ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಭಾರತ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಕಾನ್ಪುರ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 7 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಬಾಂಗ್ಲಾದೇಶ ಎದುರು ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಜಯಿಸುತ್ತಿದ್ದಂತೆಯೇ ಟೀಂ ಇಂಡಿಯಾ ತವರಿನಲ್ಲಿ ಸತತ 18 ಸರಣಿಗಳನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ.
ಭಾರತ ತನ್ನ ತವರಿನಲ್ಲಿ ಕೊನೆಯ ಬಾರಿ ಟೆಸ್ಟ್ ಸರಣಿ ಸೋತಿದ್ದು 2012ರಲ್ಲಿ. ಭಾರತ ಕ್ರಿಕೆಟ್ ತಂಡವು 2013ರ ಬಳಿಕ ತವರಿನಲ್ಲಿ ಯಾವುದೇ ಸರಣಿಯನ್ನು ಸೋತಿಲ್ಲ. ಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ ವಿರುದ್ಧ ತಲಾ 3, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ದ ತಲಾ 2 ಹಾಗೂ ಆಫ್ಘಾನಿಸ್ತಾನ ವಿರುದ್ಧ ಒಂದು ಸರಣಿಯನ್ನು ಭಾರತ ಗೆದ್ದಿದೆ.
undefined
ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲದ ಬಾಬರ್ ಅಜಂರನ್ನು ನಾಯಕತ್ವದಿಂದ ಕಿತ್ತೆಸೆದ ಪಾಕಿಸ್ತಾನ!
ಭಾರತದ ಕಾನ್ಪುರ ಕೋಟೆ ಭದ್ರ
ಭಾರತ ತಂಡದ ಪಾಲಿಗೆ ಭದ್ರಕೋಟೆ ಎನಿಸಿಕೊಂಡಿರುವ ಕಾನ್ಪುರ ಕ್ರೀಡಾಂಗಣವನ್ನು ಭೇದಿಸಲು ಬಾಂಗ್ಲಾದೇಶಕ್ಕೂ ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ಕಾನ್ಪುರದಲ್ಲಿ 41 ವರ್ಷಗಳ ಗೆಲುವಿನ ಓಟವನ್ನು ಮುಂದುವರಿಸಿತು. 1983ರಲ್ಲಿ ಭಾರತ ತಂಡಕ್ಕೆ ವೆಸ್ಟ್‌ಇಂಡೀಸ್ ವಿರುದ್ಧ ಇನ್ನಿಂಗ್ಸ್ ಹಾಗೂ 83 ರನ್‌ಗಳ ಸೋಲು ಎದುರಾಗಿತ್ತು. ಆ ಬಳಿಕ ಟೀಂ ಇಂಡಿಯಾ ಕಾನ್ಪುರದಲ್ಲಿ 10 ಪಂದ್ಯಗಳನ್ನಾಡಿವೆ. ಈ ಪೈಕಿ 6ರಲ್ಲಿ ಗೆದ್ದಿದ್ದರೆ, 4 ಪಂದ್ಯಗಳು ಡ್ರಾಗೊಂಡಿವೆ. ಒಟ್ಟಾರೆ ಭಾರತ ತಂಡ ಈ ವರೆಗೂ ಕಾನ್ಪುರದಲ್ಲಿ ಆಡಿರುವ 24 ಪಂದ್ಯಗಳಲ್ಲಿ 8ರಲ್ಲಿ ಜಯಗಳಿಸಿದೆ. 3ರಲ್ಲಿ ಸೋತಿರುವ ತಂಡ, 13ರಲ್ಲಿ ಡ್ರಾ ಮಾಡಿಕೊಂಡಿವೆ.
ಇರಾನಿ ಕಪ್: ಮುಂಬೈಗೆ ರಹಾನೆ, ಶ್ರೇಯಸ್, ಸರ್ಫರಾಜ್ ಆಸರೆ
ಗರಿಷ್ಠ ಟೆಸ್ಟ್ ಗೆಲುವು: ಭಾರತ 4ನೇ ಸ್ಥಾನಕ್ಕೆ
ಟೆಸ್ಟ್‌ನಲ್ಲಿ ಗರಿಷ್ಠ ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನಕ್ಕೇರಿತು. ಬಾಂಗ್ಲಾದೇಶ ವಿರುದ್ಧ ಮಂಗಳವಾರದ ಜಯದೊಂದಿಗೆ ಭಾರತ ಟೆಸ್ಟ್ ಗೆಲುವನ್ನು 180ಕ್ಕೆ ಹೆಚ್ಚಿಸಿತು. ಈ ಮೂಲಕ ದಕ್ಷಿಣ ಆಫ್ರಿಕಾ(179 ಗೆಲುವು)ವನ್ನು ಹಿಂದಿಕ್ಕಿತು. 414 ಗೆಲುವಿನೊಂದಿಗೆ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 397, ವೆಸ್ಟ್‌ಇಂಡೀಸ್ 183 ಗೆಲುವು ಸಾಧಿಸಿ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.
52 ಓವರ್ ಆಡಿ ಗೆದ್ದ ಭಾರತ: 4ನೇ ಕನಿಷ್ಠ
ಭಾರತ ಈ ಪಂದ್ಯದಲ್ಲಿ ಕೇವಲ 312 ಎಸೆತ(52 ಓವರ್) ಆಡಿ ಗೆಲುವು ಸಾಧಿಸಿತು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ(ಎರಡೂ ಇನ್ನಿಂಗ್ಸ್ ಸೇರಿ) 4ನೇ ಕನಿಷ್ಠ. ಈ ಮೊದಲು 1935ರಲ್ಲಿ ವಿಂಡೀಸ್ ವಿರುದ್ಧ ಇಂಗ್ಲೆಂಡ್ ಕೇವಲ 276 ಎಸೆತಗಳನ್ನಾಡಿ ಪಂದ್ಯ ಗೆದ್ದಿತ್ತು. 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 281, 2005ರಲ್ಲಿ ಜಿಂಬಾಬ್ವೆ ವಿರುದ್ಧ ದ.ಆಫ್ರಿಕಾ 300 ಎಸೆತ ಎದುರಿಸಿ ಪಂದ್ಯ ಜಯಿಸಿತ್ತು.
08ನೇ ಪಂದ್ಯ: ಇದು ಟೆಸ್ಟ್ ಕ್ರಿಕೆಟ್‌ನ 2 ದಿನದಾಟ ಮಳೆಗೆ ರದ್ದಾದ ಬಳಿಕ ಪಂದ್ಯ ಗೆದ್ದ 8ನೇ ನಿದರ್ಶನ.
02ನೇ ಬ್ಯಾಟರ್: ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ 100+ ಸ್ಟ್ರೈಕ್‌ರೇಟ್‌ನಲ್ಲಿ ಅರ್ಧಶತಕ ಬಾರಿಸಿದ ಭಾರತದ 2ನೇ ಬ್ಯಾಟರ್ ಜೈಸ್ವಾಲ್. ವಿರೇಂದ್ರ ಸೆಹ್ವಾಗ್ 2011ರಲ್ಲಿ ವಿಂಡೀಸ್ ವಿರುದ್ಧ ಈ ಸಾಧನೆ ಮಾಡಿದ್ದರು.