ಉಗ್ರರ ಟಾರ್ಗೆಟ್ ಲಿಸ್ಟ್‌ನಲ್ಲಿ ಭಾರತ vs ಬಾಂಗ್ಲಾದೇಶ ಪಂದ್ಯ!

By Web Desk  |  First Published Oct 29, 2019, 12:38 PM IST

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟಿ20 ಸರಣಿಗೆ ಉಗ್ರರ ಕರಿನೆರಳು ಬಿದ್ದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಗೆ ಉಗ್ರರು ಪತ್ರದ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡ, ಅಭಿಮಾನಿಗಳು, ಪಂದ್ಯ ವೀಕ್ಷಿಸಲು ಬರುವ ಗಣ್ಯರೇ ಟಾರ್ಗೆಟ್ ಎಂದು ಉಗ್ರರು ಹೇಳಿದ್ದಾರೆ.


ದೆಹಲಿ(ಅ.29): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಸರಣಿ ಹಲವು ಅಡೆ ತಡೆಗಳನ್ನು ಎದುರಿಸಿದೆ. ಬಾಂಗ್ಲಾದೇಶ ಕ್ರಿಕೆಟಿಗರ ಪ್ರತಿಭಟನೆಯಿಂದ ಟೂರ್ನಿ ಆಯೋಜನೆಯೇ ಅನುಮಾನವಾಗಿತ್ತು. ಆದರೆ ಪ್ರತಿಭಟನೆ ಹಿಂಪಡೆದ ಬೆನ್ನಲ್ಲೇ, ದೆಹಲಿ ಪಂದ್ಯಕ್ಕೆ ಧೂಳಿನ ಸಮಸ್ಯೆ, ಕೋಲ್ಕತಾ ಟೆಸ್ಟ್ ಪಂದ್ಯ ಗೊಂದಲ ಸೇರಿದಂತೆ ಹೆಜ್ಜೆ ಹೆಜ್ಜೆಗೂ ಹಿನ್ನಡೆ ಅನುಭವಿಸಿತ್ತು. ಇದೆಲ್ಲಾ ನಿವಾರಿಸಿದ ಬಿಸಿಸಿಐಗೆ ಇದೀಗ ಉಗ್ರರ ಭೀತಿ ಕಾಡುತ್ತಿದೆ.

ಇದನ್ನೂ ಓದಿ: ಭಾರತ vs ಬಾಂಗ್ಲಾದೇಶ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

Latest Videos

undefined

ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣ(ಫಿರೋಜ್ ಷಾ ಕೋಟ್ಲಾ)ದಲ್ಲಿ ಆಯೋಜಿಸಲಾಗಿರುವ ಮೊದಲ ಟಿ20 ಪಂದ್ಯವನ್ನು ಉಗ್ರರು ಟಾರ್ಗೆಟ್ ಮಾಡಲಾಗಿದೆ. ದೆಹಲಿ ಟಿ20 ಪಂದ್ಯವನ್ನು ಟಾರ್ಗೆಟ್ ಮಾಡಲಾಗಿದೆ. ಟೀಂ ಇಂಡಿಯಾ ಕ್ರಿಕೆಟಿಗರು, ಪಂದ್ಯ ವೀಕ್ಷಿಸಲು ಆಗಮಿಸವು ಅಭಿಮಾನಿಗಳು ಹಾಗೂ ರಾಜಕೀಯ ಮುಖಂಡರೇ ನಮ್ಮ ಟಾರ್ಗೆಟ್ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಅನಾಮಧೇಯ ಪತ್ರವೊಂದು ಬಂದಿದೆ.

ಇದನ್ನೂ ಓದಿ: ಬಾಂಗ್ಲಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಸ್ಥಾನ

ತಕ್ಷಣವೇ NIA ಪತ್ರವನ್ನು ಬಿಸಿಸಿಐಗೆ ರವಾನಿಸಿದೆ. ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲು ಸೂಚಿಸಲಾಗಿದೆ. NIA ಸೂಚನೆಯಂತೆ ಬಿಸಿಸಿಐ ಹಾಗೂ ದೆಹಲಿ ಪೊಲೀಸ್ ವಿಭಾಗ ಕ್ರಿಕೆಟ್ ಪಂದ್ಯಕ್ಕೆ ಹೆಚ್ಚಿನ ಭದ್ರತೆ ನೀಡಿದೆ. ಇತ್ತ ಪತ್ರದ ಜಾಡು ಹಿಡಿದು ಹೊರಟ NIAಗೆ ಆಲ್ ಇಂಡಿಯಾ ಲಶ್ಕರ್ ಸಂಘಟನೆಯಿಂದ ಪತ್ರ ಬಂದಿರುವುದಾಗಿ ಹೇಳಿದೆ. ಆದರೆ ಈ ಪತ್ರ ಕಳುಹಿಸಿರುವ IP ವಿಳಾಸ ಕೇರಳದ ಕೋಯಿಕ್ಕೋಡ್ ತೋರಿಸುತ್ತಿದೆ. ಬೆದರಿಕೆ ನೀಡಲು ಕೆಲ ವ್ಯಕ್ತಿಗಳು ರೀತಿ ಮಾಡಿರುವ ಸಾಧ್ಯತೆ ಇದೆ ಎಂದು NIA ಶಂಕಿಸಿದೆ.

ಇದನ್ನೂ ಓದಿ: ಕೋಲ್ಕತಾದಲ್ಲಿ ಮೊದಲ ಹಗ​ಲು-ರಾತ್ರಿ ಟೆಸ್ಟ್‌?

 ಆಲ್ ಇಂಡಿಯಾ ಲಶ್ಕರ್ ರವಾನಿಸಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸ್ ಹಾಗೂ ಬಿಸಿಸಿಐ ಗರಿಷ್ಠ ಭದ್ರತೆ ನೀಡಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಟೀಂ ಇಂಡಿಯಾ ಹಾಗೂ ವಿರಾಟ್ ಕೊಹ್ಲಿ ಟಾರ್ಗೆಟ್ ಎಂದು ಪತ್ರದಲ್ಲಿ ಬರೆಯಲಾಗಿದೆ. ಟಿ20 ಸರಣಿಯಿಂದ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. 

ಅಕ್ಟೋಬರ್ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!