ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿಗಾಗಿ ಅರ್ಧ ದೇಶ ಸುತ್ತಲಿದೆ ಟೀಂ ಇಂಡಿಯಾ..!

By Suvarna NewsFirst Published Jun 29, 2023, 3:50 PM IST
Highlights

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭ
9 ನಗರಗಳಲ್ಲಿ ಲೀಗ್ ಹಂತದ ಪಂದ್ಯಗಳನ್ನಾಡಲಿರುವ ಟೀಂ ಇಂಡಿಯಾ
ಲೀಗ್ ಹಂತದಲ್ಲಿ 12 ಸಾವಿರ ಕಿಲೋಮೀಟರ್ ಪ್ರಯಾಣ ಮಾಡಲಿರುವ ರೋಹಿತ್ ಶರ್ಮಾ ಪಡೆ

ಬೆಂಗಳೂರು(ಜೂ.29) ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ರಿಲೀಸ್​ ಆಗಿದೆ. ಮೂರು ತಿಂಗಳು ಮೊದಲೇ, ವಿಶ್ವಕಪ್ ಫೀವರ್ ಶುರುವಾಗಿದೆ. ಭಾರತದಲ್ಲೇ ಟೂರ್ನಿ ನಡೆಯುತ್ತಿರೋದ್ರಿಂದ ವಿಶ್ವಕಪ್ ಪಂದ್ಯಗಳನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ರೆಡಿಯಾಗಿದ್ದಾರೆ. ಅದರಲ್ಲೂ ಟೀಂ ಇಂಡಿಯಾ ಆಡೋ ಮ್ಯಾಚ್​​ಗಳನ್ನ ನೋಡಲು ಕಾತರರಾಗಿದ್ದಾರೆ. ಇನ್ನು ರೋಹಿತ್ ಶರ್ಮಾ ಪಡೆ ದೇಶದ ಒಂಬತ್ತು ಕಡೆ ಪಂದ್ಯಗಳನ್ನಾಡಲಿದೆ.

9 ಪಂದ್ಯಗಳಿಗಾಗಿ 12,125 ಕಿ. ಮೀ. ಸಂಚಾರ..!

Latest Videos

ಹೌದು, ವಿಶ್ವಕಪ್​ ಪಂದ್ಯಗಳಿಗಾಗಿ ಟೀಂ ಇಂಡಿಯಾ ಆಲ್ಮೋಸ್ಟ್ ಇಡೀ ದೇಶ ಸುತ್ತಲಿದೆ. ಒಂದೊಂದು ಪಂದ್ಯಕ್ಕಾಗಿ ಸಾವಿರಾರು ಕಿಲೋ ಮೀಟರ್ ಪ್ರಯಾಣ ಬೆಳೆಸಲಿದೆ. ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಎರಡು ವಾರ್ಮ್​ ಅಪ್‌ ಮ್ಯಾಚ್​ ಸೇರಿ, ಒಟ್ಟು ಒಂಬತ್ತು ಲೀಗ್ ಪಂದ್ಯಗಳಿಗಾಗಿ 12 ಸಾವಿರಕ್ಕೂ ಹೆಚ್ಚು ಕಿಲೋ ಮೀಟರ್​ ಸಂಚರಿಸಲಿದೆ. 

ಆಟಕ್ಕಿಂತ ಪ್ರಯಾಣ ಮಾಡಿ ದಣಿಯಲಿದ್ದಾರಾ ಆಟಗಾರರು..?

ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ, ಬೆಂಗಳೂರಿನ NCAನಲ್ಲಿ ಸ್ಪೆಷಲ್ ಟ್ರೈನಿಂಗ್ ಕ್ಯಾಂಪ್​ ನಡೆಯಲಿದೆ. ಈ ಕ್ಯಾಂಪ್​ನಲ್ಲಿ  ಟೀಂ ಇಂಡಿಯಾ ಆಟಗಾರರು ಭಾಗವಹಿಸಲಿದ್ದಾರೆ. ಈ ಕ್ಯಾಂಪ್​ ನಂತರ ಕೋಚ್​, ಸಪೋರ್ಟ್ ಸ್ಟಾಫ್ ಸೇರಿ ಇಡೀ ತಂಡ ಮೊದಲ ವಾರ್ಮ್​ ಅಪ್ ಮ್ಯಾಚ್​ಗಾಗಿ ಗುವಾಹಟಿಗೆ ತೆರಳಲಿದ್ದಾರೆ. ಇಲ್ಲಿಂದ ಟೀಂ ಇಂಡಿಯಾದ ವಿಶ್ವಕಪ್ ಜರ್ನಿ ಆರಂಭವಾಗಲಿದೆ. 

