ಇರಾನಿ ಕಪ್ ಟೂರ್ನಿಯಲ್ಲಿ ಶೇಷ ಭಾರತ ಎದುರು ರಣಜಿ ಟ್ರೋಫಿ ಚಾಂಪಿಯನ್ ಮುಂಬೈ ತಂಡವು ಮೊದಲ ದಿನವೇ ದಿಟ್ಟ ಪ್ರದರ್ಶನ ತೋರಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಲಖನೌ: ಶೇಷ ಭಾರತ(ರೆಸ್ಟ್ ಆಫ್ ಇಂಡಿಯಾ) ವಿರುದ್ಧದ ಇರಾನಿ ಕಪ್ ಪಂದ್ಯದಲ್ಲಿ ಮುಂಬೈ ತಂಡ ಮೊದಲ ದಿನ ಸಾಧಾರಣ ಮೊತ್ತ ಕಲೆಹಾಕಿದೆ. ನಾಯಕ ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ ಹಾಗೂ ಸರ್ಫರಾಜ್ ಖಾನ್ ಅರ್ಧಶತಕದ ನೆರವಿನಿಂದ ತಂಡ 4 ವಿಕೆಟ್ ಕಳೆದುಕೊಂಡು 237 ರನ್ ಗಳಿಸಿದೆ. ಮಂದ ಬೆಳಕಿನ ಕಾರಣ ಮೊದಲ ದಿನ ಕೇವಲ 68 ಓವರ್ ಆಟ ನಡೆಯಿತು.
ಟಾಸ್ ಸೋಲು ಫೀಲ್ಡಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಆರಂಭಿಕ ಆಘಾತಕ್ಕೊಳಗಾಯಿತು. ತಂಡದ ಸ್ಕೋರ್ 37 ಆಗುವಷ್ಟರಲ್ಲಿ ಪೃಥ್ವಿ ಶಾ(04), ಆಯುಶ್(19) ಹಾಗೂ ಹಾರ್ದಿಕ್ ತಮೋರೆ(00) ಪೆವಿಲಿಯನ್ ಸೇರಿದ್ದರು. ಆದರೆ 4ನೇ ವಿಕೆಟ್‌ಗೆ ಜೊತೆಯಾದ ರಹಾನೆ ಹಾಗೂ ಶ್ರೇಯಸ್ 102 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. 57 ರನ್ ಗಳಿಸಿದ್ದ ಶ್ರೇಯಸ್‌ಗೆ ಯಶ್ ದಯಾಳ್ ಪೆವಿಲಿಯನ್ ಹಾದಿ ತೋರಿದರು.
undefined
ಬಳಿಕ 5ನೇ ವಿಕೆಟ್‌ಗೆ ರಹಾನೆ ಜೊತೆಗೂಡಿದ ಸರ್ಫರಾಜ್ ತಂಡವನ್ನು ಮೇಲೆತ್ತಿದರು. ಈ ಜೋಡಿ 97 ರನ್ ಜೊತೆಯಾಟವಾಡಿದ್ದು, ಕ್ರೀಸ್ ಕಾಯ್ದುಕೊಂಡಿದೆ. ರಹಾನೆ 197 ಎಸೆತಗಳಲ್ಲಿ 86 ರನ್ ಗಳಿಸಿ ಶತಕದ ಅಂಚಿನಲ್ಲಿದ್ದು, ಸರ್ಫರಾಜ್(ಔಟಾಗದೆ 54) ಕೂಡಾ ಉತ್ತಮ ಲಯದಲ್ಲಿದ್ದಾರೆ. ಋತುರಾಜ್ ಗಾಯಕ್ವಾಡ್ ನಾಯಕತ್ವದ ಶೇಷ ಭಾರತ ಪರ ಮುಕೇಶ್ ಕುಮಾರ್ 3 ವಿಕೆಟ್ ಪಡೆದರು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ಟೀಂ ಇಂಡಿಯಾ ಅಗ್ರಸ್ಥಾನ ಭದ್ರ, ಫೈನಲ್ ರೇಸ್‌ನಲ್ಲಿ ಭಾರತ ಸೇರಿ 5 ತಂಡ
ಸ್ಕೋರ್: ಮುಂಬೈ 237/4 (ಮೊದಲ ದಿನದಂತ್ಯಕ್ಕೆ)
