Gautam gambhir: ಅಮಿತ್ ಶಾ ಭೇಟಿಗೆ ದಿಢೀರ್ ಬಂದ ಗೌತಮ್ ಗಂಭೀರ್; ಇಬ್ಬರ ನಡುವೆ ನಡೆದಿದ್ದೇನು? ಇಬ್ಬರ ಫೋಟೋ ವೈರಲ್‌!

Published : Sep 21, 2026, 05:12 PM IST
Amit Sha!

ಸಾರಾಂಶ

ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದಿಢೀರ್ ಭೇಟಿಯಾಗಿದ್ದು, ಈ ಫೋಟೋ ವೈರಲ್ ಆಗಿದೆ. ರಾಜಕೀಯದಿಂದ ನಿವೃತ್ತರಾಗಿ ಕ್ರಿಕೆಟ್ ಕೋಚ್ ಆಗಿರುವ ಗಂಭೀರ್ ಅವರ ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ವೆಸ್ಟ್ ಇಂಡೀಸ್ ಸರಣಿ ಮತ್ತು ಏಷ್ಯನ್ ಗೇಮ್ಸ್ ನಡುವೆ ಈ ಭೇಟಿ ನಡೆದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಕೇಂದ್ರ ಗೃಹ ಸಚಿವ ಹಾಗೂ ಹಿರಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಮಿತ್ ಶಾ ಅವರನ್ನು ದಿಢೀರ್ ಭೇಟಿಯಾಗಿದ್ದು, ರಾಜಕೀಯ ಮತ್ತು ಕ್ರೀಡಾ ವಲಯದಲ್ಲಿ ಹೊಸ ಸಂಸಲನ ಸೃಷ್ಟಿಸಿದೆ. ಗೌತಮ್ ಗಂಭೀರ್ ಅವರು ಅಮಿತ್ ಶಾ ಅವರೊಂದಿಗಿನ ತಮ್ಮ ಭೇಟಿಯ ಅತ್ಯಂತ ಆತ್ಮೀಯ ಕ್ಷಣದ ಫೋಟೋವನ್ನು ಸ್ವತಃ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ಸಖತ್ ವೈರಲ್ ಆಗಿದ್ದು, ಸಾರ್ವಜನಿಕರು ಹಾಗೂ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮತ್ತು ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ.

ರಾಜಕೀಯ ಹಿನ್ನೆಲೆ ಮತ್ತು ತೀವ್ರಗೊಂಡ ಊಹಾಪೋಹಗಳು!

ಗೌತಮ್ ಗಂಭೀರ್ ಅವರು ಭಾರತೀಯ ಕ್ರಿಕೆಟ್ ತಂಡದ ತರಬೇತುದಾರರಾಗುವ ಮೊದಲು ಸಕ್ರಿಯ ರಾಜಕೀಯದಲ್ಲಿದ್ದರು. ಅವರು ಬಿಜೆಪಿ ಟಿಕೆಟ್‌ನಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಗೌತಮ್ ಗಂಭೀರ್ ಅವರು ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಅರವಿಂದರ್ ಸಿಂಗ್ ಲವ್ಲಿ ಅವರನ್ನು ಬಬೃಹತ್ ಅಂತರದಿಂದ ಸೋಲಿಸಿ ಭರ್ಜರಿ ಜಯ ದಾಖಲಿಸಿದ್ದರು.

ರಾಜಕೀಯ ವಿದಾಯ!

ಆದರೆ, ಸಂಸದರಾದ ನಂತರ ಗಂಭೀರ್ ಕೇವಲ ಒಂದು ಅವಧಿಗೆ (ಒಂದು ಟರ್ಮ್) ಮಾತ್ರ ರಾಜಕೀಯ ಜೀವನದಲ್ಲಿ ಸಕ್ರಿಯರಾಗಿದ್ದರು. ತದನಂತರ ನಡೆದ 2024 ರ ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸದಿರಲು ನಿರ್ಧರಿಸಿದರು ಮತ್ತು ರಾಜಕೀಯ ರಂಗದಿಂದ ಸಂಪೂರ್ಣವಾಗಿ ನಿವೃತ್ತಿ ಘೋಷಿಸಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದರು. ಈ ಹಠಾತ್ ನಿರ್ಧಾರಕ್ಕೆ ಪ್ರಾಥಮಿಕ ಕಾರಣವೆಂದರೆ ತಮ್ಮ ಕ್ರೀಡಾ ಬದ್ಧತೆಗಳು, ಐಪಿಎಲ್ ಮಾರ್ಗದರ್ಶನ ಮತ್ತು ಕ್ರಿಕೆಟ್ ಕ್ಷೇತ್ರದ ಜವಾಬ್ದಾರಿಗಳು ಎಂದು ಗಂಭೀರ್ ಸ್ಪಷ್ಟಪಡಿಸಿದ್ದರು. ರಾಜಕೀಯದಿಂದ ಹೊರಬಂದ ನಂತರವೇ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿ ಸಿಐ) ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಹೊಣೆಗಾರಿಕೆಯನ್ನು ನೀಡಿತು. ಪ್ರಸ್ತುತ ಗಂಭೀರ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಅಧಿಕಾರಾವಧಿಯು 2027 ರ ಏಕದಿನ ವಿಶ್ವಕಪ್ ಮುಕ್ತಾಯದವರೆಗೆ ವಿಸ್ತರಿಸಿದೆ. ಹೀಗಾಗಿ, ಈಗ ಗೃಹ ಸಚಿವರನ್ನು ಭೇಟಿಯಾಗಿರುವುದು ಸೌಹಾರ್ದಯುತ ಭೇಟಿಯೇ ಅಥವಾ ಇದರ ಹಿಂದೆ ಮತ್ತೆ ಯಾವುದೇ ರಾಜಕೀಯ ಮರುಪ್ರವೇಶದ ಸುಳಿವು ಇದೆಯೇ ಎಂಬ ಚರ್ಚೆಗಳು ಶುರುವಾಗಿವೆ.