ಭಾರತ ತಂಡದ ತೊರೆದ ಮೇಲೆ ಗ್ಯಾರಿ ಕರ್ಸ್ಟನ್‌ಗೆ ಏನನ್ನೂ ಗೆಲ್ಲಲು ಆಗಿಲ್ಲ; ಅಚ್ಚರಿ ಹೇಳಿಕೆ ನೀಡಿದ ಸೆಹ್ವಾಗ್..!

ವಿಶ್ವಕಪ್ ಮಹಾಯುದ್ಧದಲ್ಲಿ ಟೀಂ ಇಂಡಿಯಾದ ಅಸಲಿ ಅಭಿಯಾನ ಅಕ್ಟೋಬರ್ 8ರಿಂದ ಆರಂಭವಾಗಲಿದೆ. ಚೆನ್ನೈನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಮೊದಲ ಪಂದ್ಯವಾಡಲಿದೆ. ಇದಕ್ಕಾಗಿ ತಿರುವನಂತಪುರಂನಿಂದ ಚೆನ್ನೈಗೆ ವಿಮಾನದಲ್ಲಿ 621 ಕಿಮೀ ಸಂಚರಿಸಲಿದೆ.  ಎರಡನೇ ಪಂದ್ಯವನ್ನ ಆಪ್ಘಾನಿಸ್ತಾನ ವಿರುದ್ಧ ಆಡಲಿದ್ದು, ಚೆನ್ನೈನಿಂದ ದೆಹಲಿಗೆ 1,760 ಕಿಮೀ ಕ್ರಮಿಸಲಿದ್ದಾರೆ.  ಪಾಕಿಸ್ತಾನ ವಿರುದ್ಧದ ಮ್ಯಾಚ್​ಗಾಗಿ, ಆಟಗಾರರು ದೆಹಲಿಯಿಂದ ಅಹ್ಮಾದಾಬಾದ್​ಗೆ 775 ಕಿಮೀ ಪ್ರಯಾಣಿಸಲಿದ್ದಾರೆ. ನಂತರ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕಾಗಿ ಅಹಮದಾಬಾದ್​ನಿಂದ ಪುಣೆ 518 ಕಿಮೀ, ನ್ಯೂಜಿಲೆಂಡ್​ ವಿರುದ್ಧದ ಫೈಟ್​ಗಾಗಿ ಪುಣೆಯಿಂದ ಧರ್ಮಶಾಲಾಗೆ 1,543 ಕಿಮೀ, ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಧರ್ಮಶಾಲಾದಿಂದ ಲಕ್ನೋಗೆ 748 ಕಿಮೀ, ಅಲ್ಲಿಂದ ಕ್ವಾಲಿಫೈಯರ್​ ತಂಡದ ವಿರುದ್ಧ ಪಂದ್ಯಕ್ಕಾಗಿ 1,190 ಕಿಮೀ ಮುಂಬೈಗೆ, ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕಾಗಿ 1,652 ಕಿಮೀ ದೂರ ಇರೋ ಕೋಲ್ಕತ್ತಾಗೆ, ಅಲ್ಲಿಂದ ಕೊನೆಯ ಲೀಗ್ ಪಂದ್ಯವಾಡಲು ಕೋಲ್ಕತ್ತಾದಿಂದ ಬೆಂಗಳೂರಿಗೆ 1,560 ಕಿಲೋ ಮೀಟರ್​ ಪ್ರಯಾಣ ಮಾಡಲಿದೆ. ಒಟ್ಟು ವಿಮಾನ ಮಾರ್ಗದ ಕಿಲೋ ಮೀಟರ್ ಲೆಕ್ಕದ ಪ್ರಕಾರ ಟೀಂ ಇಂಡಿಯಾ 12,125 ಕಿಮೀ ಮೀಟರ್​ ಸಂಚರಿಸಲಿದೆ. 

