ದೇಶದ ಅಗ್ರಕಂಪನಿಗಳಿಗೆ ಬಿಸಿಸಿಐ ಅಪಶಕುನ...! ಕ್ರಿಕೆಟ್‌ಗೆ ಸ್ಪಾನ್ಸರ್ ಆದವರೆಲ್ಲಾ ಮಟಾಷ್

Published : Sep 21, 2026, 07:17 PM IST
BCCI

ಸಾರಾಂಶ

ಭಾರತದಲ್ಲಿ ಕ್ರಿಕೆಟ್‌ಗೆ ಸ್ಪಾನ್ಸರ್ ಮಾಡುವ ಪ್ರತಿಷ್ಠಿತ ಕಂಪನಿಗಳು ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕುತ್ತಿವೆ. ಸಹರಾ, ಬೈಜೂಸ್, ಒಪ್ಪೋ ಬಳಿಕ ಇದೀಗ ಐಪಿಎಲ್ ಟೈಟಲ್ ಸ್ಪಾನ್ಸರ್ ಟಾಟಾ ಗ್ರೂಪ್ ಕೂಡ ಆರ್ಥಿಕ ಮತ್ತು ಆಂತರಿಕ ಸಮಸ್ಯೆಗೆ ಗುರಿಯಾಗಿದೆ. ಇದು ಬಿಸಿಸಿಐ ತಲೆನೋವು ಹೆಚ್ಚಿಸಿದೆ.

ಭಾರತದಲ್ಲಿ ಕ್ರಿಕೆಟ್‌ ಅನ್ನು ಧರ್ಮದಂತೆ ಆರಾಧಿಸುವ ಒಂದು ವರ್ಗವೇ ಇದೆ. ಅದರಲ್ಲೂ ಭಾರತದಲ್ಲಿ ಕ್ರಿಕೆಟ್‌ಗೆ ಸ್ಪಾನ್ಸರ್ ನೀಡಲು ದೇಶದ ಹಲವು ಪ್ರತಿಷ್ಠಿತ ಕಂಪನಿಗಳು ನಾ ಮುಂದು, ತಾ ಮುಂದು ಎಂದು ಸ್ಪರ್ಧೆಗಿಳಿದಂತೆ ಮುಂದಕ್ಕೆ ಬರುತ್ತವೆ. ಆದರೆ ದುರಾದೃಷ್ಟವೆಂದರೆ ಕ್ರಿಕೆಟ್‌ಗೆ ಸ್ಪಾನ್ಸರ್ ನೀಡಿದ ದೇಶದ ಅಗ್ರಕಂಪನಿಗಳು ಒಂದಿಲ್ಲೊಂದು ವಿಚಾರಕ್ಕೆ ಸಂಕಷ್ಟಕ್ಕೆ ಸಿಲುಕುತ್ತಿರುವುದು ಅಚ್ಚರಿಯೆನಿಸಿದ್ರೂ ಸತ್ಯ. ಅದಕ್ಕೆ ಇದೀಗ ಹೊಸ ಸೇರ್ಪಡೆ ಟಾಟಾ ಸನ್ಸ್‌ ಗ್ರೂಪ್.

ಟಾಟಾ ಪಾಳಯದಲ್ಲಿ ತಲ್ಲಣ; ಐಪಿಎಲ್‌ ಟೈಟಲ್‌ಗೆ ಶುರುವಾಯ್ತು ಹೊಸ ಚಿಂತೆ:

ಹೌದು, ಐಪಿಎಲ್ ಟೈಟಲ್ ಸ್ಪಾನ್ಸರ್ ಪಡೆದುಕೊಂಡಿರುವ ಟಾಟಾ ಸಂಕಷ್ಟಕ್ಕೆ ಸಿಲುಕಿದೆ. ಟಾಟಾ ಸನ್ಸ್‌ ಹಾಗೂ ನೋಯೆಲ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇದರ ಬೆನ್ನಲ್ಲೇ ಟಾಟಾ ಆದಾಯದಲ್ಲಿ ಭಾರೀ ಕುಸಿತ ಕಂಡಿದೆ. 2022ರಲ್ಲಿ ಟಾಟಾ ಕಂಪನಿ ಐಪಿಎಲ್ ಟೈಟಲ್ ಸ್ಪಾನ್ಸರ್ ಪಡೆದುಕೊಂಡಿತು. ಬಳಿಕ 2028ರ ವರೆಗೆ ಟಾಟಾ ಟೈಟಲ್ ಸ್ಪಾನ್ಸರ್ ವಿಸ್ತರಣೆ ಮಾಡಿದೆ. ಆದರೆ ಟಾಟಾ ಗ್ರೂಪ್ ತೀವ್ರ ಸಮಸ್ಯೆಯಲ್ಲಿ ಸಿಲುಕಿರುವುದು ಬಿಸಿಸಿಐ ತಲೆನೋವು ಹೆಚ್ಚಿಸುವಂತೆ ಮಾಡಿದೆ.

