ಬೆಂಗಳೂರು ಎನ್‌ಸಿಎನಲ್ಲಿ ಪಿಂಕ್ ಬಾಲ್ ಅಭ್ಯಾಸ!

By Web Desk  |  First Published Nov 11, 2019, 3:34 PM IST

ಒಂದು ಕಡೆಯಲ್ಲಿ ಟಿ20 ಸರಣಿಯಲ್ಲಿ ಬಾಂಗ್ಲಾ ವಿರುದ್ಧ ಭಾರತ ಜಿದ್ದಾಜಿದ್ದಿನಿಂದ ಹೋರಾಡಿದರೆ, ಮತ್ತೊಂದೆಡೆ ಭಾರತದ ಟೆಸ್ಟ್ ಸ್ಪೆಷಲಿಸ್ಟ್‌ಗಳು ಬೆಂಗಳೂರಿನ ಎನ್‌ಸಿಎ ಮೈದಾನದಲ್ಲಿ ಅಭ್ಯಾಸ ನಡೆಸಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಬೆಂಗಳೂರು(ನ.11): ಭಾರತದ ಅಗ್ರ ಐವರು ಟೆಸ್ಟ್ ಬ್ಯಾಟ್ಸ್‌ಮನ್‌ಗಳು ಭಾನುವಾರ ಇಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ಪಿಂಕ್ ಬಾಲ್ ಅಭ್ಯಾಸ ನಡೆಸಿದರು. 

ದೀಪಕ್ ಚಹಾರ್ ದಾಳಿಗೆ ತತ್ತರಿಸಿದ ಬಾಂಗ್ಲಾ; ಸರಣಿ ಕೈವಶ ಮಾಡಿದ ಭಾರತ

Tap to resize

Latest Videos

ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ಮಯಾಂಕ್ ಅಗರ್‌ವಾಲ್, ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ಪಿಂಕ್ ಬಾಲ್ ಅಭ್ಯಾಸ ನಡೆಸಿದರು. ನ.22ರಂದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಹಗಲು-ರಾತ್ರಿ ಟೆಸ್ಟ್ ನಡೆಯಲಿದೆ.

BCCI ವಾರ್ಷಿಕ ಸಭೆಯ ಡೇಟ್ ಫಿಕ್ಸ್..!

ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ನಾಯಕ ವಿರಾಟ್ ಕೊಹ್ಲಿ ಸದ್ಯ ತಂಡ ಕೂಡಿಕೊಂಡಿಲ್ಲ. ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯವು ನವೆಂಬರ್ 14ರಿಂದ ಆರಂಭವಾಗಲಿದ್ದು, ಇಂದೋರ್’ನ ಹೋಳ್ಕರ್ ಮೈದಾನ ಆತಿಥ್ಯ ವಹಿಸಲಿದೆ. ಇನ್ನು ಐತಿಹಾಸಿಕ ಹಗಲು-ರಾತ್ರಿ ಪಂದ್ಯ ನವೆಂಬರ್ 22ರಿಂದ ಆರಂಭವಾಗಲಿದೆ. ಈ ಪಂದ್ಯದಲ್ಲಿ ಪಿಂಕ್ ಬಾಲ್ ಬಳಸಲಾಗುತ್ತದೆ. ಈಗಾಗಲೇ ಬಿಸಿಸಿಐ, ಚೆಂಡು ಪೂರೈಸುವ ಸಂಸ್ಥೆಯಾದ SG ಗೆ 72 ಪಿಂಕ್ ಬಾಲ್ ಪೂರೈಸುವಂತೆ ಕೇಳಿಕೊಂಡಿದೆ.  
 

click me!