
ಬೆಂಗಳೂರು (ಫೆ.16): ಡಿಪಿ ವರ್ಲ್ಡ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಶುಕ್ರವಾರ ಹೊಸ ದೀರ್ಘಾವಧಿ ಪಾಲುದಾರಿಕೆ ಒಪ್ಪಂದವನ್ನು ಘೋಷಣೆ ಮಾಡಿದೆ. ಡಿಪಿ ವರ್ಲ್ಡ್, ಈಗ 2024 ರಿಂದ ದೆಹಲಿ ಕ್ಯಾಪಿಟಲ್ಸ್‌ನ ಮಹಿಳಾ ತಂಡದ ಶೀರ್ಷಿಕೆ ಪಾಲುದಾರರಾಗಿದ್ದಾರೆ. ತಂಡದೊಂದಿಗೆ ಬಹು ವರ್ಷದ ಒಪ್ಪಂದವನ್ನು ಕಂಪನಿ ಘೋಷಣೆ ಮಾಡಿದೆ. ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಪಿ ವರ್ಲ್ಡ್ ತನ್ನ ಒಪ್ಪಂದವನ್ನು ಘೋಷಣೆ ಮಾಡಿತು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಹಾಗೂ ಅಲೀಸ್ ಕ್ಯಾಪ್ಸಿ ಕೂಡ ಹಾಜರಿದ್ದರು. ಟೀಮ್‌ನ ಹೊಸ ಜೆರ್ಸಿ ಅನಾವರಣ ಮಾಡಿ ಮಾತನಾಡಿದ ತಂಡ ಪ್ರಮುಖ ಆಟಗಾರ್ತಿ ಜೆಮಿಮಾ ರೋಡ್ರಿಗಸ್, ಕ್ರಿಕೆಟ್ ತಮ್ಮಂತ ಆಟಗಾರ್ತಿಯರಿಗೆ ಹೇಗೆ ವರವಾಗಿ ಬಂದಿದೆ ಎನ್ನುವುದನ್ನು ವಿವರಿಸಿದರು. ಡಬ್ಲ್ಯುಪಿಎಲ್‌ನಲ್ಲಿ ತಾವು ಮಾಡುವ ಸ್ನೇಹವು ಜೀವಮಾನದ ಕೊನೆಯವರೆಗೂ ಇರಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಕ್ರಿಕೆಟ್ ಆಡುತ್ತಿರುವುದೇ ನನಗೆ ವರವಿದ್ದಂತೆ. ಇದು ಕೇವಲ ನನ್ನ ಹಾಗೂ ನನ್ನ ಆಟ ಮಾತ್ರವೇ ಅಲ್ಲ. ಅದರೊಂದಿಗೆ ತಂಡದ ಇತರರೊಂದಿಗೆ ಮಾಡುವ ಸ್ನೇಹ ಅವರ ಸಂವಾದವೂ ಸೇರಿದೆ. ಇದು ಲೈಫ್‌ಟೈಮ್ ಪೂರ್ತಿ ಇರಬೇಕು. ನಮ್ಮ ಸಂಸ್ಕೃತಿಗಿಂತ ಬಹಳ ಭಿನ್ನವಾದ ಜನರನ್ನು ಇಲ್ಲಿ ಭೇಟಿ ಮಾಡುತ್ತೇವೆ. ಅವರ ಸಂಸ್ಕೃತಿ ನಮ್ಮ ಅರಿವಿಗೆ ಬರುತ್ತದೆ. ಇದಕ್ಕಿಂತ ಹೆಚ್ಚಿನದನ್ನು ನಾನು ನಿರೀಕ್ಷೆ ಮಾಡಿಲ್ಲ' ಎಂದು ಜೆಮಿಮಾ ಹೇಳಿದ್ದಾರೆ.
ಇಂಗ್ಲೆಂಡ್ ತಂಡದ ಆಟಗಾರ್ತಿಯಾಗಿರುವ ಅಲೀಸ್ ಕ್ಯಾಪ್ಸಿ, ಡೆಲ್ಲಿ ಕ್ಯಾಪಿಟಲ್ಸ್ ತಂಡ ತಮ್ಮನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಖುಷಿಯಾಗಿದೆ ಎಂದರು. ಈ ಫ್ರಾಂಚೈಸಿ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಭಾರತದ ಕ್ರಿಕೆಟ್ ಪ್ರೀತಿ ಏನು ಅನ್ನೋದು ಎಲ್ಲರಿಗೂ ಗೊತ್ತಿದೆ. ಬೇರೆ ದೇಶದ ಪ್ರಜೆಯಾಗಿದ್ದರೂ, ಕ್ರಿಕೆಟ್ ವಿಚಾರದಲ್ಲಿ ಭಾರತದೊಂದಿಗೆ ನಾನು ಕನೆಕ್ಟ್ ಆಗಿಯೇ ಇರುತ್ತೇನೆ ಎಂದು ಹೇಳಿದ್ದಾರೆ. ವಿದೇಶ ಆಟಗಾರ್ತಿ ಏನು ಕನಸು ಕಾಣುತ್ತಾರೋ ಅದು ನನಗೆ ನನಸಾಗಿದೆ. ಇಷ್ಟು ದೊಡ್ಡ ಪ್ರಮಾಣದ ಜನರ ನಡುವೆ ಆಡುವುದು ಹಾಗೂ ಈ ಫ್ರಾಂಚೈಸಿಯ ಭಾಗವಾಗಿರುವುದು ಬಹಳ ವಿಶೇಷ ಅನುಭವ ಎಂದಿದ್ದಾರೆ.
