ರಣ್ವೀರ್-ದೀಪಿಕಾ ನಟಿಸಿದ ನೂರಾರು ಕೋಟಿ ಸಿನಿಮಾದಲ್ಲಿ ಈ ಸ್ಟಾರ್ ಕ್ರಿಕೆಟಿಗನ ಮಗಳಿದ್ದಾಳೆ!

By Naveen KodaseFirst Published Sep 16, 2023, 4:24 PM IST
Highlights

1983ರಲ್ಲಿ ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್ ಅವರ ಜೀವನಾಧಾರಿತ ಚಿತ್ರ '83' ಸಿನಿಮಾದಲ್ಲಿ ಅಮಿಯಾ ದೇವ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. 83 ಸಿನಿಮಾದಲ್ಲಿ, 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಂಡರ್ ಡಾಗ್ ಎನಿಸಿಕೊಂಡಿದ್ದ ಟೀಂ ಇಂಡಿಯಾ, ಕಪಿಲ್ ದೇವ್ ನಾಯಕತ್ವದಲ್ಲಿ ಹೇಗೆ ಬಲಾಢ್ಯ ತಂಡಗಳನ್ನು ಮಣಿಸಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು ಎನ್ನುವುದನ್ನು ಮನಮುಟ್ಟುವಂತೆ ಚಿತ್ರೀಕರಿಸಲಾಗಿದೆ.

ಬೆಂಗಳೂರು: 2023ರ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಹಲವು ಕ್ರಿಕೆಟ್ ಅಭಿಮಾನಿಗಳು ದೇಶಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಸಾಧನೆಯನ್ನು ಮೆಲುಕು ಹಾಕಲಾರಂಭಿಸಿದ್ದಾರೆ. 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಲಾಢ್ಯ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದ ಕಪಿಲ್ ಡೆವಿಲ್ಸ್ ಪಡೆ ದೈತ್ಯ ಸಂಹಾರ ಮಾಡಿ ಬೀಗಿತ್ತು. ಕಪಿಲ್ ದೇವ್ ಭಾರತ ಕ್ರಿಕೆಟ್ ಕಂಡ ಸಾರ್ವಕಾಲಿಕ ದಿಗ್ಗಜ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಕಪಿಲ್ ದೇವ್ ಕ್ರೀಡಾ ಕ್ಷೇತ್ರದ ಮೇರು ಶಿಖರವೇ ಆಗಿ ಬೆಳೆದು ನಿಂತರೂ ಅವರ ಮಗಳು ಅಮಿಯಾ ದೇವ್, ಕ್ರೀಡೆಯನ್ನು ತಮ್ಮ ವೃತ್ತಿಜೀವನವನ್ನಾಗಿ ಆಯ್ಕೆ ಮಾಡಲಿಲ್ಲ.

ಕಪಿಲ್ ದೇವ್ ತಾವು ಕ್ರಿಕೆಟ್ ಆಡುವ ಕಾಲಘಟ್ಟದಲ್ಲಿಯೇ ದಿಗ್ಗಜ ಆಟಗಾರನಾಗಿ ಹೊರಹೊಮ್ಮಿದ್ದರು. ಹೀಗಿದ್ದೂ ಕಪಿಲ್ ದೇವ್ ಮಗಳು ಅಮಿಯಾ ದೇವ್, ಕ್ರೀಡೆಯಿಂದ ದೂರವಿದ್ದು, ತಮ್ಮದೇ ಸ್ವತಂತ್ರ ಹಾದಿಯಲ್ಲಿ ಬದುಕು ಕಟ್ಟಿಕೊಳ್ಳಲು ತೀರ್ಮಾನಿಸಿದರು. ಹೀಗಾಗಿ ಅಮಿಯಾ ದೇವ್ ಸಿನಿಮಾ ಕ್ಷೇತ್ರದಲ್ಲಿ ತಮ್ಮ ಆಸಕ್ತಿಯನ್ನು ಬಳಸಿಕೊಂಡರು. ಅಮಿಯಾ ದೇವ್ ಹಲವಾರು ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಈ ಪೈಕಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ನೂರಾರು ಕೋಟಿ ಬಜೆಟ್‌ನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತ ಎದುರಿನ ಏಷ್ಯಾಕಪ್ ಫೈನಲ್‌ಗೂ ಮುನ್ನ ಶ್ರೀಲಂಕಾಗೆ ಬಿಗ್ ಶಾಕ್‌..! ಗಾಯದ ಮೇಲೆ ಬರೆ ಎಳೆದಂತಾದ ಲಂಕಾ ಪಾಡು

