ಕೈಕೊಟ್ಟ ಅದೃಷ್ಟ: ಮತ್ತೆ ಸೂಪರ್ ಓವರ್‌ನಲ್ಲಿ ಸೋತು ಸರಣಿ ಕೈಚೆಲ್ಲಿದ ಕಿವೀಸ್

By Web DeskFirst Published Nov 11, 2019, 11:57 AM IST
Highlights

ಸೂಪರ್ ಓವರ್ ನ್ಯೂಜಿಲೆಂಡ್ ಪಾಲಿಗೆ ಮತ್ತೊಮ್ಮೆ ವಿಲನ್ ಆಗಿ ಪರಿಣಮಿಸಿದೆ. ಇಂಗ್ಲೆಂಡ್ ವಿರುದ್ಧ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೂಪರ್ ಓವರ್ ಕಿವೀಸ್ ಪಾಲಿಗೆ ಕರಾಳ ದಿನವಾಗಿ ಬದಲಾಗಿತ್ತು. ಕಾಕತಾಳೀಯವೆಂದರೆ ಇದೀಗ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಮತ್ತೆ ಸೂಪರ್ ಓವರ್‌ನಲ್ಲಿ ಮುಗ್ಗರಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಆಕ್ಲೆಂಡ್(ನ.11): ಆತಿಥೇಯರ ವಿರುದ್ಧ 5ನೇ ಟಿ20 ಪಂದ್ಯದಲ್ಲಿ ಸೂಪರ್ ಓವರ್ ಜಯ ಕಂಡ ಇಂಗ್ಲೆಂಡ್, 3-2ರಲ್ಲಿ ಸರಣಿಯನ್ನು ಗೆದ್ದಿದೆ. 1-2 ರಿಂದ ಹಿನ್ನಡೆ ಅನುಭವಿಸಿದ್ದ ಇಂಗ್ಲೆಂಡ್, ಕೊನೆಯ 2 ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿದೆ. 

🏆 SERIES WINNERS!! 🏆

Scorecard: https://t.co/Ksqa93rQCX pic.twitter.com/WSjhMOESNN

— England Cricket (@englandcricket)

4ನೇ ಟಿ20: ನ್ಯೂಜಿ​ಲೆಂಡ್‌ ವಿರುದ್ಧ ಇಂಗ್ಲೆಂಡ್‌ಗೆ ಜಯ

ಭಾನುವಾರ ಮಳೆಯಿಂದ ಪಂದ್ಯ 11 ಓವರ್‌ಗೆ ಸೀಮಿತಗೊಂಡಿತ್ತು. ಕಿವೀಸ್ ನೀಡಿದ 147 ರನ್‌ಗಳ ಸವಾಲ ಬೆನ್ನತ್ತಿದ ಇಂಗ್ಲೆಂಡ್ ಬೇರ್‌ಸ್ಟೋವ್ 18 ಎಸೆತ 47 ರನ್, ಸ್ಯಾಮ್ ಕರನ್ 11 ಎಸೆತ 24 ರನ್ ಆಟದಿಂದ 7 ವಿಕೆಟ್ ಗೆ 146 ರನ್‌ಗಳಿಸಿ ಟೈ ಸಾಧಿಸಿತ್ತು. 

WHAT A GAME!

Another Super Over. Another England win. But this time by a comfortable margin of nine runs.

The visitors take the series 3-2 after a rollicking evening in Auckland. SCORECARD👇https://t.co/GDmzXyby2C pic.twitter.com/Etvn8sFgqf

— ICC (@ICC)

ಮೊದಲು ಬ್ಯಾಟ್ ಮಾಡಿದ ಕಿವೀಸ್ ಆರಂಭಿಕ ಗಪ್ಟಿಲ್ 20 ಎಸೆತ 50 ರನ್, ಮನ್ರೊ 21 ಎಸೆತ 46 ರನ್ ಹಾಗೂ ಸೀಫರ್ಟ್ 16 ಎಸೆತ 39 ರನ್‌ಗಳಿಂದ 5 ವಿಕೆಟ್‌ಗೆ 146 ರನ್ ಪೇರಿಸಿತ್ತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 17 ರನ್‌ಗಳಿಸಿದರೆ, ಕಿವೀಸ್ ಕೇವಲ 8 ರನ್‌ಗಳಿಸಿ ಸೋಲೊಪ್ಪಿತು. 2019 ಏಕದಿನ ವಿಶ್ವಕಪ್ ಫೈನಲ್ ಇದೇ ರೀತಿ ಫೈನಲ್‌ಗೆ ಸಾಕ್ಷಿಯಾಗಿತ್ತು.

ಸೂಪರ್ ಓಪರ್, ಕಿವೀಸ್ ಪಾಲಿಗೆ ಕರಾಳ ಓವರ್:

ಹೌದು, ಸೂಪರ್ ಓಪರ್ ನ್ಯೂಜಿಲೆಂಡ್ ತಂಡದ ಪಾಲಿಗೆ ಅನ್ ಲಕ್ಕಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್ ಗೆಲುವಿನ ಕನವರಿಕೆಯಲ್ಲಿದ್ದ ಕಿವೀಸ್’ಗೆ ಸೂಪರ್ ಓವರ್ ಕರಾಳ ಕ್ಷಣವಾಗಿ ಬದಲಾಗಿತ್ತು. ಆದರೆ ಸೂಪರ್ ಓವರ್ ಎನ್ನುವುದು ನ್ಯೂಜಿಲೆಂಡ್ ಪಾಲಿಗೆ ಕಹಿ ನೆನಪು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಯಾಕೆಂದರೆ ಇದುವರೆಗೂ ನ್ಯೂಜಿಲೆಂಡ್ ಇದುವರೆಗೂ 6 ಬಾರಿ ಸೂಪರ್ ಓವರ್ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಒಮ್ಮೆ ಮಾತ್ರ ಗೆಲುವಿನ ನಗೆ ಬೀರಿದೆ. ಉಳಿದ 5 ಪಂದ್ಯಗಳಲ್ಲೂ ಸೋಲಿನ ಕಹಿ ಉಂಡಿದೆ.  

ಸ್ಕೋರ್: 

ನ್ಯೂಜಿಲೆಂಡ್ 11 ಓವರಲ್ಲಿ 146/5

ಇಂಗ್ಲೆಂಡ್ 11 ಓವರಲ್ಲಿ 146/7
 

click me!