
ಬೆಂಗಳೂರು(ನ.23): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಈ ಆಟಗಾರನಿಗೆ ಚಾನ್ಸ್ ಸಿಗೋದು ಅನುಮಾನವಿತ್ತು. ಆದ್ರೀಗ, ಪ್ಲೇಯಿಂಗ್ ಇಲೆವೆಲ್ ಪ್ಲೇಸ್ ಫಿಕ್ಸ್ ಆಗಿದೆ. ಇನ್ನು ಟೀಮ್ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಾದ್ರೆ, ಆಂಗ್ಲರ ವಿರುದ್ಧ ಈ ಆಟಗಾರ ಅಬ್ಬರಿಸಲೇಬೇಕಿದೆ. ಅಷ್ಟಕ್ಕೂ ನಾವ್ಯಾರ ಬಗ್ಗೆ ಹೇಳ್ತಿದ್ದೀವಿ..? ಅನ್ಕೊಂಡ್ರಾ..? ಈ ಸ್ಟೋರಿ ನೋಡಿ ನಿಮಿಗೆ ಗೊತ್ತಾಗುತ್ತೆ...!!
ಲಯನ್ಸ್ ವಿರುದ್ಧದ ಶತಕ ಶ್ರಿರಾಮನಿಗೆ ಸಮರ್ಪಣೆ..!
ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಗೆ ರೆಡಿಯಾಗಿದೆ. ಈ ವರ್ಷ ರೋಹಿತ್ ಶರ್ಮಾ ಪಡೆ ಆಡ್ತಿರೋ ಮೊದಲ ಟೆಸ್ಟ್ ಸರಣಿ ಇದಾಗಿದೆ. ಜನವರಿ 25ರಿಂದ ಹೈದ್ರಾಬಾದ್ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ. ಪ್ಲೇಯಿಂಗ್ ಇಲೆವೆನ್ ಆಯ್ಕೆ, ಕ್ಯಾಪ್ಟನ್ ರೋಹಿತ್ ಆ್ಯಂಡ್ ಕೋಚ್ ರಾಹುಲ್ ದ್ರಾವಿಡ್ ಚಿಂತೆ ಹೆಚ್ಚಿಸಿದೆ.
ಯೆಸ್, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸ್ಥಾನದಲ್ಲಿ ಕೆ.ಎಸ್ ಭರತ್ ಮತ್ತು ಧೃವ್ ಜುರೆಲ್ ಮಧ್ಯೆ ಕಾಂಪಿಟೇಷನ್ ಏರ್ಪಟ್ಟಿದೆ. ಈ ಇಬ್ಬರಲ್ಲಿ ಯಾರನ್ನ ಆಡಿಸ್ಬೇಕು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಆದ್ರೆ, ಈ ನಡುವೆ ಕೆ.ಎಸ್ ಭರತ್ ಭಾರತ A ತಂಡದ ಪರ ಭರ್ಜರಿ ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭರತ್ ಸೆಂಚುರಿ ಬಾರಿಸಿದ್ದಾರೆ. 165 ಎಸೆತಗಳಲ್ಲಿ ಆ ಮೂಲಕ ಇಂಗ್ಲೆಂಡ್ ವಿರುದ್ಧದ ಮೊದಲ ಟಸ್ಟ್ನ ಪ್ಲೇಯಿಂಗ್ ಇಲೆವೆನ್ ಸ್ಥಾನಕ್ಕೆ ಟವಲ್ ಹಾಕಿದ್ದಾರೆ. ಇನ್ನು ತಮ್ಮ ಶತಕವನ್ನ ಭರತ್ ಪ್ರಭು ಶ್ರೀರಾಮಚಂದ್ರನಿಗೆ ಅರ್ಪಿಸಿದ್ದಾರೆ.
ಇಂಡಿಯಾ-ಇಂಗ್ಲೆಂಡ್ ಟೆಸ್ಟ್ ಸಮರ: ಕೊಹ್ಲಿ ಅಲಭ್ಯತೆ ಇಂಗ್ಲೆಂಡ್ ಪಾಲಿಗೆ ವರ..!
ವಿಕೆಟ್ ಕೀಪಿಂಗ್ಸ್‌ನಲ್ಲಿ ಓಕೆ, ಬ್ಯಾಟಿಂಗ್‌ನಲ್ಲಿ ಫ್ಲಾಪ್ ಶೋ..!
ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾಗೆ ಎಂಟ್ರಿ ನೀಡಿದ ಭರತ್, ಈವರೆಗು ಹೇಳಿಕೊಳ್ಳೋ ಪ್ರದರ್ಶನ ನೀಡಿಲ್ಲ. ವಿಕೆಟ್ ಕೀಪಿಂಗ್ನಲ್ಲಿ ಮಾತ್ರ ಮಿಂಚುತ್ತಿದ್ದಾರೆ. ಬ್ಯಾಟಿಂಗ್‌ನಲ್ಲಿ ಮಾತ್ರ ಅಟ್ಟರ್ ಫ್ಲಾಫ್ ಶೋ ನೀಡ್ತಿದ್ದಾರೆ. ಈವರೆಗು 5 ಪಂದ್ಯಗಳನ್ನಾಡಿರೋ ಭರತ್, ಕೇವಲ 18.42ರ ಸರಾಸರಿಯಲ್ಲಿ 129 ರನ್ ಗಳಿಸಿದ್ದಾರೆ. ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಕೈಬಿಡಲಾಗಿತ್ತು. ಆದ್ರೀಗ, ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಸಾಮರ್ಥ್ಯ ಪ್ರೂವ್ ಮಾಡಿಕೊಳ್ಳೋಕೆ ಲಾಸ್ಟ್ ಚಾನ್ಸ್..?
ಯೆಸ್, ಇದೇ ಮೊದಲ ಬಾರಿ ಟೀಂ ಇಂಡಿಯಾಗೆ ಆಯ್ಕೆಯಾಗಿರೋ ಧೃವ್, ಬ್ಯಾಟಿಂಗ್ & ಬೌಲಿಂಗ್ ಎರಡರಲ್ಲೂ ಮಿಂಚಬಲ್ಲರು. ಫಸ್ಟ್ ಕ್ಲಾಸ್ ಅಂಕಿಅಂಶಗಳು ವಿಚಾರದಲ್ಲಿ ಭರತ್‌ಗಿಂತ ಧೃವ್ ಮುಂದಿದ್ದಾರೆ. ಈವರೆಗು 19 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿ, 46.47ರ ಸರಾಸರಿಯಲ್ಲಿ 790 ರನ್ ಕಲೆಹಾಕಿದ್ದಾರೆ. ಇದ್ರಲ್ಲಿ 1 ಶತಕ ಮತ್ತು 5 ಅರ್ಧಶತಕ ಸೇರಿವೆ. ವಿಕೆಟ್ ಕೀಪಿಂಗ್ನಲ್ಲೂ ಧೃವ್ ಬೆಸ್ಟ್ ಎನಿಸಿದ್ದಾರೆ.
ಭರತ್ ಮತ್ತು ಧೃವ್ ಜೊತೆಗೆ ಕೆ.ಎಲ್ ರಾಹುಲ್ ಕೂಡ ವಿಕೆಟ್ ಕೀಪರ್ ಆಪ್ಷನ್ ಆಗಿದ್ದಾರೆ. ಆದ್ರೆ, ರಾಹುಲ್ಗೆ ಸ್ಪಿನ್ ಬೌಲಿಂಗ್ನಲ್ಲಿ ಕೀಪಿಂಗ್ ಮಾಡಿದ ಅನುಭವವಿಲ್ಲ. ಇದರಿಂದ ಒಟ್ಟಿನಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಧೃವ್ ಮತ್ತು ಭರತ್ ಮಧ್ಯೆ ಪೈಪೋಟಿ ಜೋರಾಗಿದೆ. ಆದ್ರೆ, ಅನುಭವದ ಆಧಾರದ ಮೇಲೆ ಕೆ.ಎಸ್ ಭರತ್‌ಗೆ ಚಾನ್ಸ್ ಸಿಗೋ ಸಾಧ್ಯತೆಯಿದೆ. ಒಂದು ವೇಳೆ ಈ ಬಾರಿಯೂ ಭರತ್ ತಮ್ಮ ತಾಕತ್ತೂ ಪ್ರೂವ್ ಮಾಡದೇ ಇದ್ದರೆ, ಟೀಮ್ ಇಂಡಿಯಾದ ಡೋರ್ ಕಂಪ್ಲೀಟ್ ಕ್ಲೋಸ್ ಪಕ್ಕಾ..!
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.