ವೆಸ್ಟ್ ಇಂಡೀಸ್ ಸರಣಿಗೆ ಸಿದ್ಧತೆ ಮತ್ತು ಏಷ್ಯನ್ ಗೇಮ್ಸ್ ಸವಾಲು!

ಮತ್ತೊಂದೆಡೆ, ಗೌತಮ್ ಗಂಭೀರ್ ಅವರು ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಮುಂಬರುವ ಸರಣಿಗಳಿಗಾಗಿ ಕಠಿಣ ತರಬೇತಿ ಮತ್ತು ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಏಕದಿನ (ODI) ಹಾಗೂ ಟಿ20 (T20) ಪಂದ್ಯಗಳ ರೋಚಕ ಸರಣಿ ನಡೆಯಲಿದೆ. ಮುಖ್ಯ ಕೋಚ್ ಆಗಿ ಗಂಭೀರ್ ಈ ಸರಣಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಬಲವಾದ ತಂತ್ರಗಾರಿಕೆಯನ್ನು ರೂಪಿಸುತ್ತಿದ್ದಾರೆ.

ಬುಸಿ ಶೆಡ್ಯೂಲ್‌ ಅಲ್ಲಿ ಭೇಟಿ!

ಇದೇ ಸಮಯದಲ್ಲಿ, ಜಪಾನ್‌ನಲ್ಲಿ ಏಷ್ಯನ್ ಕ್ರೀಡಾಕೂಟವೂ (Asian Games) ನಡೆಯುತ್ತಿದ್ದು, ಟೀಮ್ ಇಂಡಿಯಾ ಕೂಡ ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ. ಆದರೆ, ಈ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೇವಲ ಟಿ20 ಪಂದ್ಯಾವಳಿಯಲ್ಲಿ ಮಾತ್ರ ಕಣಕ್ಕಿಳಿಯಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ದ್ವಿಪಕ್ಷೀಯ ಸರಣಿ ಮತ್ತು ಜಪಾನ್‌ನಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟ — ಈ ಎರಡೂ ಪ್ರಮುಖ ಪಂದ್ಯಾವಳಿಗಳು ಒಂದೇ ಸಮಯದಲ್ಲಿ (ಏಕಕಾಲದಲ್ಲಿ) ನಡೆಯುತ್ತಿರುವುದರಿಂದ ಮುಖ್ಯ ಕೋಚ್ ಗಂಭೀರ್ ಅವರ ವೃತ್ತಿಪರ ಜವಾಬ್ದಾರಿ ಹಂಚಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿ ಸಿಐ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಅಧ್ಯಕ್ಷರಾದ ವಿವಿಎಸ್ ಲಕ್ಷ್ಮಣ್ ಅವರನ್ನು ಏಷ್ಯನ್ ಕ್ರೀಡಾಕೂಟಕ್ಕೆ ತೆರಳಿರುವ ಭಾರತೀಯ ತಂಡಕ್ಕೆ ಮುಖ್ಯ ತರಬೇತುದಾರರಾಗಿ (ಕೋಚ್) ನೇಮಿಸಿದೆ. ಹೀಗೆ ಸಾಲು ಸಾಲು ಕ್ರಿಕೆಟ್ ಸರಣಿಗಳ ಬ್ಯುಸಿ ಶೆಡ್ಯುಲ್‌ ನಡುವೆಯೂ, ಗೌತಮ್ ಗಂಭೀರ್ ದೇಶದ ಪ್ರಭಾವಿ ನಾಯಕ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ಕ್ರೀಡಾ ಮತ್ತು ರಾಜಕೀಯ ವಲಯಗಳೆರಡರಲ್ಲೂ ದೊಡ್ಡ ಮಟ್ಟದ ವೈರಲ್ ಸುದ್ದಿಯಾಗಿ ಹೊರಹೊಮ್ಮಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

"ನಾನಂದು ಆ ನಿರ್ಧಾರ ತಗೊಳ್ಳದಿದ್ರೆ ದ್ರಾವಿಡ್ ಕರಿಯರ್ ಮುಗಿದೇ ಹೋಗ್ತಿತ್ತು!": ಸೌರವ್ ಗಂಗೂಲಿ ಬಿಚ್ಚಿಟ್ಟ ರಹಸ್ಯ!
ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ ಅಲ್ಲ, ಈತನೇ ಭಾರತದ ಭವಿಷ್ಯದ ಸೂಪರ್ ಸ್ಟಾರ್ ಎಂದ ಸನತ್ ಜಯಸೂರ್ಯ..!