ಕಪಿಲ್ ದೇವ್ ಪುತ್ರಿ ಅಮಿಯಾ ದೇವ್ ಸಿನಿಮಾ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅವರು ತಮ್ಮ 27ನೇ ವಯಸ್ಸಿನಲ್ಲಿಯೇ ಸಿನಿಮಾ ಡೈರೆಕ್ಟರ್ ಆಗಲು ಪ್ರಯತ್ನಿಸಿದರು. ಅಮಿಯಾ ದೇವ್, ಈಗಾಗಲೇ ಹಲವಾರು ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಈ ಪೈಕಿ ತಮ್ಮ ತಂದೆಯ ಜೀವನಾಧಾರಿತ ಬಯೋಪಿಕ್ '83' ಸಿನಿಮಾದಲ್ಲಿಯೂ ಕೆಲಸ ಮಾಡಿದ್ದಾರೆ.

1983ರಲ್ಲಿ ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್ ಅವರ ಜೀವನಾಧಾರಿತ ಚಿತ್ರ '83' ಸಿನಿಮಾದಲ್ಲಿ ಅಮಿಯಾ ದೇವ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. 83 ಸಿನಿಮಾದಲ್ಲಿ, 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಂಡರ್ ಡಾಗ್ ಎನಿಸಿಕೊಂಡಿದ್ದ ಟೀಂ ಇಂಡಿಯಾ, ಕಪಿಲ್ ದೇವ್ ನಾಯಕತ್ವದಲ್ಲಿ ಹೇಗೆ ಬಲಾಢ್ಯ ತಂಡಗಳನ್ನು ಮಣಿಸಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು ಎನ್ನುವುದನ್ನು ಮನಮುಟ್ಟುವಂತೆ ಚಿತ್ರೀಕರಿಸಲಾಗಿದೆ. ರಣ್‌ವೀರ್ ಸಿಂಗ್, ಕಪಿಲ್ ದೇವ್ ಪಾತ್ರಕ್ಕೆ ಜೀವ ತುಂಬಿದ್ದರು. ಕಪಿಲ್ ದೇವ್ ಪತ್ನಿಯ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು.

ಆಫ್ಘಾನ್ ಕ್ರಿಕೆಟಿಗ ರಶೀದ್ ಖಾನ್ ಜತೆ ಪೋಸ್ ಕೊಟ್ಟ ರಣ್ಬೀರ್ ಕಪೂರ್, ಆಲಿಯಾ ಭಟ್..! ಫೋಟೋ ವೈರಲ್

Ranveer getting emotional after finding out that they shot with the real 83 trophy. Kapil Dev’s daughter Amiya hugging Ranveer. 🥺❤️ pic.twitter.com/bdANnjCwBY

— Khadeejah❤️Ranveer (@KhadeejahRS)

ಅಮಿಯಾ ದೇವ್ 2019ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಕಬೀರ್ ಖಾನ್ ನಿರ್ದೇಶನದ '83' ಸಿನಿಮಾಗೆ ಸಹಾಯಕ ನಿರ್ದೇಶಕಿಯಾಗಿ ಸಿನಿಮಾಗೆ ಬಹುಮುಖ್ಯವಾಗಿ ಬೇಕಾಗಿದ್ದು ಹಲವಾರು ಉಪಯುಕ್ತ ಇನ್‌ಪುಟ್ ನೀಡಿದ್ದಾರೆ. ತಮ್ಮ ತಂದೆ ಕಪಿಲ್ ದೇವ್ ಅವರ ಜೀವನ ಹಾಗೂ ಹೋರಾಟದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳು ತೆರೆಯ ಮೇಲೆ ಸಹಜವಾಗಿ ಮೂಡಿ ಬರಲು ಅಮಿಯಾ ದೇವ್ ಅವರ ಕೈಚಳಕವನ್ನು ಯಾರೂ ಮರೆಯಲು ಸಾಧ್ಯವಿಲ್ಲ.

click me!