
ಬೆಂಗಳೂರು(ನ.12) ಭಾರತೀಯರು ನಾಲ್ಕು ವರ್ಷಗಳಿಂದ ಆ ಕ್ಷಣಕ್ಕಾಗಿ ಕಾಯ್ತಿದ್ದರು. ಕೊನೆಗೂ ಆ ಕ್ಷಣ ಬಂದೇ ಬಿಟ್ಟಿದೆ. ಅದು ಅಂತಿದ್ದ ಸೇಡಲ್ಲ. ವಿಶ್ವಕಪ್ ಅನ್ನೇ ತಮ್ಮ ಕೈಯಿಂದ ಕಿತ್ತುಕೊಂಡ ಸೇಡು. ಆ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಅದ್ಭುತ ಅವಕಾಶವೊಂದು ಒದಗಿ ಬಂದಿದೆ. ಫಸ್ಟ್ ಸೆಮಿಫೈನಲ್ಗಾಗಿ ಇಡೀ ಇಂಡಿಯಾವೇ ಕಾಯ್ತಿದೆ.
ಯೆಸ್, ಮಾಣಿಕ್ಯ ಸಿನಿಮಾದ ಸುದೀಪ್ ಡೈಲಾಗ್ ಈಗ ಟೀಂ ಇಂಡಿಯಾಗೆ ಸಖತ್ ಸ್ಯೂಟ್ ಆಗುತ್ತೆ. ಆಗಿನ ಟೀಂ ಇಂಡಿಯಾನೇ ಬೇರೆ. ಈಗಿರುವ ಟೀಂ ಇಂಡಿಯಾನೇ ಬೇರೆ. ಅಂದು ಒಂದೊಂದು ಜಯಕ್ಕಾಗಿ ಪರದಾಡುತ್ತಿದ್ದ ಭಾರತೀಯರು, ಇಂದು 8ಕ್ಕೆ 8 ಪಂದ್ಯಗಳನ್ನೂ ಗೆದ್ದು ಸೋಲಿಲ್ಲದ ಸರದಾರರು ಎನಿಸಿಕೊಂಡಿದ್ದಾರೆ. ಈಗಿನ ಟೀಂ ಇಂಡಿಯಾವನ್ನ ಕಟ್ಟಿಹಾಕಲು ಎಂಟು ಗುಡ್ಡಿಗೆ ಬೇಕು.
ಈ ವಿಶ್ವಕಪ್‌ನಲ್ಲಿ ಪಾಕ್‌ಗಿಂತ ಅಫ್ಘನ್ ಆಟ ಚೆನ್ನಾಗಿತ್ತು: ವಾಸೀಂ ಅಕ್ರಂ
ಒನ್ಡೇ ವರ್ಲ್ಡ್‌ಕಪ್ ಫಸ್ಟ್ ಸೆಮಿಫೈನಲ್ನಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿ, ಫಿಕ್ಸ್ ಆಗಿದೆ. ಸಿಂಹಳೀಯರನ್ನ ಬೇಟೆಯಾಡಿದ ಕಿವೀಸ್ 4ನೇ ತಂಡವಾಗಿ ಸೆಮೀಸ್‌ಗೆ ಎಂಟ್ರಿ ಪಡೆದಿದೆ. ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದ್ದು, ಮೊದಲ ಮತ್ತು 4ನೇ ಸ್ಥಾನದಲ್ಲಿರುವ ಭಾರತ-ಕಿವೀಸ್ ತಂಡಗಳು ಬುಧವಾರ ಮುಂಬೈನಲ್ಲಿ ಫಸ್ಟ್ ಸೆಮಿಫೈನಲ್ ಆಡಲಿವೆ. ಅಲ್ಲಿಗೆ ಮತ್ತೊಂದು ಬಿಗ್ ಫೈಟ್‌ಗೆ ವಿಶ್ವಕಪ್ ಸಾಕ್ಷಿಯಾಗಲಿದೆ.
2019ರ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ ಸೋತು ಟೀಂ ಇಂಡಿಯಾ ನಿರಾಸೆ ಅನುಭವಿಸಿತ್ತು. ಈಗ ಆ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತೀಯರಿಗೆ ಉತ್ತಮ ಅವಕಾಶ ಬಂದೊದಗಿದೆ. ಅದು ಅಂತಿಥ ಅವಕಾಶವಲ್ಲ. ಭಾರತದಲ್ಲಿ ವರ್ಲ್ಡ್‌ಕಪ್ ನಡೆಯುತ್ತಿರುವುದರಿಂದ ತವರಿನಲ್ಲೇ ಕಿವೀಸ್ ಕಿವಿ ಕಚ್ಚಿ, 4 ವರ್ಷಗಳ ಸೇಡು ತೀರಿಸಿಕೊಳ್ಳಲು ಅವಕಾಶ ಸಿಕ್ಕಿದೆ. ಮುಂಬೈನಲ್ಲಿ ಲಂಕಾವನ್ನ ಸೋಲಿಸಿದ್ದ ಟೀಂ ಇಂಡಿಯಾ, ಈಗ ಅಲ್ಲಿಯೇ ಕಿವೀಸ್ ಸೋಲಿಸಲು ಅಣಿಯಾಗಿದೆ.
ICC World Cup 2023: ನೆದರ್‌ಲೆಂಡ್ಸ್ ಬೇಟೆಗೆ ಅಜೇಯ ಟೀಂ ಇಂಡಿಯಾ ಸಜ್ಜು..!
2003ರ ನಂತರ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಟೂರ್ನಿಯಲ್ಲಿ ಭಾರತ ಗೆದ್ದೇ ಇರಲಿಲ್ಲ. ಆದ್ರೆ ಈ ವರ್ಲ್ಡ್‌ಕಪ್‌ನ ಲೀಗ್ ಮ್ಯಾಚ್‌ನಲ್ಲಿ ಸೋಲಿಸಿ 20 ವರ್ಷಗಳ ಸೋಲಿನ ಭರ ನೀಗಿಸಿಕೊಂಡಿತ್ತು. ಈಗ ಮತ್ತೊಮ್ಮೆ ಕಿವೀಸ್ ಎದುರಾಗಿದೆ. ಐಸಿಸಿ ನಾಕೌಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತೀಯರು ಇದುವರೆಗೂ ಗೆದ್ದಿಲ್ಲ. ಈ ಸಲ ಗೆದ್ದು ಇತಿಹಾಸ ನಿರ್ಮಿಸಲು ಕಾಯ್ತಿದೆ ಟೀಂ ಇಂಡಿಯಾ. ಇಂದು ಬೆಂಗಳೂರಿನಲ್ಲಿ ಭಾರತ-ನೆದರ್ ಲ್ಯಾಂಡ್ಸ್ ಕೊನೆ ಲೀಗ್ ಪಂದ್ಯ ನಡೆಯುತ್ತಿದೆ. ಆದ್ರೆ ಭಾರತೀಯರ ಚಿತ್ತ ಮಾತ್ರ ಬುಧವಾರ ಮಾಯಾನಗರಿ ಮುಂಬೈನಲ್ಲಿ ನಡೆಯೋ ಸೆಮಿಫೈನಲ್ನತ್ತ ನೆಟ್ಟಿದೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.