ಮಳೆ ಆಟಕ್ಕೆ ಭಾರತ-ನ್ಯೂಜಿಲೆಂಡ್ ಸುಸ್ತು, ನಾಲ್ಕನೇ ದಿನದಾಟ ಅಂತ್ಯ!

Published : Jun 21, 2021, 08:54 PM IST
ಮಳೆ ಆಟಕ್ಕೆ ಭಾರತ-ನ್ಯೂಜಿಲೆಂಡ್ ಸುಸ್ತು, ನಾಲ್ಕನೇ ದಿನದಾಟ ಅಂತ್ಯ!

ಸಾರಾಂಶ

ನಾಲ್ಕನೇ ದಿನದಾಟದಲ್ಲಿ ಸಂಪೂರ್ಣ ಮಳೆ ಆಟ ಒಂದು ಎಸೆತ ಕಾಣದೆ ನಾಲ್ಕನೇ ದಿನದಾಟ ಅಂತ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಫಲಿತಾಂಶ ಅಸ್ಪಷ್ಟ

ಸೌಥಾಂಪ್ಟನ್(ಜೂ.21):  ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ರೋಚಕ ಹೋರಾಟಕ್ಕಿಂತ ಮಳೆ ಆರ್ಭಟವೇ ಹೆಚ್ಚಾಗಿದೆ. ಮೊದಲ ದಿನ ಸಂಪೂರ್ಣ ಮಳೆಗೆ ಆಹುತಿಯಾದರೆ, 2ನೇ ದಿನ ಮಂದ ಬೆಳಕಿನ ಕಾಟ ನೀಡಿತ್ತು. 3ನೇ ದಿನ ಸರಾಗವಾಗಿ ನಡೆದರೆ, ನಾಲ್ಕನೇ ದಿನ ಮತ್ತೆ ಮಳೆ ವಕ್ಕರಿಸಿದೆ. ಪರಿಣಾಮ ನಾಲ್ಕನೇ ದಿನಾದಾಟ ಒಂದು ಎಸೆತ ಕಾಣದೆ ಅಂತ್ಯಗೊಂಡಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 10 ವರ್ಷ ಭರ್ತಿ

ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಮಳೆ ಇನ್ನಿಲ್ಲದಂತೆ ಕಾಡುತ್ತಿದೆ. ನಾಳೆಯ ಹವಾಮಾನ ವರದಿ ಪ್ರಕಾರ ಸಂಪೂರ್ಣ ಪಂದ್ಯಕ್ಕೆ ಮಳೆ ಅನುವು ಮಾಡಿಕೊಡುವ ಸಾಧ್ಯತೆ ಕಡಿಮೆಯಾಗಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದ ಫಲಿತಾಂಶ ಹೊರಬೀಳುವ ಸಾಧ್ಯತೆ ಕ್ಷೀಣಿಸುತ್ತಿದೆ.

3ನೇ ದಿನದಾಟದ ಅಂತ್ಯದಲ್ಲಿ ನ್ಯೂಜಿಲೆಂಡ್ 2 ವಿಕೆಟ್ ನಷ್ಟಕ್ಕೆ 101 ರನ್ ಸಿಡಿಸಿತ್ತು. ಆರಂಭಿಕರಾದ ಟಾಮ್ ಲಾಥಮ್ 30 ರನ್ ಸಿಡಿಸಿದರೆ, ಡೆವೋನ್ ಕಾನ್ವೆ 54 ರನ್ ಸಿಡಿಸಿದ್ದರು. ಆರಂಭಿಕರ ಜೊತೆಯಾಟದಿಂದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದಿತ್ತು. ಆದರೆ ಆರ್ ಅಶ್ವಿನ್ ಹಾಗೂ ಇಶಾಂತ್ ಶರ್ಮಾ ಹೋರಾಟದಿಂದ ಭಾರತ 2 ವಿಕೆಟ್ ಕಬಳಿಸಿತ್ತು.

ಮೈದಾನದಲ್ಲಿ ಕೊಹ್ಲಿ ಬಾಂಗ್ರಾ ಡ್ಯಾನ್ಸ್, ಗೆದ್ದರೆ ನಿಮ್ಮೊಂದಿಗೆ ಸ್ಟೆಪ್ಸ್ ಎಂದ ಫ್ಯಾನ್ಸ್!

ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 116 ರನ್ ಹಿನ್ನಡೆಯಲ್ಲಿದೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಗ್‌ ಬ್ಯಾಷ್ ಲೀಗ್‌ನಲ್ಲಿ ಬಾಬರ್ ಅಜಂಗೆ ಮುಖಭಂಗ: ಮೈದಾನದಲ್ಲಿ ನಡೆದದ್ದೇನು? ವಿಡಿಯೋ ವೈರಲ್
ಸ್ಟೀವ್ ಸ್ಮಿತ್ ಲವ್ ಸ್ಟೋರಿ ಬಾಲಿವುಡ್ ಸಿನಿಮಾಗೂ ಕಮ್ಮಿ ಇಲ್ಲ!