
ಮುಂಬೈ(ಮೇ.16); ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭ್ಯಾಸ ಆರಂಭಿಸಿದ್ದಾರೆ. ಲಾಕ್‌ಡೌನ್ ಕಾರಣ ಮನೆಯೊಳಗೆ ಇದ್ದ ಕೊಹ್ಲಿ ಇದೀಗ ಹೊರಬಂದು ಅಭ್ಯಾಸ ಆರಂಭಿಸಿದ್ದಾರೆ. ಇತ್ತ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬ್ಯಾಟಿಂಗ್ ಟಿಪ್ಸ್ ನೀಡುತ್ತಿದ್ದಾರೆ. ಇಷ್ಟೇ ಅಲ್ಲ ಬೌನ್ಸರ್ ಎಸೆತದ ಎಸೆದು ಕೊಹ್ಲಿಗೆ ಸಂಪೂರ್ಣ ಅಭ್ಯಾಸ ಮಾಡಿಸುತ್ತಿದ್ದಾರೆ.
ಪ್ರಧಾನಿ ಪರಿಹಾರ ನಿಧಿ ಬಳಿಕ ಮುಂಬೈ ಪೊಲೀಸ್‌ಗೆ ದೇಣಿಕೆ ನೀಡಿದ ಕೊಹ್ಲಿ-ಅನುಷ್ಕಾ!
ಮುಂಬೈನಲ್ಲಿರುವ ಕೊಹ್ಲಿ ಹಾಗೂ ಅನುಷ್ಕಾ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಕ್ರಿಕೆಟ್ ಆಡಿದ್ದಾರೆ. ಮೊದಲು ಅನುಷ್ಕಾ ಶರ್ಮಾ ಬ್ಯಾಟಿಂಗ್ ಮಾಡಿದ್ದಾರೆ. ಪ್ರತಿ ಎಸೆತ ಎದುರಿಸದ ಮೇಲೆ ಕೊಹ್ಲಿಗೆ ಈ ರೀತಿ ಬ್ಯಾಟಿಂಗ್ ಮಾಡಬೇಕು ಎಂದು ಅನುಷ್ಕಾ ಶರ್ಮಾ ಪತಿ ಕೊಹ್ಲಿಗೆ ಹೇಳಿದ್ದಾರೆ. ಅನುಷ್ಕಾ ಬ್ಯಾಟಿಂಗ್ ಬಳಿಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ಲಾಕ್‌ಡೌನ್ ಪರಿಣಾಮ; ಸುದೀರ್ಘ ವರ್ಷಗಳಿಂದಿದ್ದ ಕೊಹ್ಲಿ ಬಿಯರ್ಡ್ ಸ್ಟೈಲ್ ಚೇಂಜ್!.
ವಿರಾಟ್ ಕೊಹ್ಲಿಗೆ ಅನುಷ್ಕಾ ಬೌನ್ಸರ್ ಎಸೆತ ಹಾಕಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕ್ರಿಕೆಟ್ ಆಡುವುದನ್ನು ಸನಿಹದ ಅಪಾರ್ಟ್‌ಮೆಂಟ್‌ನಿಂದ ವಿಡಿಯೋ ಮಾಡಲಾಗಿದೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಹಲವು ದಿನಗಳ ಬಳಿಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡುವ ಅವಕಾಶ ಸಿಕ್ಕಿತು ಎಂದು ಸಂತಸ ಹಂಚಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.