ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಾಯಿ ಮನೆಯಲ್ಲಿ ದುಬಾರಿ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಘಟನೆ ಬೆಳಕಿಗೆ ಬಂದಿದೆ. ಕ್ಲೀನಿಂಗ್, ಅಡುಗೆ ಮಾಡುತ್ತಲೇ ಸ್ಕೆಚ್ ಹಾಕಿದ್ದ ಮನೆಗೆಸಲಗಾರರು ಲಕ್ಷ ಲಕ್ಷ ರೂ ಮೌಲ್ಯದ ಚಿನ್ನಾಭರಣ ನಗದು ಕಳ್ಳತನ ಮಾಡಿದ್ದಾರೆ.
ಪಂಚಕುಲಾ(ಫೆ.17) ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಾಯಿ ಶಬನಮ್ ಸಿಂಗ್ ಮನೆಯಲ್ಲಿ ಕಳ್ಳತನ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹರ್ಯಾಣದ ಪಂಚಕುಲದಲ್ಲಿರುವ ಶಬನಮ್ ಸಿಂಗ್ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಯುವಿ ತಾಯಿ ಮನೆಯಲ್ಲಿ ಇಲ್ಲದ ವೇಳೆ ಕಳ್ಳರು ಹಣ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮನೆಯಲ್ಲಿ ಅಡುಗೆ ಹಾಗೂ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಇಬ್ಬರು ಮನೆಗೆಸಲದರ ವಿರುದ್ಧ ಎಂಸಿಡಿ ಪೊಲೀಸ್ ಠಾಣೆಯಲ್ಲಿ ಶಬನಮ್ ಸಿಂಗ್ ದೂರು ದಾಖಲಿಸಿದ್ದಾರೆ.
ಈ ಕಳ್ಳತನ 2023ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿದೆ. ಆದರೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಶಬನಮ್ ಸಿಂಗ್ ತಮ್ಮ ಮನೆಯ ಕೆಲಸಕ್ಕಾಗಿ ಇಬ್ಬರನ್ನು ನೇಮಿಸಿದ್ದಾರೆ. ಸಾಕೇತ್ರಿಯ ಲಲಿತಾ ದೇವಿಯನ್ನು ಮನೆ ಕ್ಲೀನ್ ಮಾಡಲು ಹಾಗೂ ಬಿಹಾರದ ಶಲಿಂದರ್ ದಾಸ್ ಅವರನ್ನು ಅಡಡುಗೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಸೆಪ್ಟೆಂಬರ್ 3, 2023ರಂದು ಶಬನಮ್ ಸಿಂಗ್ ತಮ್ಮ ಪಂಚಕುಲಾ ಮನೆಯಿಂದ ಗುರುಗ್ರಾಂಗೆ ತೆರಳಿದ್ದಾರೆ.
ನಾನು ಧೋನಿ ಕ್ಲೋಸ್ ಫ್ರೆಂಡ್ಸ್ ಅಲ್ಲವೇ ಅಲ್ಲ : ಹೊಸ ಬಾಂಬ್ ಸಿಡಿಸಿದ ಯುವಿ..!
ಸರಿಸುಮಾರು ಒಂದು ತಿಂಗಳು ಗುರುಗ್ರಾಂನಲ್ಲೇ ತಂಗಿದ್ದ ಶಬಮನ್ ಸಿಂಗ್, ಅಕ್ಟೋಬರ್ 5, 2023ರಂದು ಪಂಚಕುಲಾ ಮನೆಗೆ ಮರಳಿದ್ದಾರೆ. ಈ ಒಂದು ತಿಂಗಳಲ್ಲಿ ಕ್ಲೀನಿಂಗ್ ಮಾಡಲು ನೇಮಿಸಿದ್ದ ಲಲಿತಾ ದೇವಿ ಎರಡು ದಿನಕ್ಕೊಮ್ಮೆ ಆಗಮಿಸಿ ಮನೆಯನ್ನು ಶುಚಿಯಾಗಿಡುವ ಜವಾಬ್ದಾರಿಯನ್ನೂ ನೀಡಲಾಗಿತ್ತು. ಇದರಂತೆ ಮನೆಕೆಲಸದಾಕೆ ಮನೆ ಕ್ಲೀನ್ ಮಾಡಿದ್ದಾಳೆ.
ಇತ್ತ ಪಂಚುಕುಲಾಗೆ ವಾಪಸ್ ಆದ ಶಬನಮ್ ಸಿಂಗ್ ತಮ್ಮ ಎಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರ ಶಬಮನ್ ಸಿಂಗ್ ವಾಪಸ್ ಆದ ಬೆನ್ನಲ್ಲೇ ಇಬ್ಬರು ಮನೆಕೆಸದವರು ತೊರೆದಿದ್ದಾರೆ. ಸೆಪ್ಟೆಂಬರ್ ತಿಂಗಳ ವೇತನ ಪಡೆದ ಬಳಿಕ ಕೆಲಸಕ್ಕೆ ಆಗಮಿಸಿಲ್ಲ. ತವರಿಗೆ ಮರಳುತ್ತಿರುವುದಾಗಿ ಹೇಳಿ ಬಳಿಕ ಫೋನ್ ಸ್ವಿಚ್ ಮಾಡಿದ್ದಾರೆ.
ಮನೆಕೆಲಸದವರಿಲ್ಲದ ಕಾರಣ ಮತ್ತೊಬ್ಬ ಕೆಲಸದವರನ್ನು ಹುಡುಕುವುದು ಪ್ರಯಾಸದ ಕೆಲಸವಾಗಿತ್ತು. ಇದರ ನಡುವೆ ಮನಕೆಲಸ ಸೇರಿದಂತೆ ತಾವೇ ಮಾಡಿಕೊಂಡಿದ್ದರು. ಕೆಲ ದಿನಗಳ ಬಳಿಕ ಕಾರ್ಯಕ್ರಮದ ನಿಮಿತ್ತ ಆಭರಣಗಳನ್ನು ತೆಗೆಯಲು ನೋಡಿದಾಗ ನಾಪತ್ತೆಯಾಗಿತ್ತು. ಬರೋಬ್ಬರಿ 2 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ನಾಪತ್ತೆಯಾಗಿತ್ತು. ಇದರ ಜೊತೆಗೆ 75,000 ರೂಪಾಯಿ ನಗದು ಹಣವೂ ನಾಪತ್ತೆಯಾಗಿತ್ತು.
ಬಲವಾದ ಇಚ್ಚಾಶಕ್ತಿಯಿಂದ ಕ್ಯಾನ್ಸರ್ ಗೆದ್ದು ಬಂದ್ರು ಕ್ರಿಕೇಟರ್ ಯುವರಾಜ್ ಸಿಂಗ್
ಸಂಪೂರ್ಣ ಮನೆ ತಡಕಾಡಿದ ಶಬನಮ್ ಸಿಂಗ್‌ಗೆ ಆಭರಣ ಕಳ್ಳತನವಾಗಿದ್ದು ಅರಿವಾಗಿದೆ. ಹೀಗಾಗಿ ತಕ್ಷಣವೇ ಎಂಸಿಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಬ್ಬರು ಅಡುಗೆ ಕೆಲಸದವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಮನೆಗೆಲಸದವರು ಸುಳಿವಿಲ್ಲ. ಇದುವರೆಗೆ ಈ ಪ್ರಕರಣ ಸಂಬಂಧ ಯಾರನ್ನೂ ಅರೆಸ್ಟ್ ಮಾಡಿಲ್ಲ.