ಜಗಳ ಮಾಡಲು ಹರ್ಭಜನ್ ಕೋಣೆಗೆ ತೆರಳಿದ್ದೆ, 2010ರ ಏಷ್ಯಾಕಪ್ ಸ್ಲೆಡ್ಜಿಂಗ್ ಕತೆ ಹೇಳಿದ ಅಕ್ತರ್!

Suvarna News   | Asianet News
Published : May 16, 2020, 03:49 PM IST
ಜಗಳ ಮಾಡಲು ಹರ್ಭಜನ್ ಕೋಣೆಗೆ ತೆರಳಿದ್ದೆ, 2010ರ ಏಷ್ಯಾಕಪ್ ಸ್ಲೆಡ್ಜಿಂಗ್ ಕತೆ ಹೇಳಿದ ಅಕ್ತರ್!

ಸಾರಾಂಶ

ಭಾರತ ಹಾಗೂ ಪಾಕಿಸ್ತಾನ ನಡುವಿನ ಯಾವ ಪಂದ್ಯವೂ ಉಭಯ ದೇಶದ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಅದರಲ್ಲೂ 2010ರ ಏಷ್ಯಾಕಪ್ ಟೂರ್ನಿಯ 4ನೇ ಪಂದ್ಯ ಅತ್ಯಂತ ರೋಚಕ ಪಂದ್ಯ ಮಾತ್ರವಲ್ಲ, ಸ್ಲೆಡ್ಜಿಂಗ್, ಮೈದಾನದಲ್ಲೇ ಜಗಳ ಸೇರಿದಂತೆ ಹಲವು ಘಟನೆಗಳಿಗೆ ಸಾಕ್ಷಿಯಾಗಿತ್ತು. ಹರ್ಭಜನ್ ಸಿಂಗ್ ವಿರಾವೇಶದಿಂದ ಭಾರತ ತಂಡ ಪಾಕಿಸ್ತಾನ ಮಣಿಸಿತ್ತು. ಈ ಪಂದ್ಯದಲ್ಲಿ ಭಜ್ಜಿ ಹಾಗೂ ಪಾಕ್ ವೇಗಿ ಶೋಯಿಬ್ ಅಕ್ತರ್ ನಡುವೆ ದೊಡ್ಡ ಜಗಳವೇ ನಡೆದು ಹೋಗಿತ್ತು. ಈ ಘಟನೆ ಕುರಿತು ಶೋಯೆಬ್ ಅಕ್ತರ್ ವಿವರಿಸಿದ್ದಾರೆ.

ಕರಾಚಿ(ಮೇ.16): ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಕೇವಲ ಉಭಯ ದೇಶ ಮಾತ್ರವಲ್ಲ ವಿಶ್ವದ ಗಮನ ಸೆಳೆಯುತ್ತದೆ. ಪಂದ್ಯದ ರೋಚಕತೆ, ವೈರತ್ವ, ಸ್ಲೆಡ್ಜಿಂಗ್, ವಾಕ್ಸಮರ ಸೇರಿದಂತೆ ಹಲವು ಪ್ರಸಂಗಗಳು ಅಭಿಮಾನಿಗಳ ಮನದಲ್ಲಿ ಹಚ್ಚ ಹಸುರಾಗಿ ನಿಂತಿದೆ. 2010ರ ಏಷ್ಯಾಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿಯಾಗಿತ್ತು. ಪಂದ್ಯ ಕುತೂಹಲ ತಲುಪುತ್ತಿದ್ದಂತೆ ಸ್ಲೆಡ್ಜಿಂಗ್ ಹೆಚ್ಚಾಯಿತು. ಸ್ಲೆಡ್ಜಿಂಗ್ ಹಾಗೂ ಪಂದ್ಯದ ನಂತರದ ಕತೆಯನ್ನು ಶೋಯೆಬ್ ಅಕ್ತರ್ ವಿವರಿಸಿದ್ದಾರೆ. 

ಧೋನಿ, ಕೊಹ್ಲಿಗಿಂತ ಸೌರವ್ ಗಂಗೂಲಿ ನಾಯಕತ್ವವೇ ಬೆಸ್ಟ್; ನೆಹ್ರಾ ಹೇಳಿದ್ರು ಕಾರಣ

ಕ್ರೀಸ್‌ನಲ್ಲಿದ್ದ ಹರ್ಭಜನ್ ಸಿಂಗ್ ಹಾಗೂ ಪಾಕಿಸ್ತಾನ ವೇಗಿ ಶೋಯೆಬ್ ಅಕ್ತರ್ ನಡುವೆ ಸ್ಲೆಡ್ಜಿಂಗ್ ಆರಂಭಗೊಂಡಿತ್ತು. ಅತ್ತ ಪಾಕಿಸ್ತಾನ ಆಟಗಾರರು, ಭಾರತೀಯ ಬ್ಯಾಟ್ಸ್‌ಮನ್‌ಗಳ ಕೆಣಕಿ ವಿಕೆಟ್ ಕಬಳಿಸಲು ಮುಂದಾಗಿದ್ದುರ. ಹೀಗಾಗಿ ಸ್ಲೆಡ್ಜಿಂಗ್ ತುಸು ಹೆಚ್ಚಾಗಿತ್ತು. ಅಂತಿಮ 47ನೇ ಓವರ್ ಮಾಡಿದ ಶೋಯಿಬ್ ಅಕ್ತರ್ ಹಾಗೂ ಹರ್ಭಜನ್ ನಡುವೆ ಮಾತಿನ ಚಕಮಕಿ ನಡೆಯಿತು.  ಅಕ್ತರ್ ಎಸೆತದಲ್ಲಿ ಹರ್ಭಜನ್ ಭರ್ಜರಿ ಸಿಕ್ಸರ್ ಸಿಡಿಸಿದ್ದರು.

