ವಿರಾಟ್ ಕೊಹ್ಲಿ ಎಂತಹ ಗ್ರೇಟ್ ಬ್ಯಾಟ್ಸ್‌ಮನ್ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದರಲ್ಲೂ ತವರಿನಲ್ಲಿ ಕೊಹ್ಲಿಯನ್ನ ಕಟ್ಟಿಹಾಕೋದು ಸುಲಭವಲ್ಲ. ಟೆಸ್ಟ್‌ನಲ್ಲಿ ರನ್‌ಮಷಿನ್ ಭಾರತದಲ್ಲಿ ಸೂಪರ್ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. 77 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿ, 60.05ರ ಸರಾಸರಿಯಲ್ಲಿ 14 ಶತಕ ಮತ್ತು 12 ಅರ್ಧಶತಕ ಸಹಿತ 4,144 ರನ್ ಕಲೆಹಾಕಿದ್ದಾರೆ.
ಬೆಂಗಳೂರು(ಡಿ.23) ವೈಯಕ್ತಿಕ ಕಾರಣದಿಂದ ಇಂಗ್ಲೆಂಡ್ ಟೆಸ್ಟ್ ಸರಣಿ ಮೊದಲೆರೆಡು ಪಂದ್ಯಗಳಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ವಿರಾಟ್ ಅನುಪಸ್ಥಿತಿ ಟೀಂ ಇಂಡಿಯಾಗೆ ದೊಡ್ಡ ಹೊಡೆತ ನೀಡಿದೆ. ಮತ್ತೊಂದೆಡೆ ಇಂಗ್ಲೆಂಡ್‌ಗೆ ವರವಾಗಿ ಪರಿಣಮಿಸಿದೆ. ಅದ್ಹೇಗೆ ಡಿಟೇಲ್ ಆಗಿ ಹೇಳ್ತೀವಿ, ಈ ಸ್ಟೋರಿ ನೋಡಿ..!
ಇಂಡಿಯಾ-ಇಂಗ್ಲೆಂಡ್ ಟೆಸ್ಟ್ ಸಮರ..!
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ನಂತರ, ಮತ್ತೊಂದು ಟೆಸ್ಟ್ ಫೈಟ್‌ಗೆ ಟೀಂ ಇಂಡಿಯಾ ಸಿದ್ಧವಾಗಿದೆ. ಇನ್ನೆರೆಡು ದಿನಗಳಲ್ಲಿ ಇಂಡಿಯಾ - ಇಂಗ್ಲೆಂಡ್ ಟೆಸ್ಟ್ ಕದನ ಆರಂಭವಾಗಲಿದೆ. WTC ಪಾಯಿಂಟ್ ಟೇಬಲ್ ದೃಷ್ಟಿಯಿಂದ ಎರಡೂ ತಂಡಳಿಗೂ ಈ ಸರಣಿ ಮಹತ್ವದ್ದಾಗಿದೆ. ತವರಿನಲ್ಲಿ ಟೀಂ ಇಂಡಿಯಾವನ್ನ ಸೋಲಿಸೋದು ಸುಲಭದ ಮಾತಲ್ಲ.
ಇಂಗ್ಲೆಂಡ್ 10 ವರ್ಷಗಳಿಂದ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. 2013ರಲ್ಲಿ ಅಲಿಸ್ಟರ್ ಕುಕ್ ನಾಯಕತ್ವದಲ್ಲಿ ಟೀಂ ಇಂಡಿಯಾವನ್ನ ಬಗ್ಗುಬಡಿದಿತ್ತು. ಅದರ ನಂತರ ಆಂಗ್ಲರ ಸೈನ್ಯ ಎರಡು ಬಾರಿ ಭಾರತದಲ್ಲಿ ಟೆಸ್ಟ್ ಸಮರದಲ್ಲಿ ಕಾದಾಡಿತ್ತು. ಈ ಎರಡೂ ಸರಣಿಗಳಲ್ಲೂ ಭಾರತ ದಿಗ್ಜಿಜಯ ಸಾಧಿಸಿತ್ತು. ಇದ್ರಿಂದ ಈ ಬಾರಿ ಹೇಗಾದ್ರೂ ಮಾಡಿ, ರೋಹಿತ್ ಶರ್ಮಾ ಪಡೆಯನ್ನ ಸೋಲಿಸಲೇಬೇಕು ಅಂತ ಪಣ ತೊಟ್ಟಿದೆ. ಸರಣಿಯ ಮೊದಲೆರೆಡು ಪಂದ್ಯಗಳಿಂದ ವಿರಾಟ್ ಕೊಹ್ಲಿ ಹೊರಗುಳಿದಿರೋದು, ಇಂಗ್ಲೆಂಡ್ ಸೈನ್ಯದ ಆತ್ಮವಿಶ್ವಾಸ ಹೆಚ್ಚಿಸಿದೆ. ಆದ್ರೆ, ಟೀಂ ಇಂಡಿಯಾಗೆ ದೊಡ್ಡ ಹೊಡೆತ ನೀಡಿದೆ.
ತವರಿನಲ್ಲಿ ಸೂಪರ್ ಟ್ರ್ಯಾಕ್ ರೆಕಾರ್ಡ್..!
