
ದುಬೈ (ಸೆ.15) ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಕುತೂಹಲ ಜೊತೆಗೆ ಭಾರಿ ಕೋಲಾಹಲಕ್ಕೂ ಕಾರಣವಾಗಿತ್ತು. ಪ್ರತಿ ಮುಖಾಮುಖಿಯಂತೆ ಈ ಬಾರಿಯೂ ಭಾರತ ಪಾಕಿಸ್ತಾನ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಆದರೆ ಪಹೆಲ್ಗಾಂ ದಾಳಿಕೋರ ದೇಶದ ಜೊತೆ ಎಲ್ಲಾ ವ್ಯವಹಾರ ಬಂದ್ ಮಾಡಿರುವ ಭಾರತ, ಕ್ರಿಕೆಟ್ ಯಾಕೆ ಅನ್ನೋ ಪ್ರಶ್ನೆ ಬಂದಿತ್ತು. ಹಲವರು ಭಾರತ ಹಾಗೂ ಪಾಕಿಸ್ತಾನ ಪಂದ್ಯ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಹಲವರು ಭಾರಿ ಪ್ರತಿಭಟನೆ ಮಾಡಿದ್ದರು. ಇದರ ನಡುವೆ ಟೀಂ ಇಂಡಿಯಾ ಬದ್ಧವೈರಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿದ್ದು ಅಬ್ಬರಿಸಿತ್ತು. 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ ಇಡೀ ಪಂದ್ಯದಲ್ಲಿ ಟೀಂ ಇಂಡಿಯಾ ಮೌನವಾಗಿ ಪ್ರತಿಭಟನೆ ನಡೆಸಿತ್ತು. ಗೆಲುವಿನ ಮೂಲಕ ಮಾತ್ರ ಸೇಡು ತೀರಿಸಿಕೊಂಡಿದ್ದಲ್ಲ, ಇದರ ಜೊತೆಗೆ ಹಂತ ಹಂತವಾಗಿ ಭಾರತ ತಂಡ ತನ್ನ ಆಕ್ರೋಶ, ಪ್ರತಿಭಟನೆ ಹೊರಹಾಕಿತ್ತು. ಪಂದ್ಯ ಗೆದ್ದ ಬಳಿಕವೂ ಟೀಂ ಇಂಡಿಯಾ ಆಟಗಾರರು ಕೈಕುಲದೇ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಗೆಲುವಿನ ಬಳಿಕ ಪಾಕಿಸ್ತಾನ ತಂಡವನ್ನು ಭಾರತ ಕಡೆಗಣಿಸಿತ್ತು. ಸೂರ್ಯಕುಮಾರ್ ಯಾದವ್ ಮ್ಯಾಚ್ ವಿನ್ನಿಂಗ್ ಸಿಕ್ಸರ್ ಮೂಲಕ ಪಂದ್ಯ ಕೊನೆಗೊಳಿಸಿದರು. ಬಳಿಕ ಗೆಲುವಿನ ಸಂಭ್ರಮಾಚರಣೆಯೊಂದಿಗೆ ಸೂರ್ಯಕುಮಾರ್ ಹಾಗೂ ಶಿವಂ ದುಬೆ ಪೆವಿಲಿಯನ್‌ಗೆ ಮರಲಿದರು. ಇತ್ತ ಡೌಗೌಟ್‌ನಲ್ಲಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಸಂಭ್ರಮದೊಂದಿಗೆ ಪೆವಿಲಿಯನ್‌ಗೆ ಮರಳಿದ್ದರು. ಮೈದಾನದಲ್ಲಿದ್ದ ಪಾಕಿಸ್ತಾನ ತಂಡ ಅಂಪೈರ್ ಹಾಗೂ ತನ್ನ ತಂಡದ ಇತರ ಆಟಗಾರರು,ಸಿಬ್ಬಂದಿಗಳ ಕೈಕುಲುಕಿ ಭಾರತ ತಂಡಕ್ಕಾಗಿ ಕಾದರೂ ಆಟಗಾರರು ಮೈದಾನಕ್ಕೆ ಬರಲೇ ಇಲ್ಲ. ಪಾಕಿಸ್ತಾನ ಅದೆಷ್ಟೇ ಹೊತ್ತು ಕಾದರೂ ಟೀಂ ಇಂಡಿಯಾ ಕ್ರಿಕೆಟಿಗರು ಪಾಕಿಸ್ತಾನ ಕ್ರಿಕೆಟಿಗರ ಜೊತೆ ಕೈಕುಲುಕಲು ನಿರಾಕರಿಸಿತ್ತು.
