ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌: ನಾಲ್ಕನೇ ದಿನದಾಟಕ್ಕೆ ಮಳೆ ಅಡ್ಡಿ..!

By Suvarna NewsFirst Published Jun 21, 2021, 4:47 PM IST
Highlights

* ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಮತ್ತೆ ಮಳೆ ಅಡ್ಡಿ

* ನಾಲ್ಕನೇ ದಿನದಾಟದ ಮೊದಲ ಸೆಷನ್ ಮಳೆಗೆ ಬಲಿ

* ನಾಲ್ಕನೇ ದಿನದಾಟ ಮಳೆಯಿಂದ ರದ್ದಾಗುವ ಸಾಧ್ಯತೆ

ಸೌಥಾಂಪ್ಟನ್‌(ಜೂ.21) ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಮತ್ತೆ ಮಳೆರಾಯ ಅಡ್ಡಿ ಪಡಿಸಿದ್ದಾನೆ. ಈಗಾಗಲೇ ಕುಂಟುತ್ತಾ ಸಾಗುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ.ಟೆಸ್ಟ್‌ ವಿಶ್ವಕಪ್‌ ಪಂದ್ಯದ ನಾಲ್ಕನೇ ದಿನದಾಟ ಮಳೆಯ ಕಾರಣದಿಂದಾಗಿ ಇನ್ನೂ ಆರಂಭವಾಗಿಲ್ಲ. 

ಸೌಥಾಂಪ್ಟನ್‌ ಸುತ್ತಾಮುತ್ತಾ ತುಂತುರು ಮಳೆ ಬೀಳಲಾರಂಭಿಸಿದ್ದು, ಇನ್ನೂ ನಿಂತಿಲ್ಲ. ನಾಲ್ಕನೇ ದಿನದಾಟವನ್ನು ರದ್ದು ಮಾಡುವ ಕುರಿತಂತೆ ಅಂಪೈರ್‌ಗಳು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲವಾದರೂ, ಶೀಘ್ರದಲ್ಲೇ ಈ ಕುರಿತಂತೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. 

Wet weather has returned to the Hampshire Bowl so it’s table tennis for now… pic.twitter.com/hA0AjPgiya

— BLACKCAPS (@BLACKCAPS)

ಇಂದಿನ ಹವಾಮಾನದ ವರದಿಯ ಪ್ರಕಾರ ಸೌಥಾಂಪ್ಟನ್‌ ಬಳಿ ಶೇ.90 ಪ್ರತಿಶತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ನಾಲ್ಕನೇ ದಿನದಾಟವೂ ಪಂದ್ಯ ನಡೆಯುವುದು ಅನುಮಾನ ಎನಿಸಿದೆ.

WTC final: ನ್ಯೂಜಿಲೆಂಡ್ ದಿಟ್ಟ ಹೋರಾಟದ ನಡುವೆ ವಿಕೆಟ್ ಕಬಳಿಸಿದ ಭಾರತ!

Hello and good morning from Southampton. We are 90 minutes away from scheduled start of play on Day 4, but this is what it looks like currently. pic.twitter.com/FoXiut9MYj

— BCCI (@BCCI)

ಪಂದ್ಯದ ಅಪ್ಡೇಟ್‌: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ 217 ರನ್ ಬಾರಿಸಿ ಸರ್ವಪತನ ಕಂಡಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ನ್ಯೂಜಿಲಂಡ್ ತಂಡವು ಮೂರನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 101 ರನ್ ಬಾರಿಸಿದೆ. ಸದ್ಯ ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್‌ ಕ್ರೀಸ್‌ ಕಾಯ್ದುಕೊಂಡಿದ್ದಾರೆ.
 

click me!