ಜೂನ್-ಜುಲೈ ತಿಂಗಳಲ್ಲಿ ಶ್ರೀಲಂಕಾ ಪ್ರವಾಸ ಮಾಡುತ್ತಾ ಟೀಂ ಇಂಡಿಯಾ?

By Suvarna NewsFirst Published May 17, 2020, 2:19 PM IST
Highlights

ಕೊರೋನಾ ವೈರಸ್ ಕಾರಣ ಐಪಿಎಲ್ ಸೇರದಂತೆ ಪ್ರಮುಖ ಟೂರ್ನಿ ರದ್ದಾಗಿದೆ. ಇದೀಗ ನಿಗದಿತ ವೇಳಾಪಟ್ಟಿ ಪ್ರಕಾರ ಜೂನ್ ಹಾಗೂ ಜುಲೈ ತಿಂಗಳಲ್ಲಿ ಭಾರತ ಹಾಗೂ ಶ್ರೀಲಂಕಾ ನಿಗದಿತ ಓವರ್ ಟೂರ್ನಿ ಆಯೋಜಿಸಲಾಗಿದೆ. ಲಾಕ್‌ಡೌನ್ ಸಡಿಲಿಕೆಯಾಗುತ್ತಿರುವ ಬೆನ್ನಲ್ಲೇ ಟೀಂ ಇಂಡಿಯಾ, ಲಂಕಾ ಪ್ರವಾಸ ಮಾಡಲಿದೆಯಾ ಅನ್ನೋ ಕುತೂಹಲಕ್ಕೆ ಬಿಸಿಸಿಐ ಉತ್ತರ ನೀಡಿದೆ.

ಮುಂಬೈ(ಮೇ.17): ಲಾಕ್‌ಡೌನ್ ಸಡಿಲಿಕೆಯಾಗುತ್ತಿರುವ ಕಾರಣ ಹಲವು ಚಟುವಟಿಕೆಗಳು, ಸೇವೆಗಳು ಆರಂಭಗೊಳ್ಳುತ್ತಿದೆ. ಕೆಲ ನಿರ್ಬಂಧ, ನಿಯಮಗಳನ್ನು ಪಾಲಿಸಿ ವ್ಯವಹಾರ ಆರಂಭಿಸಲು ಅನುಮತಿ ನೀಡಲಾಗುತ್ತಿದೆ. ಇತ್ತೀಚೆಗೆ ಬಿಸಿಸಿಐ ಖಜಾಂಜಿ ಅರುಣ್ ಧುಮಾಲ್ ಕೂಡ ಭಾರತ ತಂಡ ಶ್ರೀಲಂಕಾ ಪ್ರವಾಸ ಸಾಧ್ಯತೆ ಹೇಳಿದ್ದರು. ಆದರೆ ಬಿಸಿಸಿಐ ಮೂಲಗಳು ಸದ್ಯದ ಪರಿಸ್ಥಿತಿಯಲ್ಲಿ ಲಂಕಾ ಪ್ರವಾಸ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಲೌಕ್‌ಡೌನ್ ವೇಳೆ ನೆಟ್ ಪ್ರಾಕ್ಟೀಸ್; ವಿರಾಟ್‌ಗೆ ಬೌನ್ಸರ್ ಎಸೆದ ಅನುಷ್ಕಾ!

ಟೀಂ ಇಂಡಿಯಾ ನಾಯಕ ವಿರಾಟ್ , ರೋಹಿತ್ ಶರ್ಮಾ ಸೇರಿದಂತೆ ಹಲವು ಕ್ರಿಕೆಟಿಗರು ಮುಂಬೈನಲ್ಲಿದ್ದಾರೆ. ಇತ್ತ ಕೆಲ ಕ್ರಿಕೆಟಿಗರು ಬೆಂಗಳೂರಿನಲ್ಲಿದ್ದಾರೆ. ಮುಂಬೈನಲ್ಲಿ ಕೊರೋನಾ ವೈರಸ್ ವಿಪರೀತವಾಗಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಯಾವ ಕ್ರಿಕೆಟಿಗರು ಎಲ್ಲೂ ಕದಡುವಂತಿಲ್ಲ. ಇಷ್ಟೇ ಅಲ್ಲ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಸದ್ಯ ಯಾವುದೇ ಟೂರ್ನಿ ಅಥವಾ ಪ್ರವಾಸ ಸಾಧ್ಯವಿಲ್ಲ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ರಾಹುಲ್ ದ್ರಾವಿಡ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ಎಸ್ ಶ್ರೀಶಾಂತ್

ಕಳೆದ ವಾರ ಶ್ರೀಲಂಕಾ ಕ್ರಿಕೆಟ್ ಮಂಡಳಿ ಭಾರತ ತಂಡದ ಪ್ರವಾಸ ಕುರಿತು ಬಿಸಿಸಿಐಗೆ ಪತ್ರ ಬರೆದಿದೆ. ಇದಕ್ಕೆ ಬಿಸಿಸಿಐ ಕೂಡ ಪ್ರತಿಕ್ರಿಯೆ ನೀಡಿದೆ. ಬಿಸಿಸಿಐ, ಲಂಕಾ ಪ್ರವಾಸ ಮಾಡಲು ಉತ್ಸುಕವಾಗಿದೆ. ಆದರೆ ಸರ್ಕಾರದ ಲಾಕ್‌ಡೌನ್ ನಿರ್ಬಂಧ ಹಾಗೂ ಆಟಗಾರರಿಗೆ ವೈರಸ್ ಭೀತಿಯಿಂದ ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಎಲ್ಲದಕ್ಕೂ ಕಾಯಬೇಕಾಗಿದೆ ಎಂದು ಉತ್ತರಿಸಿದೆ.
 

click me!