ವೇತನ ಕಡಿತಕ್ಕೆ ಸ್ವಯಂ ಪ್ರೇರಿತವಾಗಿ ಒಪ್ಪಿಕೊಂಡ ಇಂಗ್ಲೆಂಡ್‌ ಕ್ರಿಕೆಟಿಗರು

By Suvarna News  |  First Published Apr 5, 2020, 11:48 AM IST

ಕೊರೋನಾ ಸಂಕಷ್ಟಕ್ಕೆ ಇಂಗ್ಲೆಂಡ್ ಕ್ರಿಕೆಟಿಗರು ಶೇ 20ರಷ್ಟು ವೇತನವನ್ನು ಕಡಿತಗೊಳಿಸಲು ಒಪ್ಪಿಕೊಂಡಿದ್ದಾರೆ. ಈ ಮೂಲಕ ಕೊರೋನಾ ಸಂಕಷ್ಟದಲ್ಲೂ ಮಾನವೀಯತೆ ಮೆರೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


ಲಂಡನ್(ಏ.05)‌: ಕೊರೋನಾ ಸೋಂಕಿನಿಂದಾಗಿ ಕ್ರಿಕೆಟ್‌ ಚಟುವಟಿಕೆಗಳು ಬಂದ್‌ ಆಗಿದ್ದು, ಎಲ್ಲಾ ಕ್ರಿಕೆಟ್‌ ಮಂಡಳಿಗಳು ನಷ್ಟ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರು ಸ್ವಯಂ ಪ್ರೇರಿತರಾಗಿ ಶೇ.20ರಷ್ಟು ವೇತನ ಕಡಿತಕ್ಕೆ ಒಪ್ಪಿದ್ದಾರೆ. 

ಕೊರೋನಾ ವೈರಸ್ ಎಫೆಕ್ಟ್: ಇಂಗ್ಲೆಂಡ್‌ ಕ್ರಿಕೆಟ್‌ಗೆ 2800 ಕೋಟಿ ರುಪಾಯಿ ನಷ್ಟ ನಷ್ಟ?

Tap to resize

Latest Videos

3 ತಿಂಗಳ ವೇತನ ಎಂದರೆ 500000 ಪೌಂಡ್‌ (ಅಂದಾಜು 4.68 ಕೋಟಿ ರು.) ಹಣವನ್ನು ಕೊರೋನಾ ನಿಯಂತ್ರಣ ಹೋರಾಟಕ್ಕೆ ದೇಣಿಗೆ ನೀಡಲು ನಿರ್ಧರಿಸಿದ್ದಾರೆ. ಇನ್ನು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಸ್ವಯಂ ಪ್ರೇರಿತವಾಗಿ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಿನ ವೇತನ ಕಡಿತಕ್ಕೆ ಸಮ್ಮತಿ ನೀಡಿತ್ತು. 

ಕೊರೋನಾ ಸಂಕಷ್ಟ: ದೇಶಕ್ಕೆ ಬರೋಬ್ಬರಿ 51 ಕೋಟಿ ರುಪಾಯಿ ದೇಣಿಗೆ ನೀಡಿದ ಬಿಸಿಸಿಐ..!

ಈ ಮೊದಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್(ಇಸಿಬಿ) ಪ್ರಸ್ತಾಪಿಸಿದ್ದ ಶೇ.20ರಷ್ಟು ವೇತನ ಕಡಿತಕ್ಕೆ ಕೇಂದ್ರ ಗುತ್ತಿಗೆ ಹೊಂದಿದ್ದ ಇಂಗ್ಲೆಂಡ್ ಆಟಗಾರರು ಸಮ್ಮತಿಸಿರಲಿಲ್ಲ ಎಂದು ವರದಿಯಾಗಿತ್ತು. ಇದರ ಜತೆಗೆ ಈ ಋತುವಿನಲ್ಲಿ ನಿಗದಿತ ಸಮಯದಲ್ಲಿ ಕ್ರಿಕೆಟ್ ಟೂರ್ನಿಗಳು ಆರಂಭವಾಗದಿದ್ದರೆ, ಇಸಿಬಿ ಅಂದಾಜು 2,800 ಕೋಟಿ ರುಪಾಯಿ ನಷ್ಟ ಅನುಭವಿಸುವ ಸಾಧ್ಯತೆಯಿದೆ ಎಂದು ಇಸಿಬಿ ಕಾರ್ಯ ನಿರ್ವಾಹಕ ಟಾಮ್ ಹ್ಯಾರಿಸ್ಸನ್ಸ್ ಹೇಳಿದ್ದರು.

ಕೊರೋನಾ ವೈರಸ್ ಭೀತಿಯಿಂದಾಗಿ 2020ರ ಕ್ರಿಕೆಟ್ ಚಟುವಟಿಕೆಗಳು ಮೇ 28ರವರೆಗೂ ಸ್ತಬ್ಧವಾಗಿವೆ. ಆ ಬಳಿಕ ಪರಿಸ್ಥಿತಿ ಸುಧಾರಿಸಿದರಷ್ಟೇ ಕ್ರಿಕೆಟ್ ಟೂರ್ನಿಗಳು ಆರಂಭವಾಗುವ ಸಾಧ್ಯತೆಯಿದೆ. ಈಗಾಗಲೇ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಕೂಡಾ ಮುಂದೂಡಲ್ಪಟ್ಟಿದೆ. 
 

click me!