ಲಾಕ್‌ಡೌನ್ ವೇಳೆ ಧೋನಿ ಬ್ಯೂಟಿಷಿಯನ್ ಆದ ಪುತ್ರಿ ಝಿವಾ; ಕೆಲಸ ಕಳೆದುಕೊಂಡೆ ಎಂದ ಡಿಸೈನರ್!

By Suvarna News  |  First Published Apr 4, 2020, 2:47 PM IST

ಐಪಿಎಲ್ ಟೂರ್ನಿ ರದ್ದು ಹಾಗೂ ಭಾರತ ಲಾಕ್‌ಡೌನ್‌ನಿಂದ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಸದ್ಯ ರಾಂಚಿಯಲ್ಲಿನ ಮನೆಯಲ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ಧೋನಿ ಪುತ್ರಿ ಝಿವಾ ಇದೀಗ ಬ್ಯೂಟಿಷಿಯ್ ಆಗಿ ಬದಲಾಗಿದ್ದಾರೆ. ಧೋನಿಗೆ ಮೇಕಪ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಗಳಿಸಿದೆ. ಆದರೆ ಇದು ಧೋನಿ ಹೇರ್‌ಸ್ಟೈಲ್ ಡಿಸೈನರ್‌ ತಲೆನೋವು ಹೆಚ್ಚಿಸಿದೆ.


ರಾಂಚಿ(ಏ.04): ಕೊರೋನಾ ವೈರಸ್‌ ಹರಡುತ್ತಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಭ್ಯಾಸ ಶಿಬಿರ ರದ್ದುಗೊಳಿಸಿತು. ಇದರ ಬೆನ್ನಲ್ಲೇ ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ ರಾಂಚಿಗೆ ವಾಪಾಸ್ಸಾಗಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಭಾರತ ಲಾಕ್‌ಡೌನ್ ಘೋಷಣೆ ಮಾಡಿದರು. ಸದ್ಯ ಮನೆಯಲ್ಲಿ ಧೋನಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ವೇಳೆ  ಪುತ್ರಿ ಝಿವಾ, ಧೋನಿಗೆ ಮೇಕಪ್ ಮಾಡಿದ್ದಾರೆ. ಬ್ಯೂಟಿಷಿನ್ ರೀತಿಯಲ್ಲಿ ಮೇಕಪ್ ಮಾಡಿರುವ ವಿಡಿಯೋ ಭಾರಿ ಮೆಚ್ಚುಗೆ ಪಡೆದಿದೆ.

ವಯಸ್ಸು 4, ಫ್ಯಾನ್ ಫಾಲೋವರ್ಸ್ 15 ಲಕ್ಷ; ದಾಖಲೆ ಬರೆದ ಝಿವಾ ಧೋನಿ!.

Tap to resize

Latest Videos

ಧೋನಿ ಪುತ್ರಿಯ ಅವತಾರ ನೋಡಿದ ಧೋನಿಯ ಹೇರ್‌ಸ್ಟೈಲ್ ಡಿಸೈನರ್ , ಮುಂಬೈನ ಖ್ಯಾತ ಸಪ್ನಾ ಭವ್ನಾನಿಗೆ ತಲೆನೋವು ಹೆಚ್ಚಾಗಿದೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಧೋನಿಗೆ ಹೇರ್‌ಸ್ಟೈಲ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದೇನೆ. ಇದೀಗ  ನನ್ನ ಕೆಲಸ ಕಳೆದುಕೊಂಡ ಎಂದು ಅನಿಸುತ್ತಿದೆ ಎಂದು ಭವ್ನಾನಿ  ಹಳೇ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. 

 

I think I have lost my job to this cutie pie hai na ? pic.twitter.com/gveeFoKujS

— 𝕓𝕦𝕞𝕓𝕒𝕚 𝕜𝕚 𝕣𝕒𝕟𝕚 (@sapnabhavnani)

ಕಾರು ತೊಳೆದು ಸುಸ್ತಾದ ಧೋನಿಗೆ ಪುತ್ರಿ ಝಿವಾ ಮಸಾಜ್!.

2020ರ ಐಪಿಎಲ್ ಟೂರ್ನಿಯಲ್ಲಿ ಧೋನಿ ಪ್ರದರ್ಶನ ಆಧರಿಸಿ ಟೀಂ ಇಂಡಿಯಾಗೆ ಆಯ್ಕೆ ಮಾಡಲಿದ್ದೇವೆ ಎಂದು ಆಯ್ಕೆ ಸಮಿತಿ ಹೇಳಿತ್ತು. ಆದರೆ ಕೊರೋನಾ ವೈರಸ್ ಕಾರಣ ಐಪಿಎಲ್ ಟೂರ್ನಿ ರದ್ದಾಗಿದೆ. ಇನ್ನು ಐಪಿಎಲ್ ಆಯೋಜನೆ ಸದ್ಯಕ್ಕೆ ಅಸಾಧ್ಯ. ಇತ್ತ 2019ರ ವಿಶ್ವಕಪ್ ಟೂರ್ನಿ ಬಳಿಕ ಅಂದೆ ಬರೋಬ್ಬರಿ 8 ತಿಂಗಳಿನಿಂದ ಧೋನಿ ಯಾವುದೇ ಕ್ರಿಕೆಟ್ ಆಡಿಲ್ಲ. ಅಂತಾರಾಷ್ಟ್ರೀಯ ಮಾತ್ರವಲ್ಲ, ದೇಸಿ ಕ್ರಿಕೆಟ್‌ನಿಂದಲೂ ದೂರ ಉಳಿದಿದ್ದಾರೆ.

ಐಪಿಎಲ್ ರದ್ದಾಗೋ ಮೂಲಕ ಇದೀಗ ಧೋನಿ ಕಮ್‌ಬ್ಯಾಕ್ ಕೂಡ ಸ್ಪಷ್ಟತೆ ಇಲ್ಲದಾಗಿದೆ. ಭಾರತದ ದಿಗ್ಗಜ ಕ್ರಿಕೆಟಿಗ, ಯಶಸ್ವಿ ನಾಯಕ, ಐಸಿಸಿಯ 3 ಟ್ರೋಫಿ ತಂದುಕೊಟ್ಟ ಧೋನಿ ವಿದಾಯದ ಪಂದ್ಯ ಆಡದೇ ಗುಡ್ ಬೈ ಹೇಳುತ್ತಾರಾ ಅನ್ನೋ ಆತಂಕ ಅಭಿಮಾನಿಗಳಿಗೆ ಕಾಡುತ್ತಿದೆ.
 

click me!