ಪಾಕ್ ವಿರುದ್ಧ ಗೆದ್ದು ಪಹಲ್ಗಾಂ ಸಂತ್ರಸ್ತರು, ಸೇನೆಗೆ ಅರ್ಪಿಸಿದ ಭಾರತ ಕ್ರಿಕೆಟ್ ತಂಡ!
ಪಾಕಿಸ್ತಾನ ಕೋಚ್, ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವರು ಭಾರತದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ಕ್ರೀಡಾ ಸ್ಪೂರ್ತಿ ಮರೆತಿದೆ ಎಂದಿದ್ದಾರೆ. ಪಾಕಿಸ್ತಾನ ಕೆಲ ಹೊತ್ತು ಹ್ಯಾಂಡ್‌ಶೇಕ್‌ಗಾಗಿ ಕಾದಿದೆ. ಆದರೆ ಭಾರತ ಆಟಾರರು ಬರಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಭಾರತೀಯರು ಟೀಂ ಇಂಡಿಯಾ ನಡೆ ಸರಿಯಾಗಿದೆ ಎಂದಿದ್ದಾರೆ. ಒಂದೆಡೆ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡಿ ಭಾರತದ ಮೇಲೆ ನುಸುಳಲು ಅವಕಾಶ ನೀಡುವ ದೇಶ, ಜೊತೆಗೆ ಉಗ್ರ ದಾಳಿ ನಡೆಸಿ ಅಮಾಯಕರ ಹತ್ಯೆಗೈದ ದೇಶದ ಜೊತೆ ಕೈಕುಲುವುದು ಸರಿಯಲ್ಲ. ಭಾರತ ತಗೆದೆಕೊಂಡು ನಿರ್ಧಾರ ಸರಿಯಾಗಿದೆ ಎಂದು ಭಾರತೀಯರ ಬೆಂಬಲ ವ್ಯಕ್ತಪಡಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಟಾಸ್ ವೇಳೆಯೂ ನಾಯಕ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ನಾಯಕ ಸಲ್ಮಾನ್ ಆಘಾಗೆ ಕೈಕುಲಕಲಿಲ್ಲ. ಪಾಕಿಸ್ತಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಪಾಕಿಸ್ತಾನ ನಾಯಕ ಹ್ಯಾಂಡ್ ಶೇಕ್ ಮಾಡುವ ಪ್ರಯತ್ನ ಮಾಡಿದರೂ ಸೂರ್ಯಕುಮಾರ್ ಯಾದವೂ ತಿರುಗಿಯೂ ನೋಡಲಿಲ್ಲ. ಈ ಮೂಲಕ ಸೂರ್ಯಕುಮಾರ್ ಯಾದವ್ ತಮ್ಮ ಆಕ್ರೋಶವನ್ನು ಆರಂಭದಲ್ಲೇ ವ್ಯಕ್ತಪಡಿಸಿದ್ದರು.
ಭಾರತ ಎದುರು ಪಾಕ್ ಪಾಲಿಗೆ ವಿಲನ್ ಆದ ಅವರದ್ದೇ ದೇಶದ 5 ಆಟಗಾರರಿವರು
ಇಡೀ ಪಂದ್ಯದಲ್ಲಿ ಪಾಕಿಸ್ತಾನ ಜೊತೆಗೆ ಭಾರತೀಯ ಆಟಗಾರರು ಒಂದು ಮಾತು ಆಡಿಲ್ಲ. ಪಾಕಿಸ್ತಾನ ಕ್ರಿಕೆಟಿಗರನ್ನೂ ನೋಡುವ, ಗುರಾಯಿಸುವ ಪ್ರಯತ್ನವೂ ಮಾಡಿಲ್ಲ. ಪಾಕಿಸ್ತಾನ ಕ್ರಿಕೆಟಿಗರು ಭಾರತದ ನಡೆಯಿಂದ ಅಚ್ಚರಿಗೊಂಡಿದ್ದಾರೆ. ಇಷ್ಟೇ ಅಲ್ಲ ಭಾರತದ ವಿರುದ್ಧ ಪಂದ್ಯ ಆಡಲು ಹರಸಾಹಸ ಪಟ್ಟಿದ್ದಾರೆ. ಹಂತ ಹಂತದಲ್ಲಿ ಪಾಕಿಸ್ತಾನ ತಂಡವನ್ನು ಕಡೆಗಣಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.