
ಮೆಲ್ಬರ್ನ್(ಏ.05): ಕೊರೋನಾ ಸೋಂಕಿನ ಭೀತಿಯಿಂದಾಗಿ ಕ್ರಿಕೆಟ್ ಚಟುವಟಿಕೆಗಳಷ್ಟೇ ನಿಂತಿಲ್ಲ, ಕ್ರಿಕೆಟಿಗರ ವಿವಾಹ ಕಾರ್ಯಕ್ರಮಗಳಿಗೂ ಅಡ್ಡಿಯಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಆಸ್ಪ್ರೇಲಿಯಾದ 10 ಕ್ರಿಕೆಟಿಗರ ವಿವಾಹ ವಿಳಂಬವಾಗಲಿದೆ.
ಲಾಕ್‌ಡೌನ್ ವೇಳೆ ಧೋನಿ ಬ್ಯೂಟಿಷಿಯನ್ ಆದ ಪುತ್ರಿ ಝಿವಾ; ಕೆಲಸ ಕಳೆದುಕೊಂಡೆ ಎಂದ ಡಿಸೈನರ್!
ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ, ವೇಗಿ ಜ್ಯಾಕ್ಸನ್ ಬರ್ಡ್, ಡಾರ್ಚಿ ಶಾರ್ಟ್, ಆ್ಯಂಡ್ರೂ ಟೈ, ಮಿಚೆಲ್ ಸೆಪ್ಸನ್, ಅಲಿಸ್ಟರ್ ಮೆಕ್‌ಡೆರ್ಮೊಟ್, ಮಹಿಳಾ ಕ್ರಿಕೆಟಿಗರಾದ ಜೆಸ್ ಜೊನಾಸೆನ್, ಕ್ಯಾಟಲಿನ್ ಫ್ರೈಟ್ ಈ ತಿಂಗಳು ವಿವಾಹವಾಗಬೇಕಿತ್ತು. ಕ್ರಿಕೆಟ್ ವೇಳಾಪಟ್ಟಿಯಲ್ಲಿನ ಬಿಡುವು ಹಾಗೂ ಸೂಕ್ತ ಹವಾಮಾನದಿಂದಾಗಿ ಆಸ್ಪ್ರೇಲಿಯಾದ ಕ್ರಿಕೆಟಿಗರು ವಿವಾಹ ವನ್ನು ಏಪ್ರಿಲ್‌ನಲ್ಲಿಟ್ಟುಕೊಳ್ಳುವುದು ಸಾಮಾನ್ಯ.
ಭಾರತೀಯ ಸಂಪ್ರದಾಯದಂತೆ ಮ್ಯಾಕ್ಸ್‌ವೆಲ್ ನಿಶ್ಚಿತಾರ್ಥ!
ಇದೇ ವೇಳೆ ಇತ್ತೇಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪ್ಯಾಟ್ ಕಮಿನ್ಸ್ ವಿವಾಹವೂ ಕೊರೋನಾದಿಂದಾಗಿ ಮುಂದೂಡಲ್ಪಡಲಿದೆ. ಕಳೆದ ತಿಂಗಳಷ್ಟೇ ಭಾರತ ಮೂಲದ ಮೂಲದ ವಿನಿ ರಾಮನ್ ಎನ್ನುವವರ ಜತೆ ಮ್ಯಾಕ್ಸ್‌ವೆಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಆಸ್ಟ್ರೇಲಿಯಾ ಮಾತ್ರವಲ್ಲ ಜಗತ್ತಿನ ಎಲ್ಲಾ ದೇಶಗಳು ಕೊರೋನಾ ಭೀತಿಯಿಂದಾಗಿ ನಲುಗಿ ಹೋಗಿವೆ. ಈಗಾಗಲೇ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಒಂದು ವರ್ಷ ಮುಂದೂಡಲ್ಟಿದೆ. ಇನ್ನು 13ನೇ ಆವೃತ್ತಿಯ ಐಪಿಎಲ್ ಟೂರ್ನಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.