ICC World Cup 2023 ಪಂದ್ಯಗಳ ಟಿಕೆಟ್ ಕೊಂಡುಕೊಳ್ಳುವುದು ಹೇಗೆ?

ದೇಶದ ವಿವಿಧ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾದ ಶೆಡ್ಯಲ್ ರೆಡಿಮಾಡಲಾಗಿದೆ. ಇದರಿಂದ ಆಯಾ ರಾಜ್ಯಗಳ ಅಭಿಮಾನಿಗಳಿಗೆ ಭಾರತದ ಪಂದ್ಯಗಳನ್ನ ವೀಕ್ಷಿಸುವ ಅವಕಾಶ ಸಿಗಲಿದೆ. ಆದ್ರೆ ಆಡೋದಕ್ಕಿಂತ ಭಾರತೀಯರಿಗೆ ಪ್ರಯಾಣವೇ ಸುಸ್ತು ತರಲಿದೆ. ಒಂದೊಂದು ಪಂದ್ಯಕ್ಕಾಗಿ ಸಾವಿರಾರು ಕಿಲೋ ಮೀಟರ್ ಪ್ರಯಾಣ ಬೆಳಸಬೇಕಿದೆ. ಹೋಗೋದು ಫ್ಲೈಟ್​ನಲ್ಲೇ. ಆದ್ರೂ ಪ್ರಯಾಣ ಎಷ್ಟು ಸುಸ್ತು ತರುತ್ತೆ ಅನ್ನೋದು ನಿಮಗೂ ಗೊತ್ತಿದೆ ಅಲ್ವಾ..?

ಗಗನಕ್ಕೇರಿದ ಫೈವ್​ ಸ್ಟಾರ್ ಹೋಟೆಲ್ ರೂಮ್ ಬಾಡಿಗೆ..!

ಇನ್ನು ಏಕದಿನ ವಿಶ್ವಕಪ್​ನಲ್ಲಿ ಬದ್ಧವೈರಿಗಳಾದ ಭಾರತ- ಪಾಕಿಸ್ತಾನ ಕಾದಾಟ ನಡೆಸಲಿವೆ. ಹೈವೋಲ್ಟೇಜ್ ಮ್ಯಾಚ್​ಗೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ಈ ಪಂದ್ಯದ ಕ್ರೇಜ್‌ ಈಗಾಗ್ಲೇ ಶುರುವಾಗಿದೆ. ಅಹಮದಾಬಾದ್​ನ ಫೈವ್​ಸ್ಟಾರ್ ಹೋಟೆಲ್​ಗಳು ಇದನ್ನೇ ಎನ್​ಕ್ಯಾಶ್ ಮಾಡಿಕೊಳ್ಳಲು ರೆಡಿಯಾಗಿವೆ. ಪಂದ್ಯ ವೀಕ್ಷಿಸಲು ಬರುವ ಫ್ಯಾನ್ಸ್​ ಗಮನದಲ್ಲಿಟ್ಟುಕೊಂಡು ಹೋಟೆಲ್​ ರೂಮ್ ಬಾಡಿಗೆಯನ್ನ 10 ಪಟ್ಟು ಹೆಚ್ಚಿಸಿವೆ. 

ಸಾಮಾನ್ಯವಾಗಿ 6,500 ರಿಂದ 10,000 ಇರುತ್ತಿದ್ದ ರೂಮ್ ಬಾಡಿಗೆ ಈಗ 50 ಸಾವಿರ ತಲುಪಿದೆ. ಈಗಾಗಲೇ ಬುಕ್ಕಿಂಗ್ ಕೂಡ ಸ್ಟಾರ್ಟ್ ಆಗಿದೆ. ಅಕ್ಟೋಬರ್​ 13 ರಿಂದ 16ರವರೆಗೆ ಇದೇ ದರ ಇರಲಿದೆ ಎನ್ನಲಾಗಿದೆ. ಭಾರತ ಫೈನಲ್ ಪ್ರವೇಶಿಸಿದ್ರೆ ಆಗಲೂ ಅಹಮದಾಬಾದ್​ ಹೊಟೇಲ್​ಗಳಿಗೆ ದುಡ್ಡಿನ ಸುರಿಮಳೆಯಾಗಲಿದೆ.

click me!