ವಿರಾಟ್ ಕೊಹ್ಲಿ ಎಂತಹ ಗ್ರೇಟ್ ಬ್ಯಾಟ್ಸ್‌ಮನ್ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದರಲ್ಲೂ ತವರಿನಲ್ಲಿ ಕೊಹ್ಲಿಯನ್ನ ಕಟ್ಟಿಹಾಕೋದು ಸುಲಭವಲ್ಲ. ಟೆಸ್ಟ್‌ನಲ್ಲಿ ರನ್‌ಮಷಿನ್ ಭಾರತದಲ್ಲಿ ಸೂಪರ್ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. 77 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿ, 60.05ರ ಸರಾಸರಿಯಲ್ಲಿ 14 ಶತಕ ಮತ್ತು 12 ಅರ್ಧಶತಕ ಸಹಿತ 4,144 ರನ್ ಕಲೆಹಾಕಿದ್ದಾರೆ.
ಇನ್ನು ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಅಂಕಿಅಂಶಗಳೂ ಅದ್ಬುತವಾಗಿವೆ. 13 ಟೆಸ್ಟ್ಗಳಲ್ಲಿ 56.38ರ ಸರಾಸರಿಯಲ್ಲಿ 3 ಶತಕ ಸೇರಿ ಸಾವಿರಕ್ಕೂ ಹೆಚ್ಚು ರನ್‌ಗಳಿಸಿದ್ದಾರೆ. ಅಲ್ಲದೇ, ಮೊದಲ ಟೆಸ್ಟ್‌ಗೆ ವೇದಿಕೆಯಾಗ್ತಿರೋ ಹೈದ್ರಾಬಾದ್ನಲ್ಲೂ ಮಿಂಚಿದ್ದಾರೆ. 5 ಇನ್ನಿಂಗ್ಸ್ಗಳಿಂದ 75.80ರ ಸರಾಸರಿಯಲ್ಲಿ 379 ರನ್ ಬಾರಿಸಿದ್ದಾರೆ. ಇದ್ರಲ್ಲಿ ಒಂದು ಡಬಲ್ ಸೆಂಚುರಿಯೂ ಸೇರಿದೆ. 2ನೇ ಟೆಸ್ಟ್‌ಗೆ ವಿಶಾಖಪಟ್ಟಣಂನ YSR ರಾಜಶೇಖರ್ ರೆಡ್ಡಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ಈ ಅಂಗಳದಲ್ಲೂ ಕೊಹ್ಲಿ ಅಬ್ಬರಿಸಿದ್ದಾರೆ. 4 ಇನ್ನಿಂಗ್ಸ್ಗಳಿಂದ 99.66ರ ಸರಾಸರಿಯಲ್ಲಿ 1 ಶತಕ ಮತ್ತು 1 ಅರ್ಧಶತಕ ಸಹಿತ 299 ರನ್ ದಾಖಲಿಸಿದ್ದಾರೆ.
ಈ ಅಂಕಿಅಂಶಗಳು ಪಕ್ಕಕ್ಕಿಟ್ಟು ನೋಡಿದ್ರೆ, ಕೊಹ್ಲಿ ಟೀಮ್ ಇಂಡಿಯಾದ ಸೀನಿಯರ್ ಪ್ಲೇಯರ್. ಕೊಹ್ಲಿಯ ಆಟ, ಅನುಭವ ತಂಡದ ದೊಡ್ಡ ಪ್ಲಸ್ ಪಾಯಿಂಟ್. ರನ್‌ಮಷಿನ್ ತಂಡದಲ್ಲಿದ್ರೆ ಆಪೋಜಿಷನ್ ಟೀಮ್ಗೆ ಚಿಂತೆ ತಪ್ಪಿದ್ದಲ್ಲ. ಹಲವು ಬಾರಿ ಸಂಕಷ್ಟದ ಸಂದರ್ಭದಲ್ಲಿ ಕೊಹ್ಲಿ ತಂಡಕ್ಕೆ ನೆರವಾಗಿದ್ದಾರೆ. ಸೂಪರ್ ಇನ್ನಿಂಗ್ಸ್‌ಗಳ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಮಿಂಚಿದ್ರು.
ಬ್ಯಾಟಿಂಗ್ ಅಷ್ಟೇ ಅಲ್ಲ, ನಾಯಕತ್ವದಲ್ಲೂ ರೋಹಿತ್ಗೆ ನೆರವಾಗ್ತಾರೆ. ಮೈದಾನದಲ್ಲ ಸದಾ ಆ್ಯಕ್ಟಿವ್ ಆಗಿದ್ದು, ಸಹ ಆಟಗಾರರನ್ನ ಎಂಗೇಜ್ ಆಗಿ ಇಡ್ತಾರೆ. ಎದುರಾಳಿಗಳ ಸ್ಲೆಡ್ಜಿಂಗ್ ಅಸ್ತ್ರಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಕೌಂಟರ್ ಕೊಡ್ತಾರೆ. ಈ ಎಲ್ಲಾ ಕಾರಣಗಳಿಂದ ವಿರಾಟ್ ಕೊಹ್ಲಿ ಅನುಪಸ್ಥಿತಿ ಇಂಗ್ಲೆಂಡ್‌ಗೆ ವರವಾಗಲಿದೆ. ಟೀಂ ಇಂಡಿಯಾಗೆ ಹಿನ್ನಡೆಯಾಗಲಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್