. ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ರು. ಆ ಮೂಲಕ ಭಾರತ ಎರಡನೇ ಬಾರಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ರು.
BCCIಗೆ ಮತ್ತೆ ನೆನಪಾದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್..!
ಇನ್ನು ಅನಿಲ್ ಕುಂಬ್ಳೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ತಲೆಗೆ ಪೆಟ್ಟು ಬಿದ್ದಿದ್ದರೂ, ಬ್ಯಾಂಡೇಜ್ ಕಟ್ಟಿಕೊಂಡು ಬೌಲಿಂಗ್ ಮಾಡಿದ್ರು. ಇದೇ ವರ್ಷ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ಕೈ ಬೆರಳಿನ ಗಾಯದ ನಡುವೆಯು ಬ್ಯಾಟ್ ಬೀಸಿದ್ರು. ಅದೇನೆ ಇರಲಿ, ಈ ಎಲ್ಲಾ ಕ್ರಿಕೆಟರ್ಗಳ ಬದ್ಧತೆಗೆ ಸಲಾಂ ಹೇಳಲೇಬೇಕು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.