ಅಂದಹಾಗೆ ಈ ಹಿಂದೆ ಟೀಂ ಇಂಡಿಯಾಗೆ ಸ್ಪಾನ್ಸರ್ ನೀಡಿದಂತಹ ಸಹರಾ ಗ್ರೂಪ್, ಬೈಜೂಸ್, ಚೀನಾ ಮೂಲದ ಕಂಪನಿಯಾದ ಒಪ್ಪೋ ಕೂಡಾ ಸಂಕಷ್ಟಕ್ಕೆ ಸಿಲುಕಿವೆ.

Sahara India: 2001ರಿಂದ ಭಾರತ ತಂಡದ ಪ್ರಮುಖ ಶರ್ಟ್ ಸ್ಪಾನ್ಸರ್‌ಗಳಲ್ಲಿ ಒಂದು

SEBIಗೆ ಸಂಬಂಧಿಸಿದ ನಿಯಂತ್ರಣ ಮತ್ತು ಹೂಡಿಕೆದಾರರ ಹಣ ಮರುಪಾವತಿ ವಿಚಾರದಲ್ಲಿ ದೊಡ್ಡ ಕಾನೂನು ಸಂಕಷ್ಟ ಎದುರಿಸಿತು

OPPO India: 2017–2019 ಟೀಂ ಇಂಡಿಯಾ ಸ್ಪಾನ್ಸರರ್

2019ರಲ್ಲಿ ತನ್ನ Team India sponsor rights ಅನ್ನು BYJU'Sಗೆ ವರ್ಗಾಯಿಸಿತು. ಹೀಗಾಗಿ ಒಪ್ಪೋಗೆ ಭಾರತದಲ್ಲಿ ಕೊಂಚ ಮಟ್ಟಿಗೆ ಹಿನ್ನಡೆಯಾಗಿ ಪರಿಣಮಿಸಿತು.

BYJU'S: 2019–2023 ಟೀಂ ಇಂಡಿಯಾ ಶರ್ಟ್ ಸ್ಪಾನ್ಸರರ್

BCCIಗೆ sponsorship payment ಸಂಬಂಧಿತ ದೊಡ್ಡ ವಿವಾದ ಎದುರಾಯಿತು. BCCIಯ 2024–25 audited accounts ಪ್ರಕಾರ, ಪಾವತಿಗಳು ಸೆಪ್ಟೆಂಬರ್ 2022ರಿಂದ ನಿಂತಿದ್ದವು; ನಂತರ NCLT insolvency proceedings ನಡೆದವು.

Dream11: 2023ರಿಂದ ಟೀಂ ಇಂಡಿಯಾ ಲೀಡ್ ಸ್ಪಾನ್ಸರರ್

2025ರಲ್ಲಿ real-money online gaming ಮೇಲಿನ ಕಾನೂನು ಬದಲಾವಣೆಗಳ ಹಿನ್ನೆಲೆಯಲ್ಲಿ Team India lead sponsorship ಒಪ್ಪಂದದಿಂದ ಹೊರಬಂತು. ನಂತರ Apollo Tyres ಹೊಸ lead sponsor ಆಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಕ್ಕಲಂ, ದ್ರಾವಿಡ್ ಇವರ್ಯಾರು ಅಲ್ಲ, ಅಚ್ಚರಿ ರೀತಿಯಲ್ಲಿ ಆರ್‌ಸಿಬಿ ಮಾಜಿ ಕ್ರಿಕೆಟಿಗನನ್ನು ಹೆಡ್‌ ಕೋಚ್ ಆಗಿ ನೇಮಿಸಿದ ಸಿಎಸ್‌ಕೆ..!
Gautam gambhir: ಅಮಿತ್ ಶಾ ಭೇಟಿಗೆ ದಿಢೀರ್ ಬಂದ ಗೌತಮ್ ಗಂಭೀರ್; ಇಬ್ಬರ ನಡುವೆ ನಡೆದಿದ್ದೇನು? ಇಬ್ಬರ ಫೋಟೋ ವೈರಲ್‌!