ಆಸ್ಟ್ರೇಲಿಯಾದ ಸ್ಪೋಟಕ ಎಡಗೈ ಬ್ಯಾಟರ್ ಡೇವಿಡ್ ವಾರ್ನರ್, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ "ಜೈ ಶ್ರೀರಾಮ್ ಇಂಡಿಯಾ" ಎಂದು ಬರೆದು ಪ್ರಭು ಶ್ರೀರಾಮಚಂದ್ರನ ಪೋಟೋವನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಬೆಂಗಳೂರು: ಇಡೀ ದೇಶವೇ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಟಾಪನೆ ಸಂಭ್ರಮದಲ್ಲಿ ಮಿಂದೆದ್ದಿದೆ. ದೇಶದ ಮೂಲೆ ಮೂಲೆಗಳಲ್ಲೂ ಜೈ ಶ್ರೀರಾಮ್ ಘೋಷಣೆಗಳು ಮೊಳಗಿವೆ. ಸುಮಾರು 500 ವರ್ಷಗಳ ಭಾರತೀಯರ ಕನಸು ನನಸಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಸೋಮವಾರ ಮಧ್ಯಾಹ್ನ 12.30ರ ಶುಭ ಮುಹೂರ್ತದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆದಿದೆ. ಇದೀಗ ಭಾರತದ ಮೇಲೆ ವಿಶೇಷ ಒಲವು ಹೊಂದಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್, ಸಾಮಾಜಿಕ ಜಾಲತಾಣದಲ್ಲಿ ಈ ಶುಭ ಕಾರ್ಯಕ್ರಮಕ್ಕೆ ವಿಶೇಷ ಸಂದೇಶ ರವಾನಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಮತ್ತೊಮ್ಮೆ ಭಾರತೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಆಸ್ಟ್ರೇಲಿಯಾದ ಸ್ಪೋಟಕ ಎಡಗೈ ಬ್ಯಾಟರ್ ಡೇವಿಡ್ ವಾರ್ನರ್, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ "ಜೈ ಶ್ರೀರಾಮ್ ಇಂಡಿಯಾ" ಎಂದು ಬರೆದು ಪ್ರಭು ಶ್ರೀರಾಮಚಂದ್ರನ ಪೋಟೋವನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
undefined
ಭಾರತೀಯರ ದತ್ತು ಪುತ್ರ ಡೇವಿಡ್ ವಾರ್ನರ್: ಮೂಲತಃ ಆಸ್ಟ್ರೇಲಿಯಾ ಕ್ರಿಕೆಟಿಗನಾಗಿದ್ದರೂ ಸಹಾ, ಡೇವಿಡ್ ವಾರ್ನರ್, ಭಾರತದ ಕಲೆ, ಸಂಸ್ಕೃತಿಯನ್ನು ಗೌರವಿಸುತ್ತಲೇ ಬಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಕ್ರಿಯ ಸದಸ್ಯರಾಗಿರುವ ಡೇವಿಡ್ ವಾರ್ನರ್, ದೀಪಾವಳಿ ಸೇರಿದಂತೆ ಭಾರತೀಯರ ಹಬ್ಬ ಹರಿದಿನಗಳಿಗೆ ಶುಭಕೋರುವ ಮೂಲಕ ಒಂದು ರೀತಿ ಭಾರತದ ದತ್ತುಪುತ್ರ ಎಂದೇ ಸೋಷಿಯಲ್ ಮೀಡಿಯಾದಲ್ಲಿ ಕರೆಸಿಕೊಳ್ಳುತ್ತಿದ್ದಾರೆ.
ಅಯೋಧ್ಯೆಯಿಂದ 1,000 ಕಿಮೀ ದೂರದಲ್ಲಿ ಮತ್ತೊಂದು ರಾಮ ಮಂದಿರ!
ಇದಷ್ಟೇ ಅಲ್ಲದೇ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಅಭಿಮಾನಿಯಾಗಿರುವ ಡೇವಿಡ್ ವಾರ್ನರ್, ಸಮಯ ಸಿಕ್ಕಾಗಲೆಲ್ಲಾ ಪುಷ್ಪಾ ಸಿನಿಮಾದ ಹಾಡುಗಳಿಗೆ, ಡೈಲಾಗ್‌ಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ ಗಮನ ಸೆಳೆಯುತ್ತಾ ಬಂದಿದ್ದಾರೆ. 2016ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಾಯಕನಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಡೇವಿಡ್ ವಾರ್ನರ್, ಸದ್ಯ 2024ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ರಾಮಮಂದಿರ ಪ್ರಾಣಪ್ರತಿಷ್ಠಾಪನೆಯಲ್ಲಿ ಭಾಗವಹಿಸಲು ಸಾವಿರಾರು ಅತಿ ಗಣ್ಯರನ್ನು ಆಹ್ವಾನಿಸಲಾಗಿತ್ತು. ಅದರಲ್ಲಿ ಬಹುತೇಕರು ಟ್ರಸ್ಟ್‌ನ ಕರೆಗೆ ಓಗೊಟ್ಟು ಸಮಾರಂಭಕ್ಕೆ ಸಾಕ್ಷಿಯಾದರು.
ಪ್ರಮುಖವಾಗಿ ನಟರಾದ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಅನುಪಮ್ ಖೇರ್, ವಿವೇಕ್ ಒಬೆರಾಯ್, ರಣದೀಪ್ ಹೂಡಾ, ವಿಕ್ಕಿ ಕೌಶಲ್, ಅಜಯ್ ದೇವಗನ್, ರಾಜ್‌ಕುಮಾರ್ ಹಿರಾನಿ, ರಣ್‌ಬೀರ್ ಕಪೂರ್, ಸುಭಾಷ್ ಗಾಯ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಕಂಗನಾ ರಾಣಾವತ್, ಶೆಫಾಲಿ ಷಾ, ಹೇಮಾ ಮಾಲಿನಿ, ಕತ್ರಿನಾ ಕೈಫ್, ಮಾಧುರಿ ದೀಕ್ಷಿತ್, ಆಲಿಯಾ ಭಟ್, ಪಾಲ್ಗೊಂಡಿದ್ದರು. ಹಾಗೆಯೇ ಕಾರ್ಯಕ್ರಮದಲ್ಲಿ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಜರಿದ್ದರು.