ಭಾರತ ಪ್ರವಾಸ ವಿರುದ್ಧ ಪಿತೂರಿ: ಬಿಸಿಬಿ ಅಧ್ಯಕ್ಷ

By Web DeskFirst Published Oct 29, 2019, 10:59 AM IST
Highlights

ಭಾರತ ಪ್ರವಾಸ ಕೈಗೊಳ್ಳದಂತೆ ಪಿತೂರಿ ನಡೆಯುತ್ತಿದೆ. ಆಟಾಗಾರರ ಬೇಡಿಕೆ ಈಡೇರಿಸಿದರೂ ಪ್ರಮುಖರು ತಂಡದಿಂದ ಹೊರಗುಳಿಯುತ್ತಿದ್ದಾರೆ. ಇದು ಬೇಸರ ತಂದಿದೆ ಎಂದು ಬಿಸಿಬಿ ಅಧ್ಯಕ್ಷ ಹೇಳಿಕೊಂಡಿದ್ದಾರೆ.

ಢಾಕಾ (ಬಾಂಗ್ಲಾದೇಶ)ಅ.29: ಭಾರತ ಪ್ರವಾಸ ತಡೆಯಲು ಯಾರೋ ಪಿತೂರಿ ನಡೆಸುತ್ತಿದ್ದಾರೆಂದು ಬಾಂಗ್ಲಾದೇಶ ಕ್ರಿಕೆಟ್‌ ಸಂಸ್ಥೆ (ಬಿಸಿಬಿ) ಅಧ್ಯಕ್ಷ ನಜ್ಮುಲ್‌ ಹಸನ್‌ ಆತಂಕ ವ್ಯಕ್ತಪಡಿಸಿದ್ದಾರೆ. ಬಂಗಾಳಿ ದಿನಪತ್ರಿಕೆಯೊಂದರ ಜತೆ ನಜ್ಮುಲ್‌ ಮಾತನಾಡಿದ್ದು, ‘ಭಾರತ ಪ್ರವಾಸದ ಬಗ್ಗೆ ನಿಮಗೆ ಸರಿಯಾಗಿ ಗೊತ್ತಿಲ್ಲ. ಕಾದು ನೋಡಿ, ಈ ಪ್ರವಾಸ ಯಶಸ್ವಿ ಆಗದಿರಲು ಪಿತೂರಿ ನಡೆಯುತ್ತಿದೆ. ನನ್ನ ಮಾತನ್ನು ನಂಬಿ’ ಎಂದಿದ್ದಾ​ರೆ. 

ಇದನ್ನೂ ಓದಿ: ಕೋಲ್ಕತಾದಲ್ಲಿ ಮೊದಲ ಹಗ​ಲು-ರಾತ್ರಿ ಟೆಸ್ಟ್‌?

‘ಟಿ20 ಸರಣಿಗೆ ಲಭ್ಯವಿದ್ದ ತಮಿಮ್‌,  ನ.22ರ ಕೋಲ್ಕತಾ ಟೆಸ್ಟ್‌ ಆಡದಿರಲು ತೀರ್ಮಾನಿಸಿದ್ದರು. ಆದರೆ ಆಟಗಾರರ ಸಭೆ ಮುಗಿದ ಬಳಿಕ ಏಕಾಏಕಿ ತಮಿಮ್‌ ಪ್ರವಾಸದಿಂದಲೇ ಹೊರಗುಳಿದಿದ್ದಾರೆ. ಇನ್ನೂ ಕೆಲ ಆಟಗಾರರು ಪ್ರವಾಸದಿಂದ ಹೊರಗುಳಿದರೂ ಅಚ್ಚರಿಯಿಲ್ಲ. ಆದರೆ ಶಕೀಬ್‌ ಹೊರಗುಳಿದರೆ ನಾನು ಹೊಸ ನಾಯಕನನ್ನು ಎಲ್ಲಿಂದ ಹುಡುಕಲಿ? ಶಕೀಬ್‌ ಜೊತೆ ಮಾತನಾಡುವೆ. ​ಆ​ಟ​ಗಾ​ರರ ಬೇಡಿಕೆಗಳನ್ನು ಈಡೇ​ರಿ​ಸಲು ಒಪ್ಪಿದ್ದು ನಾನು ಮಾಡಿದ ತಪ್ಪು’ ಎಂದು ನಜ್ಮುಲ್‌ ಬೇಸರ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

ಇದನ್ನೂ ಓದಿ: ಭಾರತ vs ಬಾಂಗ್ಲಾದೇಶ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!

ನ.03 ರಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಸರಣಿ ಆರಂಭವಾಗಲಿದೆ. 3 ಪಂದ್ಯದ ಟಿ20 ಹಾಗೂ 2 ಪಂದ್ಯದ ಟೆಸ್ಟ್ ಸರಣಿ ನಡೆಯಲಿದೆ. ಟಿ20 ಸರಣಿಯಿಂದ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಟೆಸ್ಟ್ ಸರಣಿಗೆ ಕೊಹ್ಲಿ ತಂಡ ಸೇರಿಕೊಳ್ಳಲಿದ್ದಾರೆ. 

click me!