ODI World Cup 2023: ಏಕದಿನ ವಿಶ್ವಕಪ್‌ ಟಿಕೆಟ್‌ ಖರೀದಿಗೆ ಮತ್ತೆ ಪರದಾಟ!

Published : Sep 09, 2023, 11:58 AM IST
ODI World Cup 2023: ಏಕದಿನ ವಿಶ್ವಕಪ್‌ ಟಿಕೆಟ್‌ ಖರೀದಿಗೆ ಮತ್ತೆ ಪರದಾಟ!

ಸಾರಾಂಶ

ಕ್ರೀಡಾಂಗಣಗಳ ಕೌಂಟರ್‌ಗಳಲ್ಲಿ ಮಾರಲು ಉದ್ದೇಶಿಸಿದ್ದ 4 ಲಕ್ಷ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲೇ ಮಾರಾಟಕ್ಕಿಡುವುದಾಗಿ ಇತ್ತೀಚೆಗೆ ಬಿಸಿಸಿಐ ಘೋಷಿಸಿತ್ತು. ಅದರಂತೆ ಶುಕ್ರವಾರ ಟಿಕೆಟ್‌ ಮಾರಾಟ ಆರಂಭಗೊಂಡರೂ ಎಂದಿನಂತೆ ವೆಬ್‌ಸೈಟ್‌ ವ್ಯತ್ಯಯ, ಕಾಯುವಿಕೆ, ಸೋಲ್ಡೌಟ್‌ ಸೂಚನೆಗಳಿಂದಲೇ ಬಹುತೇಕ ಮಂದಿಗೆ ಟಿಕೆಟ್‌ ಖರೀದಿಸಲಾಗಲಿಲ್ಲ.

ನವದೆಹಲಿ(ಸೆ.09): ಒತ್ತಡಕ್ಕೆ ಮಣಿದು ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಗಳ ಹೆಚ್ಚುವರಿ ಟಿಕೆಟ್‌ಗಳನ್ನು ಮಾರಾಟಕ್ಕಿಟ್ಟರೂ ಬಿಸಿಸಿಐ ಮತ್ತೆ ಅಭಿಮಾನಿಗಳ ಆಕ್ರೋಶ, ಟೀಕೆಗೆ ಗುರಿಯಾಗಿದೆ. ಎಷ್ಟೇ ಪ್ರಯತ್ನಿಸಿದರೂ ಪಂದ್ಯಗಳ ಟಿಕೆಟ್‌ ಸಿಗುತ್ತಿಲ್ಲ ಎಂದು ಸಾಮಾಜಿಕ ತಾಣಗಳಲ್ಲಿ ಹಲವರು ಮಂಡಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕ್ರೀಡಾಂಗಣಗಳ ಕೌಂಟರ್‌ಗಳಲ್ಲಿ ಮಾರಲು ಉದ್ದೇಶಿಸಿದ್ದ 4 ಲಕ್ಷ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲೇ ಮಾರಾಟಕ್ಕಿಡುವುದಾಗಿ ಇತ್ತೀಚೆಗೆ ಬಿಸಿಸಿಐ ಘೋಷಿಸಿತ್ತು. ಅದರಂತೆ ಶುಕ್ರವಾರ ಟಿಕೆಟ್‌ ಮಾರಾಟ ಆರಂಭಗೊಂಡರೂ ಎಂದಿನಂತೆ ವೆಬ್‌ಸೈಟ್‌ ವ್ಯತ್ಯಯ, ಕಾಯುವಿಕೆ, ಸೋಲ್ಡೌಟ್‌ ಸೂಚನೆಗಳಿಂದಲೇ ಬಹುತೇಕ ಮಂದಿಗೆ ಟಿಕೆಟ್‌ ಖರೀದಿಸಲಾಗಲಿಲ್ಲ. ಈ ಬಗ್ಗೆ ಹಲವರು ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಸಿಸಿಐ ಟಿಕೆಟ್‌ ಹೆಸರಲ್ಲಿ ವಂಚಿಸುತ್ತಿದೆ, ಅಭಿಮಾನಿಗಳ ತಾಳ್ಮೆ ಪರಿಶೀಲಿಸುತ್ತಿದೆ ಎಂದು ಕೆಂಡಕಾರಿದ್ದಾರೆ. ಈ ನಡುವೆಯೇ ಟಿಕೆಟ್‌ ಸಿಕ್ಕ ಕೆಲವು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ.

Asia Cup 2023 ಸೂಪರ್‌-4ನಲ್ಲಿ ಇಂದು ಬಾಂಗ್ಲಾ vs ಲಂಕಾ ಕದನ

ಭಾರತದ ನೆಟ್‌ ಬೌಲರ್‌ಗೆ ನೆದರ್‌ಲೆಂಡ್ಸ್‌ ಜಾಹೀರಾತು!