(ರಹಾನೆ 86*, ಶ್ರೇಯಸ್ 57, ಸರ್ಫರಾಜ್ 54, ಮುಕೇಶ್ 3-60)
ಅಂ-19 ಟೆಸ್ಟ್: ಆಸೀಸ್ ವಿರುದ್ಧ ಭಾರತಕ್ಕೆ ಲೀಡ್
ಚೆನ್ನೈ: ಇಲ್ಲಿ ನಡೆಯುತ್ತಿರುವ ಅಂಡರ್-19 ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಕಿರಿಯರ ತಂಡ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 293 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಮಂಗಳವಾರ ಭಾರತ 296 ರನ್‌ಗೆ ಆಲೌಟಾಗಿ, 3 ರನ್ ಮುನ್ನಡೆ ಪಡೆಯಿತು. ತಂಡದ ಪರ ವೈಭವ್ ಸೂರ್ಯವಂಶಿ 104, ವಿಹಾನ್ ಮಲ್ಹೋತ್ರಾ 76 ರನ್ ಗಳಿಸಿದರು. ವಿಶ್ವ ರಾಮಕುಮಾರ್ 4 ವಿಕೆಟ್ ಪಡೆದರು. ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿರುವ ಆಸೀಸ್ 2ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 110 ರನ್ ಗಳಿಸಿದ್ದು, 107 ರನ್ ಮುನ್ನಡೆಯಲ್ಲಿದೆ. ಮೊಹಮ್ಮದ್ ಇನಾನ್ 2 ವಿಕೆಟ್ ಪಡೆದರು.
ಮತ್ತೆ ಅಬ್ಬರಿಸಿದ ಜೈಸ್ವಾಲ್; ಕಾನ್ಪುರ ಟೆಸ್ಟ್ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ
58 ಎಸೆತಗಳಲ್ಲಿ ಶತಕ: ಅಂಡರ್-19 ಟೆಸ್ಟ್‌ನಲ್ಲಿ 13ರ ವೈಭವ್ ದಾಖಲೆ
ಚೆನ್ನೈ: ಭಾರತ ಅಂಡರ್-19 ತಂಡದ ಯುವ ಬ್ಯಾಟರ್ ವೈಭವ ಸೂರ್ಯವಂಶಿ ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ದ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಕೇವಲ 58 ಎಸೆತಗಳಲ್ಲೇ ಶತಕ ಬಾರಿಸಿದ್ದಾರೆ. ಈ ಮೂಲಕ ಅಂಡರ್-19 ಟೆಸ್ಟ್‌ನಲ್ಲಿ ಭಾರತದ ಅತಿ ವೇಗದ, ಒಟ್ಟಾರೆ ವಿಶ್ವದ 2ನೇ ವೇಗದ ಸೆಂಚುರಿ ಸಿಡಿಸಿದ ದಾಖಲೆ ಬರೆದಿದ್ದಾರೆ.
2005ರಲ್ಲಿ ಇಂಗ್ಲೆಂಡ್‌ನ ಮೋಯಿನ್ ಅಲಿ 56 ಎಸೆತದಲ್ಲಿ ಬಾರಿಸಿದ ಶತಕ ಈಗಲೂ ಕಿರಿಯರ ಕ್ರಿಕೆಟ್‌ನಲ್ಲಿ ವೇಗದ ಶತಕ ಎನಿಸಿದೆ. ವೈಭವ್ ಇನ್ನಿಂಗ್ಸ್‌ನಲ್ಲಿ 62 ಎಸೆತಗಳಲ್ಲಿ 14 ಬೌಂಡರಿ, 4 ಸಿಕರ್‌ನೊಂದಿಗೆ 104 ರನ್ ಸಿಡಿಸಿದರು.