ಜೆಮಿಮಾ ಅವರ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿದ ಅಲೀಸ್ ಕ್ಯಾಪ್ಸಿ, 'ನಾವು ಈಗ ತಾನೆ ಭಾರತದ ವಿರುದ್ಧ ಒಂದು ಸರಣಿ ಆಡಿದ್ದೇವೆ. ಎರಡು ದೇಶಗಳು ಒಂದಾಗ ಹೊಸದನ್ನೇನೋ ಕಲಿಸುವುದು ಸುಂದರವಾದ ಸಂಗತಿ. ಇಂಥದ್ದೊಂದು ಸ್ನೇಹ, ಭಿನ್ನ ಸಂಸ್ಕೃತಿಯ ಜನರು ಈ ಟೂರ್ನಿಯಲ್ಲಿರುವುದು ಖುಷಿಯಾಗಿದೆ ಎಂದರು.
ಟೆಸ್ಟ್‌ಗೆ ಡೆಬ್ಯೂ ಮಾಡಿದ ಸರ್ಫರಾಜ್ ಖಾನ್ ತಂದೆಗೆ ಥಾರ್ ಗಿಫ್ಟ್ ಘೋಷಿಸಿದ ಆನಂದ್ ಮಹೀಂದ್ರ!
ಕಳೆದ ಕೆಲವು ತಿಂಗಳಿನಿಂದ ನನಗೆ ಜೆಮಿ ಪರಿಚಯವಾಗಿದೆ. ನಾವು ಡಬ್ಲ್ಯುಬಿಬಿಎಲ್ ಟೂರ್ನಿಯಲ್ಲಿ ಜೊತೆಯಾಗಿ ಆಡಿದ್ದೇವೆ. ಹರಟೆ ಹೊಡೆದಿದ್ದೇವೆ. ಆಕೆಯೊಂದಿಗೆ ಮತ್ತೊಮ್ಮೆ ತಂಡದಲ್ಲಿ ಭಾಗಿಯಾಗುವುದು ಖುಷಿ. ಎಲ್ಲಾ ದೇಶಗಳು ತಮ್ಮಲ್ಲಿ ಕ್ರಿಕೆಟ್ ಅಭಿವೃದ್ಧಿ ಆಗಬೇಕು ಎಂದು ಬಯಸುತ್ತಾರೆ. ಭಾರತದಲ್ಲಿದ್ದು ಡಬ್ಲ್ಯುಪಿಎಲ್ ಟೂರ್ನಿ ಆಡುವುದು ಸ್ಪೆಷಲ್ ಅನುಭವ ಎಂದಿದ್ದಾರೆ. ದೆಹಲಿ ಕ್ಯಾಪಿಟಲ್ಸ್‌ನೊಂದಿಗಿನ ನಮ್ಮ ಪಾಲುದಾರಿಕೆಯನ್ನು ಅವರ ಮಹಿಳಾ ತಂಡಕ್ಕೆ ಶೀರ್ಷಿಕೆ ಪಾಲುದಾರರಾಗಿ ವಿಸ್ತರಿಸಲು ನಾವು ಉತ್ಸುಕರಾಗಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಮಹಿಳಾ ಕ್ರಿಕೆಟ್‌ಗೆ ಪರಿವರ್ತನೆಯಾಗಿದೆ, ಕ್ರೀಡೆಯು ಹಿಂದೆಂದಿಗಿಂತಲೂ ಹೆಚ್ಚು ಆಟಗಾರರು ಮತ್ತು ಅಭಿಮಾನಿಗಳನ್ನು ತಲುಪಿದೆ. ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡವು ಆಕರ್ಷಕ ಆಟಗಾರರ ಪಟ್ಟಿಯನ್ನು ಹೊಂದಿದೆ ಎಂದು ಡಿಪಿ ವರ್ಲ್ಡ್ ಸಬ್‌ಕಾಂಟಿನೆಂಟ್‌ನ ಲಾಜಿಸ್ಟಿಕ್ಸ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಅಶ್ವನಿ ನಾಥ್ ತಿಳಿಸಿದ್ದಾರೆ.
ರವಿಚಂದ್ರನ್ ಅಶ್ವಿನ್ 500 ಟೆಸ್ಟ್ ವಿಕೆಟ್..! ದಿಗ್ಗಜರ ಸಾಲಿಗೆ ಸೇರಿದ ಸ್ಪಿನ್ ಮಾಂತ್ರಿಕ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.