ಬಿಸಿಸಿಐ ವಾರ್ಷಿಕ ಸಭೆಯ ಡೇಟ್ ಫಿಕ್ಸ್..!

Published : Nov 11, 2019, 02:42 PM IST
ಬಿಸಿಸಿಐ ವಾರ್ಷಿಕ ಸಭೆಯ ಡೇಟ್ ಫಿಕ್ಸ್..!

ಸಾರಾಂಶ

ಸೌರವ್ ಗಂಗೂಲಿ ನೇತೃತ್ವದಲ್ಲಿ ಬಿಸಿಸಿಐ ವಾರ್ಷಿಕ ಸಭೆಯ ದಿನಾಂಕ ಅಂತಿಮವಾಗಿದೆ. ಈ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ನವದೆಹಲಿ[ನ.11]: ಡಿ.1ರಂದು ಮುಂಬೈನಲ್ಲಿ ಬೆಳಗ್ಗೆ 11 ಗಂಟೆಗೆ ಬಿಸಿಸಿಐ 88ನೇ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ನಡೆಯಲಿದೆ. ಸಂವಿಧಾನದಲ್ಲಿ 12 ತಿದ್ದುಪಡಿಗಳು, ಸಾರ್ವಜನಿಕ ತನಿಖಾಧಿಕಾರಿ ಹಾಗೂ ನೈತಿಕ ಅಧಿಕಾರಿ ಹುದ್ದೆಗಳಿಗೆ ಹೊಸ ನೇಮಕಾತಿ ಕುರಿತು ಸಭೆಯಲ್ಲಿ ಚರ್ಚಿಸುವ ನಿರೀಕ್ಷೆಯಿದೆ.

3 ಹೊಸ ನಗರಗಳಲ್ಲಿ IPL ಪಂದ್ಯ ಆಯೋಜನೆ?

ನೂತನ ಅಧ್ಯಕ್ಷ ಸೌರವ್ ಗಂಗೂಲಿ ಬಿಸಿಸಿಐ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಹಗಲು-ರಾತ್ರಿ ಟೆಸ್ಟ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ ಗಂಗೂಲಿ ಅಧಿಕಾರಾವಧಿ ಕೇವಲ 9 ತಿಂಗಳು. ಆ ಬಳಿಕ ಗಂಗೂಲಿ 3 ವರ್ಷಗಳ ಕಾಲ ಯಾವುದೇ ಆಡಳಿತ ಹುದ್ದೆಗಳನ್ನು ಅಲಂಕರಿಸುವಂತಿಲ್ಲ. ದಾದಾಗೆ ತೊಂದರೆ ಆಗುವ ಕೂಲಿಂಗ್ ಆಫ್ ನಿಯಮವನ್ನೇ ತಿದ್ದುಪಡಿ ಮಾಡುವ ನಿರೀಕ್ಷೆಯಿದೆ.

ಸಚಿನ್ ದಾಖಲೆ ಮುರಿದ 15 ವರ್ಷದ ಶಫಾಲಿ

ಈ ಮೊದಲು ಬಿಸಿಸಿಐ ಸಭೆ ನವೆಂಬರ್ ತಿಂಗಳಂತ್ಯದಲ್ಲಿ ನಡೆಯಲಿದೆ ಎನ್ನಲಾಗಿತ್ತು. ಸೌರವ್ ಗಂಗೂಲಿ ಸ್ವತಃ ಈ ಹಿಂದೆ ಮಾತನಾಡಿದ್ದರು. ನವೆಂಬರ್ ತಿಂಗಳ ಮೂರನೇ ವಾರ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ, ಆದರೆ ದಿನಾಂಕ ಇನ್ನೂ ತೀರ್ಮಾನವಾಗಿಲ್ಲ ಎಂದಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!
20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!