ಆಮ್‌ಸ್ಟೆರ್ಡಾಮ್‌: ಏಕದಿನ ವಿಶ್ವಕಪ್‌ಗೂ ಮುನ್ನ ಸೆ.20ರಿಂದ 24ರ ವರೆಗೆ ಬೆಂಗಳೂರು ಹೊರವಲಯದ ಆಲೂರಿನಲ್ಲಿ ಅಭ್ಯಾಸ ನಡೆಸಲಿರುವ ನೆದರ್‌ಲೆಂಡ್ಸ್‌ ತಂಡ, ಶಿಬಿರಕ್ಕೆ ತಮಗೆ ಭಾರತೀಯ ನೆಟ್‌ ಬೌಲರ್‌ ಅಗತ್ಯವಿದೆ ಎಂದು ಜಾಹೀರಾತು ಪ್ರಕಟಿಸಿದೆ. ತಂಡದಲ್ಲಿ ಈಗಾಗಲೇ ಕೆಲ ನೆಟ್‌ ಬೌಲರ್‌ಗಳಿದ್ದಾರೆ. ಅಲ್ಲದೆ ಪ್ರವಾಸಿ ತಂಡಕ್ಕೆ ನೆಟ್‌ ಬೌಲರ್‌ಗಳನ್ನು ಒದಗಿಸುವ ಜವಾಬ್ದಾರಿ ಆಯಾಯ ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಮೇಲಿದೆ. ಇದರ ಹೊರತಾಗಿಯೂ ನೆಟ್‌ ಬೌಲರ್‌ ಅಗತ್ಯವಿದೆ ಎಂದು ಜಾಹೀರಾತು ನೀಡಿದೆ.

Asia Cup 2023: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಾತ್ರ ಮೀಸಲು ದಿನ ಏಕೆ? ಬಾಂಗ್ಲಾ, ಲಂಕಾ ವಿರೋಧ?

ವಿಶ್ವಕಪ್‌ ಮೊದಲ ಪಂದ್ಯಕ್ಕೆ ಭಾರತದ ನಿತಿನ್‌ ಅಂಪೈರ್‌

ದುಬೈ: ಅ.5ರಿಂದ ಆರಂಭಗೊಳ್ಳಲಿರುವ ಏಕದಿನ ವಿಶ್ವಕಪ್‌ಗೆ ಅಂಪೈರ್‌ಗಳ ಹೆಸರುಗಳನ್ನು ಐಸಿಸಿ ಶುಕ್ರವಾರ ಪ್ರಕಟಿಸಿದೆ. ಇಂಗ್ಲೆಂಡ್‌-ನ್ಯೂಜಿಲೆಂಡ್‌ ನಡುವಿನ ಉದ್ಘಾಟನಾ ಪಂದ್ಯದಲ್ಲಿ ಭಾರತದ ನಿತಿನ್‌ ಮೆನನ್‌ ಹಾಗೂ ಶ್ರೀಲಂಕಾದ ಕುಮಾರ ಧರ್ಮಸೇನಾ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದು, ಕನ್ನಡಿಗ ಜಾವಗಲ್‌ ಶ್ರೀನಾಥ್‌ ಮ್ಯಾಚ್‌ ರೆಫ್ರಿಯಾಗಿರಲಿದ್ದಾರೆ. ಒಟ್ಟು 16 ಅಂಪೈರ್‌ಗಳು ಟೂರ್ನಿಯ ವಿವಿಧ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಅನುಭವಿಗಳಾದ ಮರಾಯಸ್‌ ಎರಾಸ್ಮಸ್‌, ರಾಡ್‌ ಟಕ್ಕರ್‌ ಕೂಡಾ ಇದ್ದಾರೆ.

ಟ್ರಂಪ್‌ ಜೊತೆಗೆ ಧೋನಿ ಗಾಲ್ಫ್‌ ಆಟ!

ನ್ಯೂ ಜೆರ್ಸಿ: ಭಾರತದ ಮಾಜಿ ನಾಯಕ ಎಂ.ಎಸ್‌.ಧೋನಿ ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆ ಗಾಲ್ಫ್‌ ಆಡಿದ್ದು, ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

ಟ್ರಂಪ್‌ ಆಹ್ವಾನದ ಮೇರೆಗೆ ನ್ಯೂಜೆರ್ಸಿಗೆ ತೆರಳಿದ್ದ ಧೋನಿ, ಅಲ್ಲಿನ ಬೆಡ್‌ಮಿನಿಸ್ಟರ್‌ ನಗರದಲ್ಲಿರುವ ಟ್ರಂಪ್‌ ರಾಷ್ಟ್ರೀಯ ಗಾಲ್ಫ್‌ ಕೋರ್ಸ್‌ನಲ್ಲಿ ಕೆಲ ಕಾಲ ಆಟವಾಡಿದರು. ಇದಕ್ಕೂ ಮುನ್ನ ಗುರುವಾರ ಯುಎಸ್‌ ಓಪನ್‌ ಟೆನಿಸ್ ಟೂರ್ನಿಯ ಕಾರ್ಲೊಸ್‌ ಆಲ್ಕರಜ್‌ರ ಕ್ವಾರ್ಟರ್‌ ಫೈನಲ್‌ ಪಂದ್ಯ ವೀಕ್ಷಣೆಗೆ ಧೋನಿ ತೆರಳಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಒಂದು ತಂಡ ಬಿಟ್ಟು ಆರ್‌ಸಿಬಿ, ಚೆನ್ನೈ ಸೇರಿ ಐಪಿಎಲ್‌ ತಂಡಗಳ ಬ್ರ್ಯಾಂಡ್ ಮೌಲ್ಯ ಭಾರೀ ಕುಸಿತ!
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!