ವಿದೇಶಿ ಆಟಗಾರರಿಲ್ಲದೆ IPL ಆಯೋಜನೆಗೆ CSK ವಿರೋಧ!

ಇದರಿಂದ ಕೋಪಗೊಂಡ ಅಕ್ತರ್ ಸತತ 2 ಬೌನ್ಸರ್ ಹಾಕಿ, ಹರ್ಭಜನ್‌ಗೆ ಈ ಎಸೆತಕ್ಕೂ ಸಿಕ್ಸರ್ ಸಿಡಿಸು, ಬೀಸಿದಾಗ ಸಿಕ್ಸರ್ ಹೋಯಿತೆಂದು ಖುಷಿಪಡಬೇಡ ಎಂದಿದ್ದರು. ಇತ್ತ ಕೆಣಕಿದರೆ ಸುಮ್ಮನೆ ಕೂರುವ ಜಾಯಮಾನ ಹರ್ಭಜನ್ ಸಿಂಗ್‌ಗೆ ಮೊದಲಿನಿಂದಲೇ ಇಲ್ಲ. ಭಜ್ಜಿ ಕೂಡ ಮಾತಿನಿಂದಲೇ ತಿರುಗೇಟು ನೀಡಿದರು. ಬಳಿಕ ನೇರವಾಗಿ ಅಕ್ತರ್ ಬಳಿ ಯುದ್ದಕ್ಕೆ ತೆರಳುವಂತೆ ಹೋಗಿದ್ದರು. ಅಷ್ಟರಲ್ಲೇ ಅಂಪೈರ್ ಸಮಾಧಾನ ಮಾಡಿ ತಾತ್ಕಾಲಿಕ ಬ್ರೇಕ್ ಹಾಕಿದರು.

ಅಕ್ತರ್ ಓವರ್ ಮುಗಿಸಿದರೂ ಜಗಳ ಮುಂದುವರಿದಿತ್ತು. ಭಾರತ 6 ವಿಕೆಟ್ ಕಳೆದುಕೊಂಡಿತ್ತು 49ನೇ ಓವರ್‌ನಲ್ಲಿ ಬೌನ್ಸರ್ ಮೂಲಕ ಕಂಟ್ರೋಲ್ ಮಾಡಿದ ಅಕ್ತರ್, ಭಜ್ಜಿ ಜೊತೆ ಎಗರಾಡಿದರು.  . ಭಾರತದ ಗೆಲುವಿಗೆ ಅಂತಿಮ 2 ಎಸೆತದಲ್ಲಿ 3 ರನ್ ಬೇಕಿತ್ತು ಈ ವೇಳೆ ಮೊಹಮ್ಮದ್ ಅಮೀರ್ ಎಸೆತದಲ್ಲಿ ಹರ್ಭಜನ್ ಸಿಂಗ್ ಭರ್ಜರಿ ಸಿಕ್ಸರ್ ಸಿಡಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಭಜ್ಜಿ ಅಕ್ತರ್‌ನತ್ತ ಮುಖಮಾಡಿ ಕಿರುಚಾಡಿದ್ದಾರೆ. ಇದು ಪಂಜಾಬ್ ತಾಖತ್ತು ಎಂದಿದ್ದಾರೆ.

ಒಂದೆಡೆ ಸೋಲು, ಮತ್ತೊಂದೆಡೆ ಹರ್ಭಜನ್ ಸಿಂಗ್ ಮಾತಿನಿಂದ ಕೋಪಗೊಂಡಿದ್ದ ಶೋಯೆಬ್ ಅಕ್ತರ್, ಪಂದ್ಯದ ಬಳಿಕ ಹರ್ಭಜನ್ ಸಿಂಗ್ ಹುಡುಕಿಕೊಂಡು ಹೊಟೆಲ್ ರೂಂನತ್ತ ತೆರಳಿದ್ದರು. ಭಜ್ಜಿ ಜೊತೆ ಜಗಳವಾಡಲು ನಿರ್ಧರಿಸಿದ್ದರು. ತನ್ನೆಲ್ಲಾ ಕೋಪವನ್ನು ತೀರಿಸಿಕೊಳ್ಳಲು ಅಕ್ತರ್ ಸಜ್ಜಾಗಿದ್ದರು. ಆದರೆ ಹರ್ಭಜನ್ ಸಿಂಗ್ ಸಿಗಲೇ ಇಲ್ಲ. ಹುಡುಕಾಡಿದರೂ ಭಜ್ಜಿ ಸಿಗಲಿಲ್ಲ ಎಂದು ಶೋಯೆಬ್ ಅಕ್ತರ್ ಹಳೇ ಘಟನೆ ನೆನಪಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